Haliyal: ಹೌದು, ವಿಶ್ವವಿಖ್ಯಾತ ಕುಸ್ತಿಪಟುಗಳ ಕಣಜ ಎಂದೇ ಪ್ರಖ್ಯಾತಿ ಹೊಂದಿದ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ್ ಪಟ್ಟಣದಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನಗರದ ಕುಸ್ತಿ ಅಖಾಡ ಕ್ರೀಡಾಂಗಣದಲ್ಲಿ ನಾಡಿನ ಗಂಡುಕಲೆಯಾದ ಕುಸ್ತಿಯಲ್ಲಿ ಪೈಲ್ವಾನರು ಪಟ್ಟಿಗೆ ಪ್ರತಿ ಪಟ್ಟು ಹಾಕಿ ಸೆಣಸಾಡಲಿದ್ದಾರೆ.ನಾಳೆಯ ದಿನ ಬೆಳಗ್ಗೆ 10 ಗಂಟೆಗೆ ಶುರುವಾಗುವ ಕುಸ್ತಿ ಪಂದ್ಯ ಸಂಜೆ 6 ರವರೆಗೂ ನಡೆಯಲಿದ್ದು ನೂರಾರು ಪೈಲ್ವಾನ್ ರು ಈ ಕುಸ್ತಿಯ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ತಾಲ್ಲೂಕಿನ ಇತಿಹಾಸದಲ್ಲೇ ವಿಭಿನ್ನ ರೀತಿಯ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿಯನ್ನು ಇಲ್ಲಿನ ಶ್ರೀ ಜೈ ಹನುಮಾನ್ ಕುಸ್ತಿ ಸಂಘದ ವತಿಯಿಂದ ರಾಜ್ಯ ಮಟ್ಟದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಸ್ನೇಹಜೀವಿ ರಾಜು ಪೆಜೋಳ್ಳಿ ಮಾರ್ಗದರ್ಶನದಲ್ಲಿ ಸಕಲ ಸಿದ್ಧತೆಯನ್ನು ಈಗಾಗಲೇ ನಡೆಸಲಾಗಿದೆ.ಇನ್ನು ಕಾರ್ಯಕ್ರಮದಲ್ಲಿ ಶಾಸಕರು ಮುಖಂಡರು ಸಂಘ ಸಂಸ್ಥೆ,ಮಾಜಿ ಪೈಲ್ವಾನರು ಮಾಜಿ ಶಾಸಕರು,ಅಂತಾರಾಷ್ಟ್ರೀಯ್ ಮಟ್ಟದ ಕ್ರೀಡಾ ಪಟುಗಳು ಸೇರಿದಂತೆ ಅನೇಕ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ.