Thursday, October 16, 2025

Latest Posts

Recipe: ಮಟರ್ ಮಸಾಲಾ (ಬಟಾಣಿ ಸಾಗು) ರೆಸಿಪಿ

- Advertisement -

Recipe: ಬೇಕಾಗುವ ಸಾಮಗ್ರಿ: ಮೂರು ಸ್ಪೂನ್ ಎಣ್ಣೆ, ಒಂದು ಕಪ್ ನೆನೆಸಿಟ್ಟ ಅಥವಾ ಹಸಿ ಬಟಾಣಿ, ನಾಲ್ಕು ಹಸಿಮೆಣಸು, ಒಂದು ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರ್ಧ ಸ್ಪೂನ್ ಜೀರಿಗೆ, ಚಿಟಿಕೆ ಅರಿಶಿನ, ಅರ್ಧ ಸ್ಪೂನ್ ಖಾರದ ಪುಡಿ, ಒಂದು ಸ್ಪೂನ್ ಗರಂ ಮಸಾಲೆ ಪುಡಿ, ಧನಿಯಾ ಪುಡಿ, ಅರ್ಧ ಕಪ್ ಟೊಮೆಟೋ ಪ್ಯೂರಿ, ಒಂದು ಸ್ಪೂನ್ ಕಸೂರಿ ಮೇಥಿ, ಕೊತ್ತೊಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ಬಟಾಣಿಯನ್ನು ಕೊಂಚ ಬೇಯಿಸಿಟ್ಟುಕೊಳ್ಳಬೇಕು. ಬಳಿಕ ಗ್ಯಾಸ್ ಆನ್ ಮಾಡಿ, ಪ್ಯಾನ್ ಇರಿಸಿ, ಎಣ್ಣೆ, ಜೀರಿಗೆ, ಹಸಿಮೆಣಸು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಹುರಿಯಿರಿ. ಬಳಿಕ ಅರಿಶಿನ, ಖಾರದ ಪುಡಿ, ಗರಂ ಮಸಾಲೆ, ಧನಿಯಾಪುಡಿ ಹಾಕಿ ಮಿಕ್ಸ್ ಮಾಡಿ. ಬಳಿಕ ಟೊಮೆಟೋ ಪ್ಯೂರಿ ಹಾಕಿ ಸೇರಿಸಿ.

ಕೊಂಚ ನೀರು ಸೇರಿಸಿ, 5 ನಿಮಿಷ ಮಂದ ಉರಿಯಲ್ಲಿ ಬೇಯಿಸಿ. ಬಳಿಕ ಬೇಯಿಸಿದ ಬಟಾಣಿ ಉಪ್ಪು ಸೇರಿಸಿ ಮತ್ತೆ 5 ನಿಮಿಷ ಮಂದ ಉರಿಯಲ್ಲಿ ಬೇಯಿಸಿ. ಬಳಿಕ ಕೊತ್ತೊಂಬರಿ ಸೊಪ್ಪು, ಕಸೂರಿ ಮೇಥಿ ಹಾಕಿ ಮಿಕ್ಸ್ ಮಾಡಿದ್ರೆ, ಮಟರ್ ಮಸಾಲಾ ರೆಡಿ.

- Advertisement -

Latest Posts

Don't Miss