Saturday, December 14, 2024

Latest Posts

Tollywood News: ಜೈಲಿನಿಂದ ಹೊರಬಂದ ಬಳಿಕ ನಟ ಅಲ್ಲು ಅರ್ಜುನ್ ಮೊದಲ ಪ್ರತಿಕ್ರಿಯೆ..

- Advertisement -

Tollywood News: ನಟ ಅಲ್ಲು ಅರ್ಜುನ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಅಲ್ಲು ನಿನ್ನೆ ಇಡೀ ದಿನ ಜೈಲಿನಲ್ಲಿ ಕಳೆಯಬೇಕಾಯಿತು. ಇಂದು ನಟ ಬಿಡುಗಡೆಯಾಗಿದ್ದು, ಮನೆಗೆ ಬಂದಿದ್ದಾರೆ. ಈ ವೇಳೆ ಪತ್ನಿಯನ್ನು ಪ್ರೀತಿಯಿಂದ ತಬ್ಬಿಕೊಂಡಿದ್ದು, ಅಲ್ಲು ಮನೆಯವರು ಅರ್ಜುನ್‌ಗೆ ದೃಷ್ಟಿ ತೆಗೆದಿದ್ದಾರೆ.

ಬಳಿಕ ಮಾಧ್ಯಮದ ಜೊತೆ ಮಾತನಾಡಿರುವ ಅಲ್ಲು, ಅಭಿಮಾನಿಗಳಿಗೆ ಧನ್ಯವಾದ, ನಾನು ಆರಾಮವಾಗಿದ್ದೇನೆ. ಕಾನೂನ ಪ್ರಕ್ರಿಯೆಯನ್ನು ಗೌರವಿಸಿ, ತನಿಖೆಗೆ ಸಹಕರಿಸುತ್ತೇನೆ. ಮೃತ ರೇವತಿ ಸಾವಿಗೆ ಸಂತಾಪ ಸೂಚಿಸುತ್ತೇನೆ. ಸಿನಿಮಾ ನೋಡಲು ಹೋದಾಗ ಈ ಘಟನೆ ನಡೆದಿದ್ದು, ಇದೊಂದು ಅಪಘಾತವೆಂದು ಅಲ್ಲು ಅರ್ಜುನ್ ಹೇಳಿದ್ದಾರೆ.

ಅಲ್ಲದೇ, ನಾನು ನನ್ನ ಮತ್ತು ಹಲವರ ಸಿನಿಮಾ ನೋಡಲು ಆ ಥಿಯೇಟರ್‌ಗೆ ಹೋಗಿದ್ದೇನೆ. 30 ಬಾರಿ ನಾನು ಸಂಧ್ಯಾ ಥಿಯೇಟರ್‌ಗೆ ಹೋಗಿದ್ದೇನೆ. ಆದರೆ ಇಂಥ ಘಟನೆ ಯಾವತ್ತೂ ನಡೆದಿರಲಿಲ್ಲ ಎಂದು ಅಲ್ಲು ಬೇಸರ ವ್ಯಕ್ತಪಡಿಸಿದ್ದಾರೆ.

ಸಂಧ್ಯಾ ಚಿತ್ರಮಂದಿರದಲ್ಲಿ ಪ್ರಿಮಿಯರ್ ಶೋ ಇದ್ದ ಕಾರಣ, ಓರ್ವ ವ್ಯಕ್ತಿ ಆತನ ಇಬ್ಬರು ಮಕ್ಕಳು ಮತ್ತು ಪತ್ನಿಯ ಜೊತೆ ಚಿತ್ರಮಂದಿರಕ್ಕೆ ಸಿನಿಮಾ ನೋಡಲು ಬಂದಿದ್ದ. ಅಂದು ಅಲ್ಲಿ ಅಲ್ಲು ಅರ್ಜುನ್ ಬರುತ್ತಾರೆ, ಪುಷ್ಪ 2 ಸಿನಿಮಾ ಬಗ್ಗೆ ಮಾತನಾಡುತ್ತಾರೆ ಎಂದು ಹೇಳಲಾಗಿತ್ತು. ನೆಚ್ಚಿನ ನಟನೊಂದಿಗೆ ಆತನ ನಟನೆ ಸಿನಿಮಾವೂ ನೋಡಬಹುದು ಎಂಬ ಖುಷಿಯಲ್ಲಿ ಕುಟುಂಬ ಆ ದಿನ ಥಿಯೇಟರ್‌ಗೆ ಬಂದಿತ್ತು. ಆದರೆ ಅಲ್ಲಿ ನೆರೆದಿದ್ದ ಇತರ ಅಭಿಮಾನಿಗಳು ಅಲ್ಲು ಅರ್ಜುನ್ ಅವರನ್ನು ನೋಡಿ, ಹುಚ್ಚೆದ್ದು ಕುಣಿದಿದ್ದು, ಪೊಲೀಸರು ಅಭಿಮಾನಿಗಳನ್ನು ನಿಯಂತ್ರಿಸಲು ಶುರು ಮಾಡಿದ್ದರು.

ಆಗ ಕಾಲ್ತುಳಿತ ಉಂಟಾಗಿ, ಓರ್ವ ಮಹಿಳೆ ಸಾವನ್ನಪ್ಪಿದರೆ, ಆಕೆಯ ಪುತ್ರ ಸಾವು ಬದುಕಿನ ನಡುವೆ ಹೋರಾಡುವಷ್ಟು ತೀವ್ರವಾಗಿ ಅಸ್ವಸ್ಥಗೊಂಡಿದ್ದನು. ಈ ಬಗ್ಗೆ ಅಲ್ಲು ಕ್ಷಮೆ ಕೇಳಿ, ಕೇಸ್ ದಾಖಲಿಸಬೇಡಿ ಎಂದು ಮನವಿ ಮಾಡಿದ್ದರು. ಆದರೆ ಅಲ್ಲು ವಿರುದ್ಧ ಕೇಸ್ ದಾಖಲಾಗಿದ್ದು, ಅವರೇಕೆ ಚಿತ್ರ ಮಂದಿರಕ್ಕೆ ಬರಬೇಕಿತ್ತು..? ಅವರು ಬಂದಿದ್ದಕ್ಕೇ ಈ ಅವಘಡ ನಡೆಯಿತು ಎಂದು ಹೇಳಿ, ದೂರು ನೀಡಲಾಗಿತ್ತು. ಇದೀಗ ಅಲ್ಲು ಅರ್ಜುನ್ ಅವರನ್ನು ಚೀಕಟಪಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದರು. ಇದೀಗ ಅಲ್ಲುಗೆ ಬೇಲ್ ಸಿಕ್ಕಿದೆ.

- Advertisement -

Latest Posts

Don't Miss