Friday, December 27, 2024

Latest Posts

ಸಿಎಂ ಮತ್ತು ಡಿಸಿಎಂ ದೆಹಲಿ ಪ್ರವಾಸದ ಗುಟ್ಟು ಬಿಟ್ಟುಕೊಟ್ಟ ಸಚಿವ ಹೆಚ್.ಕೆ.ಪಾಟೀಲ್

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿದ ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಕೆಲ ವಿಷಯಗಳ ಬಗ್ಗೆ ಹೇಳಿಕೆ ನೀಡಿದ್ದಾರೆ.

ಸಿಎಂ ಮತ್ತು ಡಿಸಿಎಂ ದೆಹಲಿ ಪ್ರವಾಸದ ಗುಟ್ಟು ಬಿಟ್ಟುಕೊಟ್ಟಿರುವ ಸಚಿವರು, ಸಿದ್ದು ಸಚಿವ ಸಂಪುಟದ ಪುನರ್ ರಚನೆಗಾಗಿ ಹಾಲಿ ಸಚಿವರುಗಳ ಫರ್ಮಾಮೆನ್ಸ್ ವರದಿ ಸಿದ್ದವಾಗಿದೆಯೇ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದ್ದಾರೆ.

ಹೈಕಮಾಂಡ್ ಈಗಾಗಲೇ ಫರ್ಮಾಮೆನ್ಸ್ ವರದಿಯನ್ನು ಕೇಳಿದೆ. ಯಾವ ಮಂತ್ರಿಗಳು ನಿಮ್ಮ ನಿಮ್ಮ ಇಲಾಖೆಯಲ್ಲಿ ಏನೇನು ಫರ್ಮಾಮೆನ್ಸ್ ಅಂತ ಮಾಹಿತಿ ಕೇಳಿದೆ. ಫರ್ಮಾಮೆನ್ಸ್ ಪರಿಶೀಲನೆ ಮಾಡೋದು ನಮ್ಮ ಕಾಂಗ್ರೆಸ್ ನಲ್ಲಿ ನಡೆದುಕೊಂಡ ಬಂದ ಪದ್ದತಿ. ನಮ್ಮ ಪಕ್ಷ ಹೈಕಮಾಂಡ್ ಎಲ್ಲಾ ಮಂತ್ರಿಗಳ ಫರ್ಮಾಮೆನ್ಸ್ ಪರಿಶೀಲನೆ ಮಾಡುತ್ತಿದೆ ಎಂದು ಪಾಟೀಲರು ಹೇಳಿದ್ದಾರೆ.

ಮುಖ್ಯ ಮಂತ್ರಿ ಬದಲಾವಣೆ ಮಾಧ್ಯಮಗಳ ಸೃಷ್ಟಿ. ಸಿಎಂ ಬದಲಾವಣೆ ಚರ್ಚೆಯ ವಸ್ತುವೇ ಅಲ್ಲಾ ಇದು ಅನಾವಶ್ಯಕ ಚರ್ಚೆ. ಸಿಎಂ ಬಗ್ಗೆ ಈಗಾಗಲೇ ಎಲ್ಲಾ ಸ್ಪಷ್ಟತೆಯನ್ನು ಡಿಕೆ ಶಿವಕುಮಾರ್ ನೀಡಿದ್ದಾರೆ. ಸ್ವತಃ ಸಿಎಂ ಸಹ ಸ್ಪಷ್ಟನೆ ನೀಡಿದ್ದಾರೆ ಹೈಕಮಾಂಡ್ ಖರ್ಗೆ ಅವರು ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸಿಎಂ ಬದಲಾವಣೆ ಚರ್ಚೆ ವಸ್ತು ಅಲ್ಲಾ ಎಂದು ಸಚಿವರು ಹೇಳಿದ್ದಾರೆ.

- Advertisement -

Latest Posts

Don't Miss