Sunday, November 24, 2024

Latest Posts

ಭಾರತ-ಪಾಕಿಸ್ತಾನದ ನಡುವೆ ರಾಜೀಯಾಗಬೇಕು: ಮೆಹಬೂಬಾ ಮುಫ್ತಿ

- Advertisement -

political News: ಕಾಶ್ಮೀರದಲ್ಲಿ ನಡೆಯುವ ಗಲಾಟೆಯನ್ನು ನಿಲ್ಲಿಸಬೇಕು ಎಂದರೆ, ಅದಕ್ಕಿರುವ ಒಂದೇ ಒಂದು ಪರಿಹಾರ ಭಾರತ ಮತ್ತು ಪಾಕಿಸ್ತಾನದ ನಡುವೆ ರಾಜಿಯಾಗಬೇಕು ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ.

ಅಕ್ಟೋಬರ್ 20 ರಂದು ಭಯೋತ್ಪಾದಕರ ದಾಳಿಗೆ ತುತ್ತಾದ ಡಾ.ಶಹನ್‌ವಾಜ್ ದಾರ್ ಮನೆಗೆ ಭೇಟಿ ನೀಡಿ, ಸಾಂತ್ವನ ಹೇಳಿದ ಬಳಿಕ ಮುಫ್ತಿ ಮಾಧ್ಯಮದ ಜೊತೆ ಮಾತನಾಡಿದ್ದಾರೆ. ಈ ವೇಳೆ ಈ ಹೇಳಿಕೆ ನೀಡಿದ್ದು, ಜಮ್ಮು-ಕಾಶ್ಮೀರದಲ್ಲಿ ಗಲಾಟೆಯಾಗಬಾರದು ಅಂದ್ರೆ, ಭಾರತ ಮತ್ತು ಪಾಕ್ ನಡುವೆ ಸಾಮರಸ್ಯವಿರಬೇಕು. ಜಮ್ಮು ಕಾಶ್ಮೀರದ ಜನ ಎರಡು ದೇಶಗಳ ದ್ವೇಷದ ಮಧ್ಯೆ ಬದುಕುತ್ತಿದೆ.

ಎರಡು ದೇಶಗಳು ಪರಸ್ಪರ ಜಗಳವಾಡುತ್ತಿರುವ ಕಾರಣಕ್ಕೆ, ಜಮ್ಮು ಕಾಶ್ಮೀರದ ಆಸೆ ಆಕಾಂಕ್ಷೆ, ಆಸ್ತಿ ಎಲ್ಲವೂ ಹಾಳಾಗುತ್ತಿದೆ. ಮತ್ತು ಜಮ್ಮು- ಕಾಶ್ಮೀರ ಈ ಜಗಳದ ಶಿಖಾರಿಯಾಗಿದೆ. ಬಡವರು, ಪಾಪದವರೆಲ್ಲ ಈ ದ್ವೇಷಕ್ಕೆ ಬಲಿಯಾಗುತ್ತಿದ್ದಾರೆ. ಡಾಕ್ಟರ್ ಸಾಹೇಬರು ಅದೆಷ್ಟು ಜನರಿಗೆ ಚಿಕಿತ್ಸೆ ನೀಡಿ, ಉಪಕಾರ ಮಾಡುತ್ತಿದ್ದವರು. ಅಂಥವರು ಇಂದು ಭಯೋತ್ಪಾದನೆಗೆ ಗುರಿಯಾಗಿದ್ದಾರೆ ಎಂದು ಮೆಹಬೂಬಾ ಮುಫ್ತಿ ಬೇಸರ ವ್ಯಕ್ತಪಡಿಸಿದ್ದಾರೆ.

ಅಲ್ಲದೇ, ವಾಜಪೇಯಿ ಪ್ರಧಾನಿಯಾಗಿದ್ದಾಗ, ಯಾವ ರೀತಿ ಪಾಕಿಸ್ತಾನದೊಂದಿಗೆ ಉತ್ತಮಮ ಬಾಂಧವ್ಯ ಇಟ್ಟುಕೊಂಡಿದ್ದರೋ, ಅದೇ ರೀತಿ ಇದ್ದರೆ, ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ಕಡಿಮೆಯಾಗಬಹುದು. ಜಮ್ಮು-ಕಾಶ್ಮೀರದ ಪ್ರತೀ ವ್ಯಕ್ತಿಯೂ ಈ ಜಗಳ ನಿಲ್ಲಲಿ ಎಂದೇ ಬಯಸುತ್ತಾನೆ ಎಂದು ಮುಫ್ತಿ ಅಭಿಪ್ರಾಯ ಪಟ್ಟಿದ್ದಾರೆ.

ಆದರೆ ಕೇಂದ್ರ ಸರ್ಕಾರ, ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ನಿರ್ಮೂಲನೆ ಮಾಡುವವರೆಗೂ ಪಾಕ್‌ನೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲವೆಂದು ಹೇಳಿದೆ.

- Advertisement -

Latest Posts

Don't Miss