200ಕ್ಕೂ ಹೆಚ್ಚು ಮಾರ್ಗಗಳಲ್ಲಿ ಬಿಎಂಟಿಸಿ ಬಸ್ ಸಂಚಾರ ರದ್ದು..!

ಬೆಂಗಳೂರು: ಬೆಂಗಳೂರಿನಲ್ಲಿ ಕೊರೊನಾ ಸೋಂಕು ಹೆಚ್ಚಳವಾಗಿರುವ ಹಿನ್ನೆಲೆ 200ಕ್ಕೂ ಹೆಚ್ಚು ಮಾರ್ಗಗಳಲ್ಲಿ ಬಿಎಂಟಿಸಿ ಬಸ್ ಸಂಚಾರ ರದ್ದು ಮಾಡಲಾಗಿದೆ.

ಲಾಕ್‌ಡೌನ್ ಮುಗಿದು ಬಿಎಂಟಿಸಿ ಬಸ್ ಸಂಚಾರ ಶುರುವಾದ್ರು ಜನ ಬಸ್‌ನಲ್ಲಿ ಓಡಾಡಲು ಹಿಂಜರಿಯುತ್ತಿದ್ದಾರೆ. ಅದರಲ್ಲೂ ಯವುದೇ ಲಕ್ಷಣಗಳಿಲ್ಲದೇ ಕೆಲವರಿಗೆ ಕೊರೊನಾ ರೋಗ ಹರಡಿರುವುದು ಇನ್ನು ಹೆಚ್ಚು ಆತಂಕಕ್ಕೀಡು ಮಾಡಿದೆ. ಅಲ್ಲದೇ ಬಿಎಂಟಿಸಿ ಸಿಬ್ಬಂದಿಗಳಿಗೂ ಕೊರೊನ ಸೋಂಕು ತಗಲಿದ ಕಾರಣಕ್ಕೆ ಬಿಎಂಟಿಸಿಯಲ್ಲಿ ಓಡಾಡಲು ಜನ ಹಿಂಜರಿಯುತ್ತಿದ್ದಾರೆ.

ಖಾಲಿ ಬಸ್ ಓಡಾಡುತ್ತಿರುವ ಕಾರಣಕ್ಕೆ ಬಿಎಂಟಿಸಿಗೆ ನಷ್ಟ ಸಂಭವಿಸಿದೆ. ಅಲ್ಲದೇ ಬೆಂಗಳೂರಿನ ಹಲವು ಏರಿಯಾಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಹೀಗಾಗಿ ಸಾರಿಗೆ ನಿಗಮ 222 ಮಾರ್ಗಗಳಲ್ಲಿ ಸಂಚಾರ ರದ್ದು ಪಡಿಸಲಾಗಿದೆ.

ಪಶ್ಚಿಮ, ಈಶಾನ್ಯ, ಸೇರಿ ದಕ್ಷಿಣ ಮತ್ತು ಉತ್ತರ ಭಾಗದ ವಿವಿಧ ಮಾರ್ಗದಲ್ಲಿ ಬಸ್ ಸಂಚಾರ ರದ್ದು ಮಾಡಲಾಗಿದೆ.

ಈ ಬಗ್ಗೆ ಬಿಎಂಟಿಸಿ ನಿಗಮದಿಂದ ಆದೇಶ ಜಾರಿಯಾಗಿದ್ದು, ಪ್ರತಿದಿನ ನಾಲ್ಕೈದು ಟ್ರಿಪ್ ಹೋಗುತ್ತಿದ್ದ ಬಿಎಂಟಿಸಿ ಬಸ್‌ಗಳು, ಇನ್ನು ಕೆಲ ದಿನ ಒಂದು ಬಾರಿ ಮಾತ್ರ ಕಾರ್ಯಾಚರಣೆ ನಡೆಸಲಿದೆ.
ನಾಗೇಂದ್ರ, ಕರ್ನಾಟಕ ಟಿವಿ, ಬೆಂಗಳೂರು

About The Author