Thursday, December 12, 2024

Latest Posts

ಸಿಖ್ಖರು ಯಾಕೆ ತಲೆಗೆ ಟರ್ಬನ್ ಕಟ್ಟುತ್ತಾರೆ..? ಇದರ ಹಿಂದಿರುವ ಸಿಕ್ರೇಟ್ ಏನು..?

- Advertisement -

Web story: ಭಾರತದಲ್ಲಿ ಹಲವು ಜಾತಿ ಮತದವರಿದ್ದಾರೆ. ಅದರಲ್ಲಿ ಸಿಖ್ಖರು ಕೂಡ ಒಬ್ಬರು. ಸಿಖ್ಖರನ್ನು ಹೇಗೆ ಕಂಡುಹಿಡಿಯಬಹುದು ಎಂದರೆ, ಅವರು ತಲೆಗೆ ಸುತ್ತಿಕೊಂಡ ಟರ್ಬನ್ ಮೂಲಕ. ತಲೆಗೆ ಸುತ್ತಿಕೊಳ್ಳುವ ಟರ್ಬನ್ ಸಿಖ್ಖರ್ ಸಿಂಬಲ್ ಆಗಿದ್ದು, ಇದರ ಹಿಂದೆ ಒಂದು ರೋಚಕ ಕಥೆ ಇದೆ. ಹಾಗಾದ್ರೆ ಸಿಖ್ಖರು ಏಕೆ ಟರ್ಬನ್ ಸುತ್ತುತ್ತಾರೆ ಅಂತಾ ತಿಳಿಯೋಣ ಬನ್ನಿ.

ಸಿಖ್ಖರ ಗುರು ಗುರು ಗೋವಿಂದ್ ಸಿಂಗ್ ಎಂಬುವವರು ಸಿಖ್ಖರಿಗೆಲ್ಲ ಒಂದು ಸಂದೇಶ ನೀಡುತ್ತಾರೆ. ಈ ದೇಹ ದೇವರ ದಯೆಯಿಂದ ನಮಗೆ ಸಿಕ್ಕಿದೆ. ಈ ದೇಹ ಹೇಗೆ ಹುಟ್ಟಿತೋ, ಅದೇ ರೀತಿ ಕೊನೆಯವರೆಗೂ ಇದ್ದು, ಮಣ್ಣು ಸೇರಬೇಕು. ಹಾಗಾಗಿ ದೇವರು ನಮಗೆ ಯಾವ ರೀತಿಯ ರೂಪ ನೀಡಿದ್ದಾನೋ, ಅದೇ ರೀತಿ ನಾವು ಸಿಖ್ಖರೆಲ್ಲ ಇರೋಣ. ಹಾಗಾಗಿ ಸಿಖ್ಖರು ಯಾರೂ ಎಂದಿಗೂ ಕೂದಲು ಕತ್ತರಿಸಬಾರದು. ಕೂದಲಿಗೆ ಟರ್ಬನ್ ಕಟ್ಟಿಕೊಳ್ಳುವ ಮೂಲಕ, ನಾವು ಕೂದಲಿನ ರಕ್ಷಣೆ ಮಾಡೋಣವೆಂದು ಕರೆ ನೀಡಿದ್ದರು.

ಆ ಕಾರಣಕ್ಕಾಗಿಯೇ ಸಿಖ್ಖರು ಇಂದಿಗೂ ತಲೆಗೂದಲು ಕತ್ತರಿಸಿಕೊಳ್ಳುವುದಿಲ್ಲ. ಇರುವ ಕೂದಲು ಟರ್ಬನ್‌ನಿಂದ ಸುತ್ತಿಕೊಳ್ಳುತ್ತಾರೆ. ಇದಕ್ಕೂ ಮುನ್ನ ಬರೀ ರಾಜವಂಶಸ್ಥರು, ಶ್ರೀಮಂತರು ಅಷ್ಟೇ ಟರ್ಬನ್ ಸುತ್ತುತ್ತಿದ್ದರು. ಆದರೆ ಗುರು ಗೋವಿಂದ ಸಿಂಗ್ ಅವರು ಈ ರೀತಿ ಕರೆ ಕೊಟ್ಟ ಬಳಿಕ, ಸಿಖ್ಖರೆಲ್ಲರೂ ಸಮಾನರಾಗಿ ತಮ್ಮ ಮತಕ್ಕೆ ಬೆಲೆ ಕೊಡಬೇಕು ಎಂದು ಎಲ್ಲರಿಗೂ ಟರ್ಬನ್ ಸುತ್ತಿಕೊಳ್ಳುವ ಅವಕಾಶ ಕೊಡಲಾಯಿತು. ಅಲ್ಲದೇ ಕೆಲವರು ಟರ್ಬನ್‌ನಲ್ಲಿ ಚೂರಿಯನ್ನು ಇಟ್ಟುಕೊಳ್ಳುತ್ತಾರೆ. ಟರ್ಬನ್‌ನನ್ನು ಸಿಖ್ಖರು ಪಗಡಿ ಎನ್ನುತ್ತಾರೆ.

10ನೇ ಗುರುವಾದ ಗುರು ಗೋವಿಂದ್ ಸಿಂಗ್ ಸಿಖ್ಖರೆಲ್ಲರೂ ಟರ್ಬನ್ ಧರಿಸಲೇಬೇಕು. ಮತ್ತು ಈ ಚಿಹ್ನೆಯಿಂದಲೇ, ನಿಮಗೆ ನಿಮ್ಮವರ ಪರಿಚಯವಾಗಬೇಕು. ಎಲ್ಲ ವಿಷಯದಲ್ಲೂ ಎಲ್ಲರಲ್ಲೂ ಐಕ್ಯತೆ ಇರಬೇಕು ಎಂದು ಸಂದೇಶ ಸಾರಿದರು. ಹಾಗಾಗಿಯೇ ಸಿಖ್ಖರು ತಮ್ಮವರನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ. ಅಲ್ಲದೇ, ನೀವು ಎಲ್ಲ ಜಾತಿ, ಮತದವರು ಬೇಡಿ ತಿನ್ನುವುದು ನೋಡಿದ್ದೀರಿ. ಆದರೆ ಸಿಖ್ ಧರ್ಮದ ಓರ್ವ ಭಿಕ್ಷುಕ ಕೂಡ ಬೇಡಿ ತಿನ್ನುವುದಿಲ್ಲ. ಬದಲಾಗಿ ಪ್ರತಿಯೊಬ್ಬನೂ ದುಡಿದು ತಿನ್ನುತ್ತಾನೆ.

ಅಲ್ಲದೇ, ಸಿಖ್ಖರ ಗುರುದ್ವಾರಗಳಲ್ಲಿ ಎಷ್ಟೇ ಶ್ರೀಮಂತ ಸಿಖ್ಖನಾದರೂ ಸರಿ, ಆತ ತಲೆ ಮೇಲೆ ಟರ್ಬನ್ ಧರಿಸಿರಬೇಕು, ಹೆಣ್ಣು ಮಕ್ಕಳು ತಲೆ ಮೇಲೆ ಶಾಲ್ ಹಾಕಿಕೊಂಡೇ ಹೋಗಬೇಕು. ಇನ್ನು ಹಾಗೆ ಹೋಗುವವರು ಯಾರೇ ಆಗಲಿ, ಯಾವ ಜಾತಿಯವರೇ ಆಗಲಿ, ಎಂಥ ಗಣ್ಯರೇ ಆಗಲಿ, ಅವರೆಲ್ಲರೂ ಈ ನಿಯಮವನ್ನು ಅನುಸರಿಸಲೇಬೇಕು.

ಗುರುದ್ವಾರಗಳಲ್ಲಿ ಎಷ್ಟೋ ಸಿಖ್ ಶ್ರೀಮಂತರು, ಸೇವೆಯಾಗಿ, ಒಂದು ಚೂರು ಅಹಂ ಇಲ್ಲದೇ, ಚಪ್ಪಲಿ ಕಾಯುವುದರಿಂದ ಹಿಡಿದು, ಅನ್ನದಾನ ಮಾಡುವುದರವರೆಗೆ ಭಕ್ತಿಯಿಂದ ಸೇವೆ ಮಾಡುತ್ತಾರೆ.

- Advertisement -

Latest Posts

Don't Miss