Recipe: ಪ್ರತಿದಿನ ಟಿಫಿನ್ ಬಾಕ್ಸ್‌ಗೆ ಒಂದೇ ರೀತಿಯ ಊಟ ಹಾಕಿ ಕೊಟ್ಟು ನಿಮಗೂ ಬೋರ್ ಬಂದಿರಬಹುದು, ತಿಂದವರಿಗೂ ಬೋರ್ ಬಂದಿರಬಹುದು. ಹಾಗಾಗಿ ನಾವಿಂದು ಈಸಿಯಾಗಿ, ರುಚಿಯಾಗಿ ಪಾಲಕ್ ರೈಸ್ ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ.
ಬೇಕಾಗುವ ಸಾಮಗ್ರಿ: ಮೂರು ಕಪ್ ಅಕ್ಕಿ, 1 ಕಪ್ ಪಾಲಕ್ ಸೊಪ್ಪು, ಕೊಂಚ ಕೊತ್ತೊಂಬರಿ ಸೊಪ್ಪು, 3 ಹಸಿಮೆಣಸಿನಕಾಯಿ, ಶುಂಠಿ, 7 ಎಸಳು ಬೆಳ್ಳುಳ್ಳಿ, ಎರಡು ಈರುಳ್ಳಿ, 1 ಕ್ಯಾರೆಟ್, ಬಟಾಣಿ, ಬೀನ್ಸ್, ಅರ್ಧ ಸ್ಪೂನ್ ಗರಂ ಮಸಾಲೆ ಪುಡಿ, ಧನಿಯಾ ಪುಡಿ, ಚಾಟ್ ಮಸಾಲೆ ಪುಡಿ, 4 ಸ್ಪೂನ್ ತುಪ್ಪ, ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಮೊದಲು ಪಾಲಕ್, ಕೊತ್ತೊಂಬರಿ, ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ, ಜೀರಿಗೆ ಹಾಕಿ ಪೇಸ್ಟ ತಯಾರಿಸಿ. ಬಳಿಕ ಕುಕ್ಕರ್ ಬಿಸಿ ಮಾಡಿ, ಅದಕ್ಕೆ ತುಪ್ಪ, ಪಾಲಕ್ ಎಲೆ, ಏಲಕ್ಕಿ, ಲವಂಗ, ಚಕ್ಕೆ, ಕಾಳುಮೆಣಸು ಹಾಕಿ ಹುರಿಯಿರಿ. ಬಳಿಕ ಈರುಳ್ಳಿ ಹಾಕಿ ಹುರಿಯಿರಿ.
ನಂತರ ಬಟಾಣಿ, ಬೀನ್ಸ್, ಕ್ಯಾರೆಟ್ ಹಾಕಿ ಹುರಿಯಿರಿ. ನಂತರ ಅಕ್ಕಿಯನ್ನು ಚೆನ್ನಾಗಿ ತೊಳೆದು ಸೇರಿಸಿ. ಈಗ ಉಪ್ಪು, ಪಾಲಕ್ ಪೇಸ್ಟ್, ಗರಂ ಮಸಾಲೆ ಪುಡಿ, ಧನಿಯಾ ಪುಡಿ, ಚಾಟ್ ಮಸಾಲೆ ಪುಡಿ ಸೇರಿಸಿ, ಮೂರು ವಿಶಲ್ ಬರುವವರೆಗೂ ಬೇಯಿಸಿದರೆ, ಪಾಲಕ್ ರೈಸ್ ರೆಡಿ. ಇದಕ್ಕೆ ಹುರಿದ ಗೋಡಂಬಿ ಸೇರಿಸಬಹುದು. ಇದರೊಂದಿಗೆ ಈರುಳ್ಳಿ, ಟೊಮೆಟೋ, ಸೌತೇಕಾಯಿ, ಕಾಯಿಹಾಲು, ಮೊಸರು, ಕೊತ್ತೊಂಬರಿ ಸೊಪ್ಪು, ಉಪ್ಪು ಹಾಕಿ ಮಾಡಿದ ರಾಯ್ತಾ ಸವಿಯಬಹುದು.