- Advertisement -
Hubli News: ಹುಬ್ಬಳ್ಳಿ: ಪ್ರೇಮಿಗಳಿಬ್ಬರಿಗೆ ನಡುರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಪ್ರಿಯಕರನೊಂದಿಗೆ ಬಂದಿದ್ದ ಯುವತಿಯ ಸಂಬಂಧಿಕರು ಇಬ್ಬರಿಗೂ ಥಳಿಸಿದ್ದಾರೆ.
ಮಗಳ ಪ್ರಿಯಕರನನ್ನು ನೋಡಿ ಆಕೆಯ ತಾಯಿ ಮತ್ತು ಸಹೋದರ ರೊಚ್ಚಿಗೆದ್ದಿದ್ದು, ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ. ಆ ಯುವಕನನ್ನು ಪ್ರೀತಿಸಿರುವ ಕಾರಣಕ್ಕೆ, ಯುವತಿಯ ತಾಯಿಯ ಸಹೋದರ ಈ ಜೋಡಿಯ ಮೇಲೆ ಹಲ್ಲೆ ಮಾಡಿದ್ದಾರೆ. ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
- Advertisement -