Friday, December 27, 2024

Latest Posts

ಕಾಂಗ್ರೆಸ್ ಪಕ್ಷಕ್ಕೆ ಮಾನ‌ಮರ್ಯಾದೆ ಇದ್ರೆ ಜಮೀರ್‌ನನ್ನು ಕಿತ್ತೊಗೆಯಬೇಕು: ಪ್ರಹ್ಲಾದ್ ಜೋಶಿ

- Advertisement -

Hubli News: ಹುಬ್ಬಳ್ಳಿ:ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ವಕ್ಫ್ ಬೋರ್ಡ್ ನೋಟೀಸ್ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ವಿಜಯಪುರದ ಜಿಲ್ಲಾಧಿಕಾರಿ‌ ಕಚೇರಿ ಮುಂಭಾಗ ರೈತರು ಧರಣಿ ಕೂತಿದ್ದಾರೆ. ರಾಜ್ಯ ಸರ್ಕಾರ ಮುಗ್ಧ ರೈತರ ದಾರಿ ತಪ್ಪಿಸುವ ಕೆಲಸ‌ ಮಾಡುತ್ತಿದೆ. ನೊಟೀಸ್ ಹಿಂಪಡೆದಿರುವುದಾಗಿ ಹೇಳಿದ್ದಾರೆ. ಸ್ವತಂತ್ರ ಪೂರ್ವದಿಂದಲೂ‌ ಅಲ್ಲಿ‌ ಜಮೀನುಗಳಿವೆ. ಆ ಜಮೀನುಗಳಿಗ ಪಹಣಿ‌ ಪತ್ರದಲ್ಲಿ ಅವರ ಹೆಸರು ನಮೂದು‌ ಮಾಡಲಾಗಿದೆ. ಇದು ಯಾವುದೇ ಕಾರಣಕ್ಕೂ‌ಒಪ್ಪಲು‌ ಸಾಧ್ಯವಿಲ್ಲ. ಕೆಲವೊಂದು ಜಿಲ್ಲೆಗಳಲ್ಲಿ ವಕ್ಫ ನ್ಯಾಯಾಲಯದ ರೀತಿ ನಡೆಸುತ್ತಿದ್ದಾರೆ ಇದು‌ ನಿಲ್ಲಬೇಕು. ವಿಜಯಪುರದಲ್ಲಿ ಧರಣಿ‌ಕೂತವರಿಗೆ‌ ನೈತಿಕ ಸ್ಥೈರ್ಯ ತುಂಬಲು ನಾವು ತೆರಳಲಿದ್ದೇವೆ ಎಂದು ಜೋಶಿ ಹೇಳಿದ್ದಾರೆ.

ಬಿಜೆಪಿ ಅವಧಿಯಲ್ಲಿ ನೊಟೀಸ್ ನೀಡಿದ್ದಾರೆ ಎಂಬ ಜಮೀರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಜೋಶಿ, ಅದು‌ ಆಗ ನಮ್ಮ‌ ಗಮನಕ್ಕೆ ಬಂದಿಲ್ಲ ನಮ್ಮ ಕಾಲದಲ್ಲಿ ಕೊಟ್ಟಿದ್ದರೆ ಅದು ತಪ್ಪು. ನಮ್ಮ‌ ಗಮನಕ್ಕೆ ಬಂದಿದ್ದರೆ ಆವಾಗಲೇ ಅದನ್ನ ಅಧಿಕಾರಿಗಳಿಗೆ ಹೇಳುತ್ತಿದ್ದೆವು. ಆದಿಲ್ ಶಾಹಿಗಳು ಈ ಹಿಂದೆ ವಿಜಯಪುರದಲ್ಲಿ ಆಡಳಿತ ಮಾಡಿದ್ದರು ಅಂತಾ ಹೇಳ್ತಾರೆ. ಆದಿಲ್ ಶಾಹಿಯವರು ಇಲ್ಲಿಯವರಾ.? ಇಲ್ಲಿರುವ ಮುಸ್ಲೀಂರೇ ಇಲ್ಲಿಯವರಲ್ಲ. ಇಲ್ಲಿಯ ಮುಸ್ಲೀಂರು ಹಿಂದೂಗಳಿದ್ದರು. ಒತ್ತಾಯಪೂರ್ವಕವಾಗಿ ಅವರನ್ನ ಮತಾಂತರ ಮಾಡಿದ್ದಾರೆ. ಯಾರು ದಾನ ನೀಡುತ್ತಾರೆ..? ಒಂದು‌ ಲಕ್ಷ ಎಕರೆಗಳಷ್ಟು ಯಾರಾದ್ರೂ ದಾನ‌ ನೀಡುತ್ತಾರಾ..? ಕಾಂಗ್ರೆಸ್ ಪಕ್ಷಕ್ಕೆ ಮಾನ‌ಮರ್ಯಾದೆ ಇದ್ರೆ ಜಮೀರ್ ನನ್ನ ಕಿತ್ತೊಗೆಯಬೇಕು. ಜಮೀರ್ ಕೋಮು ದ್ವೇಷವನ್ನ‌ ಹರಡುವುದಕ್ಜೆ‌ ರಾಜ್ಯ ಹಾಗೂ ದೇಶವನ್ನ ಇಸ್ಲಾಮೀಕರಣ ಮಾಡೋಕೆ ಹೊರಟಿದ್ದಾರೆ ಎಂದು ಜಮೀರ್ ಅಹ್ಮದ್ ವಿರುದ್ಧ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.

- Advertisement -

Latest Posts

Don't Miss