Dharwad News: ಧಾರವಾಡ: ಯೋಗೀಶ್ ಗೌಡ ಕೊಲೆ ಕೇಸ್ಗೆ ಸಂಬಂಧಿಸಿದಂತೆ, ಎ1 ಆರೋಪಿಯಾಗಿದ್ದ ಬಸವರಾಜ್ ಮುತಗಿ ಎಂಬುವವರು ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಬಸವರಾಜ್ ಮುತಗಿ, ಯೋಗೀಶ್ ಗೌಡ ಕೊಲೆ ಕೇಸ್ ವಿಚಾರವಾಗಿ ಮಾಫಿ ಸಾಕ್ಷಿಯಾಗಿದ್ದ. ನ್ಯಾಯಾಲಯ ನನಗೆ ಅಪೂರ್ವರ ಅಂತ ಆದೇಶ ಮಾಡಿದೆ. ಅವತ್ತಿನಿಂದ ಇಲ್ಲಿಯವರೆಗೆ ಜೀವ ಬೆದರಿಕೆ ಕರೆಗಳು ಬರ್ತಾ ಇವೆ. ಆರೋಪಿ ನಂಬರ 9 ಅಶ್ವಥ್ ಎಂಬುವರು ನನಗೆ ಬೆದರಿಕೆ ಹಾಕಿದ್ದಾರೆ. ನಿನ್ನೆ ಮತ್ತೆ ರಾತ್ರಿ 10:30 ಕ್ಕೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ಪರೋಕ್ಷವಾಗಿ ಮಾನಸಿಕವಾಗಿ ತೊಂದರೆ ಕೊಡುತ್ತಿದ್ದಾರೆ. ಸಾಕಷ್ಟು ವಿಷಯ ಗಳ ಬಗ್ಗೆ ನಾನು ಪೋಲಿಸರಿಗೆ ಮತ್ತು ಸಿಬಿಐ ಗಮನಕ್ಕೆ ತಂದಿದ್ದೇನೆ. ಕುಟುಂಬಕ್ಕೆ ಬೆದರಿಕೆ ಇರೋ ಕಾರಣಕ್ಕೆ ನ್ಯಾಯಾಲಯ ನನಗೆ ಸೆಕ್ಯೂರಿಟಿ ಕೊಟ್ಟಿದ್ದಾರೆ. ನಾನೂ ಕೂರ್ಟ್ ಗಮನಕ್ಕೂ ತರುವೆ. ಪೋನ್ ಮೂಲಕ ಬೆದರಿಕೆ ಹಾಕುತ್ತಿದ್ದಾರೆ ಎಂದು ಬಸವರಾಜ್ ಹೇಳಿದ್ದಾರೆ.
ಇವತ್ತು ನಾನು ಅಶ್ವಥ್ ವಿರುದ್ದ ದೂರು ಕೊಟ್ಟಿದ್ದೇನೆ. ಅವರು ಕ್ರಮ ಕೈಗೋಳ್ತಾರೆ ಅನ್ನೋದು ನಂಬಿಕೆ ಇದೆ. ನ್ಯಾಯ ಉಳಿಯಲೇಬೇಕು ನನಗೆ ನ್ಯಾಯಾಲಯದ ಮೆಲೆ ಭರವಸೆ ಇದೆ. ಮಾಪಿ ಸಾಕ್ಷಿಯಾದಾಗಿಂದ ಜೀವ ಬೆದರಿಕೆ ಬಹಳಷ್ಟು ಜೋರಾಗಿದೆ. ಈ ಕೇಸನಲ್ಲಿ ಹೋರಾಟ ಮಾಡುವವರು ಹುಷಾರಾಗಿರಬೇಕು. ಅವರೆಲ್ಲರಿಗೂ ಬಹಳಷ್ಟು ತೊಂದರೆ ಇದೆ. ಯಾರನ್ನಾದರೂ ಜೈಲಿಗೆ ಕಳುಹಿಸಬೇಕು, ಬೇಲ್ ಕ್ಯಾನ್ಸಲ್ ಮಾಡಬೇಕು. ಅನ್ನೋ ಬದಲು ಜಸ್ಟಿಸ್ ಉಳಿಯಬೇಕು. ಯುವಕರನ್ನ ಬಲಿ ಬಕೊಡಬಾರದು ಎಂಬುದು ನನ್ನ ಉದ್ದೇಶ. ಈ ಹೋರಾಟದಲ್ಲಿ ಭಾಗಿಯಾದವರಿಗೆ ಮುಂದೆ ಜೀವನದಲ್ಲಿ ತೊಂದರೆ ಇದೆ ಎಂದು ಬಸವರಾಜ್ ಮುತಗಿ ಮಾಧ್ಯಮದ ಮುಂದೆ ಹೇಳಿದ್ದಾರೆ.