International News: ಮ್ಯೂಸಿಕ್ ಕನ್ಸರ್ಟ್ ವೇಳೆ ಹಿಜಬ್ ಧರಿಸಿಲ್ಲವೆಂದು ಇರಾನ್ ಗಾಯಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಗಾಯಕಿ ಪರಸ್ಸೋ ಅಹ್ಮದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಗಾಯಕಿ ಹಿಜಬ್ ಇಲ್ಲದೇ ಲೈವ್‌ನಲ್ಲಿ ಹಾಡು ಹಾಡಿದ್ದರು. ಅಲ್ಲದೇ, ಕೈ ಕಾಣುವಂತೆ ಸ್ಲಿವ್‌ಲೆಸ್ ಬಟ್ಟೆ ಹಾಕಿದ್ದರು. ಇವರು ಸ್ಟೇಜ್‌ನಲ್ಲಿ ಹಾಡು ಹಾಡುವಾಗ, ಆ ಸ್ಟೇಜಿನಲ್ಲಿ ನಾಲ್ಕೈದು ಪುರುಷರು ಬೇರೆ ಬೇರೆ ಸಂಗೀತ ವಾದ್ಯಗಳನ್ನು ಬಾರಿಸುತ್ತಿದ್ದರು. ಈ ಎಲ್ಲ ಕಾರಣಗಳನ್ನು ಕೊಟ್ಟು ಗಾಯಕಿ ಪರಸ್ಸೋಳನ್ನು ಅರೆಸ್ಟ್ ಮಾಡಲಾಗಿದೆ.
27 ವರ್ಷದ ಗಾಯಕಿ ತನ್ನ ಸಂಗೀತ ಕಾರ್ಯಕ್ರಮದ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ನೋಡಿ, ಇರಾನ್ ಪೊಲೀಸರು ಈಕೆಯನ್ನು ಅರೆಸ್ಟ್ ಮಾಡಿದ್ದಾರೆ. ಇದಕ್ಕೆ ಕಾರಣವೇನು ಎಂದರೆ, ಇರಾನ್ನಲ್ಲಿ ಹಿಜಬ್ ಹಾಕದೇ ಯಾರೇ ಆಗಲಿ ಯಾವುದೇ ಕಾರ್ಯಕ್ರಮಕ್ಕೆ ಹೋಗುವಂತಿಲ್ಲ. ಹಿಜಬ್ ಕಡ್ಡಾಯವಾಗಿ ಹಾಕಲೇಬೇಕು. ಅಲ್ಲದೇ ಮೈ ಕಾಣುವಂತೆ ಬಟ್ಟೆಯನ್ನು ಕೂಡ ಧರಿಸುವಂತಿಲ್ಲ ಎಂದು ನಿಯಮ ಮಾಡಲಾಗಿದೆ.
ಅಷ್ಟೇ ಅಲ್ಲದೇ, ಮಹಿಳೆಯರು ಹಾಡುವುದನ್ನು, ನೃತ್ಯ ಮಾಡುವುದನ್ನು ಕೂಡ ನಿಷೇಧಿಸಲಾಗಿದೆ. ಆಯ್ದ ಕಾರ್ಯಕ್ರಮಗಳಲ್ಲಿ, ಆಯ್ದ ಹಾಡುಗಳನ್ನು ಮಾತ್ರ ಹಾಡಬಹುದು. ಈ ಎಲ್ಲ ನಿಯಮಗಳನ್ನು ಉಲ್ಲಂಘಿಸಿದರೆ, ಅಂಥ ಮಹಿಳೆಯರಿಗೆ ಜೈಲು ಶಿಕ್ಷೆ ಗ್ಯಾರಂಟಿ.