Tips: ಯಾರಿಗೆ ತಾನೇ ವಿದೇಶ ಪ್ರಯಾಣ ಮಾಡಬೇಕು ಅನ್ನೋ ಮನಸ್ಸಿರುವುದಿಲ್ಲ..? ಜೀವನದಲ್ಲಿ ಒಮ್ಮೆಯಾದರೂ ವಿಮಾನ ಪ್ರಯಾಣ ಮಾಡಬೇಕು ಅಂತಾ ಇದ್ದೇ ಇರುತ್ತದೆ. ಆದರೆ ಅಷ್ಟು ಹಣ ಇರುವುದಿಲ್ಲ. ಆದರೆ ನಿಮಗೆ ವಿದೇಶ ಪ್ರಯಾಣ ಮಾಡುವ ಅವಕಾಶ ಸಿಕ್ಕಾಗ, ನೀವು ಕೆಲ ತಪ್ಪು ಮಾಡಬಾರದು. ಹಾಗಾದ್ರೆ ಅದ್ಯಾವ ತಪ್ಪು ಎಂದು ತಿಳಿಯೋಣ ಬನ್ನಿ.
ಮೊದಲನೇಯ ನಿಯಮ: ವಿದೇಶಕ್ಕೆ ಹೋಗುವ ಮುನ್ನ ಸಾಧ್ಯವಾದರೆ ಟ್ರಾವೆಲ್ ಇನ್ಶೂರೆನ್ಸ್ ಮಾಡಿಸಿಕೊಳ್ಳಿ. ವಿದೇಶ ಪ್ರಯಾಣ ಮಾಡಿದಾಗ, ಕೆಲವರಿಗೆ ವಾತಾವರಣ, ಊಟ, ನೀರು ಚೇಂಜ್ ಆದಾಗ, ನೆಗಡಿ, ಜ್ವರ ಬರುವ ಸಾಧ್ಯತೆ ಇರುತ್ತದೆ. ಹಾಗಿದ್ದಾಗ, ಆರೋಗ್ಯ ಸರಿಯಾಗಲು ನೀವು ಅಲ್ಲಿನ ಆಸ್ಪತ್ರೆಗೆ ಹೋಗಿ, ಚಿಕಿತ್ಸೆ ಪಡೆಯಲೇಬೇಕಾಗುತ್ತದೆ. ಇಲ್ಲವಾದಲ್ಲಿ, ನೀವು ಟ್ರಿಪ್ ಎಂಜಾಯ್ ಮಾಡಲು ಸಾಧ್ಯವಿಲ್ಲ. ನಿಮ್ಮ ಬಳಿ ಟ್ರಾವೆಲ್ ಇನ್ಶೂರೆನ್ಸ್ ಇದ್ದರೆ, ನೀವು 14ರಿಂದ 15 ಸಾವಿರ ತುಂಬ ಬೇಕಾದ ಜಾಗದಲ್ಲಿ ಬರೀ 300 ರೂಪಾಯಿ ತುಂಬಬಹುದು.
ಇನ್ನು ನಿಮ್ಮ ಬಳಿ ಟ್ರಾವೆಲ್ ಇನ್ಶೂರೆನ್ಸ್ ಇದ್ದರೆ, ನಿಮ್ಮ ಫ್ಲೈಟ್ ಮಿಸ್ ಆದರೆ, ನೀವು ಟ್ರಿಪ್ ಕ್ಯಾನ್ಸಲ್ ಮಾಡಿಕೊಳ್ಳಬೇಕಿದ್ದರೆ, ನಿಮ್ಮ ಪಾಸ್‌ಪೋರ್ಟ್ ಮಿಸ್ ಆದರೆ, ನಿಮ್ಮ ಬ್ಯಾಗೇಜ್ ಮಿಸ್ ಆದರೆ, ಅಪಘಾತ ಅಥವಾ ಟ್ರಿಪ್ ಹೋಗುವುದು ಲೇಟ್ ಆದರೆ, ನೀವು ಈ ಇನ್ಶೂರೆನ್ಸ್ ಬಳಸಿ, ಹೆಚ್ಚು ಖರ್ಚಿಲ್ಲದೇ, ಈ ಎಲ್ಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಎರಡನೇಯ ನಿಯಮ: ವಿದೇಶ ಪ್ರಯಾಣ ಮಾಡುವಾಗ ಎಂದಿಗೂ ಭಾರತೀಯ ಕರೆನ್ಸಿ ಬಳಸಬೇಡಿ. ಇದರಿಂದ ಶಾಪ್ ಕೀಪರ್ ಖುದ್ದು ತಾವೇ ಡಿಸೈಡ್ ಮಾಡಿ, ತಮಗೆಷ್ಟು ಬೇಕೋ, ಅಷ್ಟು ಪೇಮೆಂಟ್ ಹೆಚ್ಚಿಸಿಕೊಳ್ಳುತ್ತಾರೆ. ಅದರ ಬದಲು, ಡಾಲರ್ ಅಥವಾ ನೀವು ಹೋಗುತ್ತಿರುವ ದೇಶದ ಕರೆನ್ಸಿ ಬಳಸಿ.
ಮೂರನೇಯ ನಿಯಮ: ಯಾವುದೇ ಕಾರಣಕ್ಕೂ ವಿದೇಶ ಪ್ರಯಾಣ ಮಾಡುವಾಗ ಆನ್‌ಲೈನ್ ಪೇಮೆಂಟ್ ಮಾಡಬೇಡಿ. ಅಲ್ಲದೇ, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಬಳಸಬೇಡಿ. ಇದರಿಂದ ನೀವು ಮಾರ್ಕ್‌ಪ್ ಫೀ ಕಟ್ಟಬೇಕಾಗುತ್ತದೆ. ಆದರೆ ನೀವು ಫಾರೆಕ್ಸ್ ಕಾರ್ಡ್ ಬಳಸಿದ್ದಲ್ಲಿ, ಹಣ ಉಳಿತಾಯ ಮಾಡಬಹುದು. ಈ ಕಾರ್ಡನ್ನು ಪ್ರಪಂಚದ ಯಾವುದೇ ಮೂಲೆಯಲ್ಲಿರುವ ಎಟಿಎಂ ಮಷಿನ್‌ನಲ್ಲಿ ಬಳಸಿ, ಹಣ ಡ್ರಾ ಮಾಡಬಹುದು.