Delhi News: ದೆಹಲಿ ಮೆಟ್ರೋ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಿದೆ. ಈ ಬಾರಿ ಮಂಗಳಮುಖಿಯೊಬ್ಬಳು ಭಿಕ್ಷೆ ಬೇಡಲು ಬಂದು, ಆಕೆಗೆ ಓರ್ವ ವ್ಯಕ್ತಿ ಭಿಕ್ಷೆ ಹಾಕಿಲ್ಲವೆಂಬ ಕಾರಣಕ್ಕೆ, ಬಟ್ಟೆ ಎತ್ತಿ ತನ್ನ ಖಾಸಗಿ ಅಂಗ ತೋರಿಸಿದ್ದಾಳೆ. ಈ ದೃಶ್ಯವನ್ನು ದೂರದಲ್ಲಿ ಕುಳಿತಿದ್ದ ಪ್ರಯಾಣಿಕ ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾನೆ.
ಮೊದಲು ವ್ಯಕ್ತಿಯೊಂದಿಗೆ ಜಗಳವಾಡುವ ಇಬ್ಬರು ಮಂಗಳಮುಖಿಯರು, ಬಳಿಕ ದುಡ್ಡು ಕೊಡೆದು ಅಸಭ್ಯವಾಗಿ ಮಾತನಾಡುತ್ತಾರೆ. ಕೊನೆಗೆ ಓರ್ವ ಮಂಗಳಮುಖಿ, ಬಟ್ಟೆ ಎತ್ತಿ ತನ್ನ ಖಾಸಗಿ ಅಂಗ ತೋರಿಸುತ್ತಾಳೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಮಂಗಳಮುಖಿಯ ವಿರುದ್ಧ ಎಲ್ಲರೂ ಆಕ್ರೋಶ ಹೊರಹಾಕಿದ್ದಾರೆ.
ಇದು ಬರೀ ದೆಹಲಿ ಕಥೆಯಲ್ಲ, ಬದಲಾಗಿ ಬೆಂಗಳೂರಿನಲ್ಲೂ ಇಂಥ ಘಟನೆಗಳು ಆಗಾಗ ನಡೆಯುತ್ತಿರುತ್ತದೆ. ಆದರೆ ವೀಡಿಯೋ ಮಾಡುವ ಧೈರ್ಯ ಯಾರೂ ಮಾಡುವುದಿಲ್ಲ. ಮದುವೆ, ಮುಂಜಿ, ಗೃಹಪ್ರವೇಶದ ಮನೆಯ ಮುಂದೆ ಹೂವಿನಿಂದ ಸಿಂಗಸಿರಿುವುದನ್ನು ಕಂಡರೆ ಅಥವಾ ಚಪ್ಪರ ಹಾಕಿರುವುದನ್ನು ಕಂಡರೆ, ಗುಂಪು ಗುಂಪಾಗಿ ಮನೆಗೆ ನುಗ್ಗುವ ಮಂಗಳಮುಖಿಯರು, ಪೂಜೆ ಸಾಮಾನುಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡುವ ಮಟ್ಟಿಗೆ ಅಸಭ್ಯ ರೀತಿಯ ವರ್ತನೆ ತೋರಿಸುತ್ತಾರೆ.
ಅಲ್ಲಿರುವ ಪುರುಷರು ಅವರನ್ನು ಹೊರಗೆ ಹಾಕಲು ಹೋದರೆ, ಇದೇ ರೀತಿ ಅಸಭ್ಯವಾಗಿ ಖಾಸಗಿ ಅಂಗ ತೋರಿಸುತ್ತಾರೆ. ಅಲ್ಲದೇ, ತಾವು ಕೇಳಿದಷ್ಟೇ ದುಡ್ಡು ಕೊಡಲೇಬೇಕು, ಇಲ್ಲವಾದಲ್ಲಿ ನಾವು ಇಲ್ಲಿಂದ ಹೋಗುವುದಿಲ್ಲ ಎಂದು ಹಠ ಮಾಡುತ್ತಾರೆ. ನೀವು ಪೊಲೀಸ್ ಸ್ಟೇಶನ್‌ಗೆ ದೂರು ನೀಡಿದರೆ, ಕೆಲ ದಿನಗಳಲ್ಲೇ ಹೊರಗೆ ಬರುವ ಈ ಮಂಗಳಮುಖಿಯರು, ಮತ್ತಷ್ಟು ತಮ್ಮ ಗ್ಯಾಂಗ್‌ನ ಮಂಗಳಮುಖಿಯರನ್ನು ಕರೆತಂದು, ಮನೆ ಎದುರು ಹೈಡ್ರಾಮಾ ಮಾಡುತ್ತಾರೆ.
ಇದೇ ಕಾರಣಕ್ಕೆ ಹಲವರು ಮಂಗಳಮುಖಿಯರ ಜೊತೆ ಜಗಳವಾಡಲು, ಅವರ ವಿರುದ್ಧ ದೂರು ನೀಡಲು ಬಯಸುವುದಿಲ್ಲ. ಈ ಮಂಗಳಮುಖಿಯರ ದೌರ್ಜನ್ಯ ತಡೆಯಲು ಯಾವ ಅದಿಕಾರಿಗಳು ಮುಂದೆ ಬಾರದಿರುವುದು ವಿಪರ್ಯಾಸದ ಸಂಗತಿ.
Kalesh b/w a Guy and Transgender inside Delhi Metro over not giving him money
pic.twitter.com/0PZW9gGlC5— Ghar Ke Kalesh (@gharkekalesh) November 13, 2024