Thursday, December 5, 2024

Latest Posts

ಅಫಜಲಪುರ ಪುರಸಭೆ: ಬಿಜೆಪಿ ಅಭ್ಯರ್ಥಿ ಶಿಲ್ಪಗೆ ಜಯ

- Advertisement -

Political News: ಪಟ್ಟಣದ ವಾರ್ಡ್‌ ನಂಬರ್ 1ರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ, ಶಿಲ್ಪಾ ಮಳೇಂದ್ರ ಜಯ ಗಳಿಸಿದ್ದಾರೆ. 537 ಮತಗಳನ್ನು ಪಡೆದ ಶಿಲ್ಪಾ, ಕಾೇಂಗ್ರೆಸ್ ಅಭ್ಯರ್ಥಿ ಅ್ೇಬುಬಾಯಿ ವಿರುದ್ಧ ಜಯ ಗಳಿಸಿದ್ದಾರೆ. ಈ ವೇಳೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಮಳೇಂದ್ರ ಡಾಂಗೆ, ಶಿವಪುತ್ರ ಬುರುಲಿ, ಶಾಂತಯ್ಯ ಹಿರೇಮಠ್, ಮಲ್ಲಿಕಾರ್ಜುನ್ ನಿಂಗದಳ್ಳಿ, ಬಸವರಾಜ್ ವಾಳ್ಳಿ, ಪಾಶಾ ಮಣ್ಣೂರ್, ಶಾಂತೂಗೌಡ ಪಾಟೀಲ್, ಲಕ್ಷ್ಮೀಪುತ್ರ ಹುಲಿ, ಶಿವಾನಂದ ಸಲಗರ, ಪ್ರಕಾಶ್ ಜಮಾದಾರ್, ರಾಚಯ್ಯ ಮಠ, ತನ್ವೀರ್ ಮಣ್ಣೂರ್, ರಾಜು, ರವಿ, ಸಿದ್ದು ಮುಂತಾದವರಿಗೆ ಇದು ಪ್ರತಿಷ್ಠೆಯ ಕಣವಾಗಿತ್ತು.

ತಾಲೂಕಿನ ಬಂದರವಾಡ ಗ್ರಾಮಪಂಚಾಯತ್‌ನ ಉಪಚುನಾವಣೆಯಲ್ಲಿ ಸಿದ್ದಮ್ಮ ಈರಣ್ಣ ಹಡಪದ 386 ಮತಗಳನ್ನು ಪಡೆದು ಜಯಶಾಲಿಯಾದರೆ, ಪ್ರತಿಸ್ಪರ್ಧಿ ಶಾಂತಮ್ಮ ಸಿದ್ಧಯ್ಯ, 314 ಮತಗಳನ್ನು ಪಡೆದು ಸೋಲನ್ನಪ್ಪಿದ್ದಾರೆ. ತಾಲೂಕಿನ ಗೌರ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಬಳ್ಳುಂಡಗಿ ಗ್ರಾಮದ ವಿಜಯ್‌ ಕುಮಾರ್ ಪಾಟೀಲ್, ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

- Advertisement -

Latest Posts

Don't Miss