ಕೆಲವು ವರ್ಷಗಳ ಹಿಂದೆ ಬಹಳಷ್ಟು ಬೇಡಿಕೆಯಲ್ಲಿದ್ದ ಎಂ.ಬಿ.ಎ.-ಮಾಸ್ಟರ್ ಆಫ್ ಬಿಸಿನೆಸ್ ಆಡ್ಮಿನಿಸ್ಟ್ರೇಷನ್ ಗೆ ಬೇಡಿಕೆ ತೀರ ಕುಸಿದಿದೆ. ಸದ್ಯ ಈ ರೀತಿಯ ಪ್ರಶ್ನೆ ಎದುರಾಗಿದೆ. ಯಾಕಂದ್ರೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪ್ರವೇಶ ಪರೀಕ್ಷೆ ಪಿ.ಜಿ. ಸಿಇಟಿ-2024ರ ಮೂರು ಸುತ್ತಿನ ಕೌನ್ಸಲಿಂಗ್ ನಂತರವೂ ರಾಜ್ಯದ ಸರ್ಕಾರಿ ಮತ್ತು ಖಾಸಗಿ ಮಹಾವಿದ್ಯಾಲಯಗಳಲ್ಲಿ ಪ್ರವೇಶಕ್ಕೆ ಇದ್ದ 21,194 ಸೀಟುಗಳಲ್ಲಿ 8,742 ಸೀಟುಗಳು ಬಾಕಿ ಉಳಿದಿವೆ.
ಹೌದು ಎಂ.ಬಿ.ಎ.ಗೆ ಸದ್ಯ ಕೇವಲ 12, 552 ಸೀಟುಗಳು ಮಾತ್ರ ಭರ್ತಿಯಾಗಿವೆ. ಶೇ. 41 ರಷ್ಟು ಸೀಟುಗಳಿಗೆ ವಿದ್ಯಾರ್ಥಿಗಳೇ ಇಲ್ಲದಂತಾಗಿದೆ. ಸರ್ಕಾರಿ ಮಹಾವಿದ್ಯಾಲಯ, ವಿಶ್ವವಿದ್ಯಾಲಯಗಳಲ್ಲಿ ಇದ್ದ 2,588 ಸೀಟುಗಳ ಪೈಕಿ 2019 ಭರ್ತಿಯಾಗಿದ್ದು, 569 ಸೀಟುಗಳು ಖಾಲಿ ಇವೆ.
ಇನ್ನು ಖಾಸಗಿ ಮಹಾವಿಶ್ವವಿದ್ಯಾಲಯಗಳಲ್ಲೂ ಕೂಡ 8 ಸಾವಿರಕ್ಕೂ ಹೆಚ್ಚಿನ ಸೀಟುಗಳು ಖಾಲಿ ಇವೆ. ಪಿಜಿ,ಸಿಇಟಿ ಮಾತ್ರ ಅಲ್ಲದೇ ಖಾಸಗಿ ಮಹಾವಿಶ್ವವಿದ್ಯಾಲಯಗಳಲ್ಲಿ ಆಡಳಿತ ಮಡಳಿಯ ಕೋಟಾದ ಎಂ.ಬಿ.ಎ. ಸೀಟುಗಳು ಕೂಡ ಭರ್ತಿಯಾಗ್ತಿಲ್ಲ.
ಇದ್ರಿಂದಾಗಿ , ಖಾಸಗಿ ಸಂಸ್ಥೆಗಳು ತಮ್ಮ ಕೋಟಾದ ಸೀಟುಗಳನ್ನು ಕೂಡ ಪಿಜಿ ಸಿಇಟಿ ಮೂಲಕವೇ ಭರ್ತಿ ಮಾಡಿಕೊಡುವಂತೆ ಕರ್ನಾಟಕ ಪ್ರಾಧಿಕಾರ ಕೇಳಿಕೊಂಡಿದೆ.
ಇನ್ನು ಎಂಬಿಎ ಗೆ ಬೇಡಿಕೆ ಹೆಚ್ಚಿದೆ ಅನ್ನೋದಕ್ಕಾಗಿ , ಆ ಅಂದಾಜಿನ ಮೇಲೆಯೇ ಈ ವರ್ಷದಲ್ಲಿ ಅನೇಕ ಖಾಸಗಿ ಸಂಸ್ಥೆಗಳು ಬೇಕಾಬಿಟ್ಟಿಯಾಗಿ ಎಂಬಿಎ ಸೀಟುಗಳನ್ನ ಹಂಚಿಬಿಟ್ಟಿವೆ. ಆದ್ರೆ ವಿದ್ಯಾರ್ಥಿಗಳಿಂದ ಅದೇ ಪ್ರಮಾಣದ ಬೇಡಿಕೆ ಇದೆಯೋ ಇಲ್ವೋ ಅನ್ನೋದ್ರ ಬಗ್ಗೆ ಸೂಕ್ತ ತನಿಖೆ ಆಗದೇ ಇರೋದ್ರಿಂದ ಈ ಬಾರಿ ಅನೇಕ ಸೀಟುಗಳು ಖಾಲಿ ಉಳಿಯೋಕೆ ಕಾರಣ ಅಂತ ಹೇಳಲಾಗ್ತಿದೆ.