News: ಜಿಕೆವಿಕೆಯಲ್ಲಿ ಕೃಷಿ ಮೇಳ ನಡೆಯುತ್ತಿದ್ದು, ಕೃಷಿಗೆ ಸಂಬಂಧಿಸಿದ ವಿವಿಧ ರೀತಿಯ ಕೃಷಿ ತಳಿಗಳು, ಪ್ರಾಣಿ, ಪಕ್ಷಿಗಳು, ಆಹಾರ ಧಾನ್ಯ, ತಿಂಡಿ ತಿನಿಸು ಎಲ್ಲವನ್ನೂ ಅನಾವರಣಗೊಳಿಸಲಾಗುತ್ತಿದೆ.
ತಿಂಡಿ ತಿನಿಸಿನ ಲೀಸ್ಟ್‌ನಲ್ಲಿ ರುಚಿಕರವಾದ ಕೇಕ್ ಕುಕೀಸ್ ಕೂಡ ಮಾರಾಟಕ್ಕೆ ಇದ್ದು, ಇದನ್ನು ಟೇಸ್ಟ್ ಮಾಡಿರುವ ಗ್ರಾಹಕರು, ವಾಹ್ ಸೂಪರ್ ಅಂತಲೂ ಹೇಳಿದ್ದಾರೆ. ಇದು ವಿಶ್ವವಿದ್ಯಾನಿಯಲದ ವಿದ್ಯಾರ್ಥಿಗಳು ಮಾಡಿರುವ ಕೇಕ್ ಮತ್ತು ಕುಕೀಸ್ ಆಗಿದ್ದು, ಕೃಷಿ ವಿಶ್ವವಿದ್ಯಾಲಯದಲ್ಲಿ ಬೇಕಿಂಗ್ ತಂತ್ರಜ್ಞಾನ ಮತ್ತು ಮೌಲ್ಯವರ್ಧನ ಸಂಸ್ಥೆಯ ಒಂದು ಭಾಗವಾಗಿದೆ.
ಈ ಡಿಪಾರ್ಟ್‌ಮೆಂಟ್‌ನಲ್ಲಿ ಅಡುಗೆಯನ್ನು ಕಲಿಸುತ್ತಿದ್ದು, ಬೇಕ್ ಮಾಡುವ ತಿಂಡಿಯನ್ನು ಹೇಗೆ ಆರೋಗ್ಯಕರವಾಗಿ ಮಾಡುವುದು ಎಂದು ಹೇಳಿಕೊಡಲಾಗುತ್ತದೆ. ಕೇಕ್, ಕುಕೀಸ್, ಪಿಜ್ಜಾ, ಇತ್ಯಾದಿ ಮಾಡರ್ನ್ ಆಗಿರುವ ತಿಂಡಿಯನ್ನು ಇಲ್ಲಿನ ವಿದ್ಯಾರ್ಥಿಗಳು ರೆಡಿ ಮಾಡಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು ಯಾವ ರೀತಿಯಾಗಿ, ಯಾಾವ ಯಾವ ರುಚಿ ರುಚಿ ತಿಂಡಿಗಳನ್ನು ತಯಾರಿಸುತ್‌ತಾರೆ ಅನ್ನೋ ಬಗ್ಗೆ ತಿಳಿಯಲು ಈ ವೀಡಿಯೋ ನೋಡಿ.