Thursday, October 16, 2025

Latest Posts

Recipe: ಅಕ್ಕಿ ಹಾಲ್ಬಾಯ್ ರೆಸಿಪಿ

- Advertisement -

Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ತೆಂಗಿನತುರಿ, 2 ಗಂಟೆ ನೆನೆಸಿಟ್ಟುಕೊಂಡ 3 ಕಪ್ ಅಕ್ಕಿ, 3 ಕಪ್ ಬೆಲ್ಲ, ಚಿಟಿಕೆ ಉಪ್ಪು, ಏಲಕ್ಕಿ ಪುಡಿ, ಅರ್ಧ ಕಪ್ ತುಪ್ಪ.

ಮಾಡುವ ವಿಧಾನ: ಮೊದಲು ತೆಂಗಿನ ತುರಿ, ನೆನೆಸಿಟ್ಟ ಅಕ್ಕಿ ಮತ್ತು ಬೆಲ್ಲವನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಬಳಿಕ ನೀರು ದೋಸೆಯ ಹದಕ್ಕೆ ನೀರು ಹಾಕಿ, ಹಿಟ್ಟು ತಯಾರಿಸಿ. ನೆನಪಿಟ್ಟುಕೊಳ್ಳಿ, ಅಕ್ಕಿ ಹಿಟ್ಟಿಗೆ ಹೆಚ್ಚು ನೀರು ಬೀಳಬಾರದು ಮತ್ತು ಅಕ್ಕಿ ಹಿಟ್ಟು ಹೆಚ್ಚು ಗಟ್ಟಿಯಾಗಿಯೂ ಇರಬಾರದು.

ಈಗ ಈ ಮಿಶ್ರಣಕ್ಕೆ ಕೊಂಚ ಉಪ್ಪು ಹಾಕಿ ಮಿಕ್ಸ್ ಮಾಡಿ. ಪ್ಯಾನ್ ಬಿಸಿ ಮಾಡಲು ಇಟ್ಟು, ಆ ಪ್ಯಾನ್‌ಗೆ ಅಕ್ಕಿ ಹಿಟ್ಟಿನ ಮಿಶ್ರಣ ಹಾಕಿ, ಕೈ ಬಿಡದೇ ಮಿಕ್ಸ್ ಮಾಡಿ. ಜೊತೆಗೆ ಮಧ್ಯ ಮಧ್ಯ ಕೊಂಚ ಕೊಂಚ ತುಪ್ಪ ಬೆರೆಸಿ. ಹಲ್ವಾ ರೀತಿ ಗಟ್ಟಿಯಾದಾಗ, ಗ್ಯಾಸ್ ಆಫ್ ಮಾಡಿ, ಮತ್ತಷ್ಟು ತುಪ್ಪ, ಏಲಕ್ಕಿ ಪುಡಿ ಸೇರಿಸಿ.

ಈಗಗ ಒಂದು ಪ್ಲೇಟ್‌ಗೆ ತುಪ್ಪ ಸವರಿ, ಹಾಲುಬಾಯಿ ಮಿಶ್ರಣವನ್ನು ಆ ಪ್ಲೇಟ್‌ಗೆ ಹಾಕಿ. ಕೊಂಚ ಹೊತ್ತಿನ ಬಳಿಕ, ಹಲ್ವಾದ ರೀತಿ, ಶೇಪ್ ಕೊಟ್ಟರೆ, ಅಕ್ಕಿ ಹಾಲುಬಾಯಿ ರೆಡಿ.

- Advertisement -

Latest Posts

Don't Miss