ಜೂಮ್ ಆ್ಯಪ್ ಬಳಸದಂತೆ ಸೂಚನೆ

ಕರ್ನಾಟಕ ಟಿವಿ : ದಿ ಕಾನ್ಫಿಢರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ ಜೂಮ್ ಆಪ್ ಬಳಸದಂತೆ ಕರೆ ನೀಡಿದೆ.. ಸ್ವದೇಶಿ ಕಂಪನಿ ಜೀಯೋ ಮೀಟ್ ಬಳಸುವಂತೆ ಸೂಚನೆ ನೀಡಿದೆ.. ದಿ ಕಾನ್ಫಿಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ ವ್ಯಾಪ್ತಿಗೆ ಭಾರತದಲ್ಲಿ 7 ಕೋಟಿ ಸದಸ್ಯರು ಬರಲಿದ್ದು ಯಾರೊಬ್ಬರೂ ಜೂಮ್ ಬಳಸದಂತೆ ಸೂಚನೆ ನೀಡಲಾಗಿದೆ.. ಜೂಮ್ ಬದಲಾಗಿ ಜೀಯೋ ಮೀಟ್ ಬಳಸಲು ಕರೆ ನೀಡಲಾಗಿದೆ. ಜೂಮ್ ಅಮೆರಿಕಾದಲ್ಲಿ ಸ್ಥಾಪನೆಯಾಗಿದ್ದರೂ ಜೂಮ್ ಕಂಪನಿ ಮಾಲೀಕ ಎರಿಕ್ ಎಸ್ ಯುವಾನ್ ಮೂಲತಃ ಚೀನಾದವನು.. ಈಗ ಚೀನಾದಲ್ಲಿ ವಿದ್ಯಾಭ್ಯಾಸ ಮುಗಿಸಿ ಅಮೆರಿಕಾಗೆ ಬಂದು 9 ವರ್ಷಗಳ ಹಿಂದೆ ಕಂಪನಿ ಸ್ಥಾಪನೆ ಮಾಡಿದ್ದಾರೆ.. ಚೀನಾ ಕಾನೂನಿನ ಪ್ರಕಾರ ಚೀನಾದ ಕಂಪನಿಗಳು ಹಾಗೂ ಚೀನಾದ ಮಾಲೀಕತ್ವದ ಕಂನಿಗಳು 2017ರ ರಾಷ್ಟ್ರೀಯ ಭದ್ರತಾ ಕಾನೂನಿನಡಿಯಲ್ಲಿ ವ್ಯಾಪಾರ ಹಾಗೂ ಅದಕ್ಕೆ ಸಂಬಮಧಿಸಿದ ಮಾಹಿತಿಯನ್ನ ನೀಡಬೇಕಿದೆ. ಹೀಗಾಘಿ ಜೂಮ್ ಆಪ್ ಸೇಫಲ್ಲಾ ಅನ್ನೋದನ್ನ ಕೇಂದ್ರ ಸರ್ಕಾರವೇ ಹೆಳಿತ್ತು.. ಆದರೂ ಬಹಳಷ್ಟು ಜನ ಈಗಲೂ ಜೂಮ್ ಆಪ್ ಬಳಸುತ್ತಿದ್ದಾರೆ.

ನ್ಯಾಷನಲ್ ಡೆಸ್ಕ್, ಕರ್ನಾಟಕ ಟಿವಿ,

ನೀವೂ ಚೀನಾ ಆ್ಯಪ್ ಗಳನ್ನ  ಬಹಿಷ್ಕಾರ ಮಾಡಿದ್ದೀರಾ..? ಕಾಮೆಂಟ್ ಮಾಡಿ

About The Author