ಕರ್ನಾಟಕ ಟಿವಿ : ಭಾರತ ಸ ಚೀನಾದ 59 ಆಪ್ ಗಳನ್ನ ಬ್ಯಾನ್ ಮಾಡಿದ ಬೆನ್ನಲ್ಲೇ ಇದೀಗ ಅಮೆರಿಕಾ ಹಾಗೂ ಆಸ್ಟ್ರೇಲಿಯಾ ಸಹ ಚೀನಾ ಮೂಲದ ಆಪ್ ಗಳನ್ನನ ಬ್ಯಾನ್ ಮಾಡಲು ಮುಂದಾಗಿವೆ. ಅಮೆರಿಕಾದ ರಾಜ್ಯ ಕಾರ್ಯದರ್ಶಿ ಮೈಕ್ ಪೊಂಪಿಯೋ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ರಾಷ್ಟ್ರದ ಭದ್ರತೆಯ ದೃಷ್ಟಿಯಿಂದ ಟಿಕ್ ಟಾಕ್ ಸೇರಿದಂತೆ ಚೀನಾ ಮೂಲದ ಆಪ್ ಗಳನ್ನ ಬ್ಯಾನ್ ಮಾಡುವುದಾಗಿ ತಿಳಿಸಿದ್ದಾರೆ. ಟಿಕ್ ಟಾಕ್ ಬೈಟ್ ಡ್ಯಾನ್ಸ್ ಕಂಪನಿಗೆ ಸೇರಿದ್ದಾಗಿದ್ದು ಚೀನಾ ಸರ್ಕಾರಕ್ಕೆ ಡೇಟಾವನ್ನ ಕೊಡುತ್ತಿರುವುದಾಗಿ ಆರೋಪಿಸಿದೆ. ಇನ್ನು ಆಸ್ಟ್ರೇಲಿಯಾ ಸಹ ಚೀನಾ ಆಪ್ ಗಳನ್ನ ಬ್ಯಾನ್ ಮಾಡಲು ಮುಂದಾಗ್ತಿರುವುದಾಗಿ ಸಂಸದರು ತಿಳಿಸಿದ್ದಾರೆ. ಚೀನಾ ಮೂಲದ ಆಪ್ ಗಳು ಬೇರೆ ದೇಶದ ನಾಗರೀಕರ ಡೇಟಾಗಳನ್ನ ಚೀನಾ ಕಮ್ಯೂನಿಸ್ಟ್ ಸರ್ಕಾರದ ಜೊತೆ ಹಂಚಿಕೊಳ್ತಿದ್ದಾರೆ ಎಂದು ಆಸ್ಟ್ರೇಲಿಯಾ ಸಂಸದ ಆರೋಪಿಸಿದ್ದಾರೆ.. 2017ರ ಚೀನಾ ರಾಷ್ಟ್ರೀಯ ಭದ್ರತಾ ಕಾನೂನಿನ ಪ್ರಕಾರ ಚೀನಾದ ಯಾವುದೇ ಕಂಪನಿಗಳು ಅಥವಾ ಬೇರೆ ದೇಶದಲ್ಲ ಉದ್ಯಮ ನಡೆಸ್ತಿದ್ರು ಎಲ್ಲಾ ಮಾಹಿತಿಯನ್ನ ಚೀನಾ ಕಮ್ಯೂನಿಸ್ಟ್ ಸರ್ಕಾರಕ್ಕೆ ನೀಡಬೇಕು.. ಈ ಹಿನ್ನೆಲೆ ಚೀನಾದ ಆಪ್ ಗಳನ್ನ ಬ್ಯಾನ್ ಮಾಡಲು ಅಮೆರಿಕಾ ಹಾಗೂ ಆಸ್ಟ್ರೇಲಿಯಾ ಮುಂದಾಗಿವೆ.
ನ್ಯಾಷನಲ್ ಡೆಸ್ಕ್, ಕರ್ನಾಟಕ ಟಿವಿ,




