Bangladesh News: ಬಾಂಗ್ಲಾದೇಶದ ಹಿಂದೂಪರ ವಕೀಲ, ಇಸ್ಕಾನ್ ಅರ್ಚಕ ಚಿನ್ಮೋಯ್ ಕೃಷ್ಣದಾಸ್ ಬ್ರಹ್ಮಚಾರಿಯನ್ನು ಬಾಂಗ್ಲಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿದ್ದ ಹಿಂಸಾಚಾರ, ದೌರ್ಜನ್ಯವನ್ನು ಖಂಡಿಸಿ ಚಿನ್ಮೋಯ್ ದಾಸ್ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಬಾಂಗ್ಲಾ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆಂದು ಆರೋಪಿಸಿ, ಬಾಂಗ್ಲಾ ಪೊಲೀಸರು ಚಿನ್ಮೋಯ್ ದಾಸ್ ಅವರನ್ನು ಅರೆಸ್ಟ್ ಮಾಡಿದ್ದಾರೆ.
ಇಸ್ಕಾನ್ ನಾಯಕ ಚಿನ್ಮೋಯ್ ಕೃಷ್ಣ ದಾಸ್ ಬ್ರಹ್ಮಚಾರಿ ಅವರು ಢಾಕಾದಿಂದ ಚಟ್ಟೋಗ್ರಾಮ್‌ಗೆ ಹೋಗಲು ಹಜರತ್ ಶಹಜಲಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಕೂಡಲೇ ಅವರನ್ನು ಅಲ್ಲಿಂದ ಬಂಧಿಸಲಾಯಿತು.
ಢಾಕಾ ಏರ್ಪೋರ್ಟ್‌ನಲ್ಲಿ ಚಿನ್ಮೋಯ್‌ರನ್ನು ಬಂಧಿಸಿದ್ದು, ಹಿಂದೂಪರ ಹೋರಾಟ ಮಾಡಿದ್ದೇ ಇದಕ್ಕೆ ಕಾರಣ. ಪ್ರತಿಭಟನೆ ರ್ಯಾಲಿ ಮಾಡಿದ ಕಾರಣಕ್ಕೆ ಪೊಲೀಸರು ಚಿನ್ಮೋಯ್ ದಾಸ್‌ರನ್ನು ಬಂಧಿಸಿದ್ದಾರೆಂದು ಅಲ್ಲಿನ ಹಿಂದೂಗಳು ಆರೋಪಿಸಿದ್ದಾರೆ. ಅಲ್ಲದೇ, ಪೊಲೀಸರು ಚಿನ್ಮೋಯ್ ದಾಸ್ ಅವರನ್ನು ಬಂಧಿಸಿ, ಅಜ್ಞಾತ ಸ್ಥಳಕ್ಕೆ ಕೊಂಡೊಯ್ದಿದ್ದಾರೆಂದು ಹೇಳಿದ್ದಾರೆ.
ನಾ ಬೆಂಬಲ ನೀಡುವುದನ್ನು ವಿರೋಧಿಸಿ, ಪ್ರತಿಭಟನೆ ನಡೆಸಿ, ಗಲಾಟೆಯಾಗಿತ್ತು. ಈ ವೇಳೆ ಶೇಖ್ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಭಾರತಕ್ಕೆ ಪಲಾಯನ ಮಾಡಿದ್ದರು. ಬಾಂಗ್ಲಾ ಪ್ರಧಾನಿ ನಿವಾಸಕ್ಕೆ ಅಲ್ಲಿನ ಸ್ಥಳೀಯರೆಲ್ಲ ಹೋಗಿ, ಕೈ ಸಿಕ್ಕಿದ್ದನ್ನು ಎತ್ತಿಕೊಂಡು ಬಂದ ವೀಡಿಯೋ ಎಲ್ಲೆಡೆ ವೈರಲ್ ಆಗಿತ್ತು.
ಇದೇ ವೇಳೆ ಅಲ್ಲಿನ ಹಿಂದೂಗಳ ಮೇಲೆ ಬಾಂಗ್ಲಾ ದೇಶಿಗರು, ಅನ್ಯಧರ್ಮೀಯರು ದೌರ್ಜನ್ಯ ಎಸಗಿದ್ದ ಪ್ರಕರಣಗಳೂ ಕಂಡುಬಂದಿತ್ತು. ಅವರ ಕಷ್ಟಕಾಲದಲ್ಲಿ ಬೆಂಬಲವಾಗಿ ನಿಂತು, ಅನ್ನದಾನ ಮಾಡಿದ್ದ ಇಸ್ಕಾನ್ ದೇವಸ್ಥಾನದ ಮೇಲೆ ಬಾಂಗ್ಲಾದೇಶಿಯರು ದಾಳಿ ನಡೆಸಿದ್ದರು. ಅಂದಿನಿಂದ ಹಿಂದೂಗಳ ಮೇಲಿನ ದೌರ್ಜನ್ಯ ಹೆಚ್ಚಾಗಿ, ಅಲ್ಲಿನ ಹಿಂದೂಗಳು ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಗೆ ಬೆಂಬಲವಾಗಿ ನಿಂತವರೇ, ಈ ಚಿನ್ಮೋಯ್ ಕೃಷ್ಣದಾಸ್ ಬ್ರಹ್ಮಚಾರಿ.