ಶಿಗ್ಗಾವಿಯಲ್ಲಿ ಬಿಜೆಪಿ ಮೇಲೆ ಆಕ್ರೋಶ ಇದೆಯಂತೆ: ಅದಕ್ಕೆ ಕಾರಣವೂ ಹೇಳಿದ್ರು ಡಿಕೆಶಿ

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿದ್ದು, ಉಪಚುನಾವಣಾ ವಿಚಾರವಾಗಿ ಹೇಳಿಕೆ ನೀಡಿದ್ದಾರೆ.

ಜನ ರಾಜ್ಯದ ಆಡಳಿತ ನೋಡಿದ್ದಾರೆ. ಮೂರರಲ್ಲೂ ಅವರವರ ಪಕ್ಷದವರನ್ನ ಹಾಕಿದ್ದಾರೆ. ನಾನು ಚನ್ನಪಟ್ಟಣ, ಸಂಡೂರು ಒಂದು ರೌಂಡ್ ಹೋಗಿ ಬಂದಿದ್ದೇನೆ. ಈಗ ಶಿಗ್ಗಾವಿ ಕ್ಷೇತ್ರಕ್ಕೆ ಬಂದಿದ್ದೇನೆ. ಶಿಗ್ಗಾವಿಯಲ್ಲೂ ಸಹ ನಮ್ಮ ಮುಖಂಡರು, ಕಾರ್ಯಕರ್ತರ ಜೊತೆ ಚರ್ಚೆ ಮಾಡ್ತೇನೆ. ಪಾರ್ಲಿಮೆಂಟ್ ನಲ್ಲಿ ಬಂದಂತಹ ಮತಕ್ಕಿಂತ ಹೆಚ್ಚಿನ ಮತ ಈ ಬಾರಿ ನಮ್ಮ ಅಭ್ಯರ್ಥಿಗೆ ಬರುತ್ತೆ ಅಂತ ನಮ್ಮ ಮುಖಂಡರು, ಜನ ನಿರೀಕ್ಷೆ ಮಾಡಿದ್ದಾರೆ. ಶಿಗ್ಗಾವಿ ಕ್ಷೇತ್ರದಲ್ಲೂ ಸಹ ಗೆಲ್ತೀವಿ. ಶಿಗ್ಗಾವಿಯಲ್ಲಿ ಬಿಜೆಪಿ ಮೇಲೆ ಆಕ್ರೋಶ ಇದೆಯಂತೆ. ಕಾರ್ಯಕರ್ತರಿಗೆ ಸೀಟ್ ಬಿಟ್ಟು ಕೊಡ್ತೇವೆ ಅಂತ ಹೇಳಿದ್ರಂತೆ. ಆ ಸೀಟು ಕಾರ್ಯಕರ್ತರಿಗೆ ಬಿಡಲಿಲ್ವಂತೆ. ಹೀಗಾಗಿ ಮತದಾರರು ಸಹ ಬಿಜೆಪಿ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

About The Author