ಬಿಗ್ ಬಾಸ್ ಸೀಸನ್ 11ರಲ್ಲಿ ಗೋಲ್ಡ್ ಸುರೇಶ್ ಏಕಾಏಕಿ ಮನೆಯಿಂದ ಆಚೆ ಹೋಗಿದ್ದರು. ಮನೆಯಿಂದ ಆಚೆ ಹೋದ ಬಳಿಕ, ಅವರ ತಂದೆ ತೀರಿಕೊಂಡರು ಅನ್ನೋ ವದಂತಿಗಳು ಹಬ್ಬಿತ್ತು. ಅಲ್ಲದೇ ಆ ವಿಷಯದ ಬಗ್ಗೆ ಸಾಕಷ್ಟು ಚರ್ಚೆ ಅಗಿತ್ತು. ಆದರೆ ಅದೆಲ್ಲ ಸುಳ್ಳು ಎಂಬುದು ಸ್ವತಃ ಅವರ ತಂದೆಯೇ ಹೇಳಿಕೆ ಕೊಟ್ಟಿದ್ದರು. ಇದೀಗ ಸುರೇಶ್ ಕಲರ್ಸ್ ಕನ್ನಡ ಲೈವ್ ಮೂಲಕ ಅಸಲಿ ಸತ್ಯ ಏನು ಎಂಬುದನ್ನು ರಿವೀಲ್ ಮಾಡಿದ್ದಾರೆ.
ಧರ್ಮ ಪತ್ನಿಗೆ ಬ್ಯುಸಿನೆಸ್ ನೊಡಿಕೊ ಅಂತ ಹೇಳಿ ಹೋಗಿದ್ದೆ.ಅವರಿಗೆ ಬ್ಯುಸಿನೆಸ್‌ನ ಹ್ಯಾಂಡಲ್ ಮಾಡೋಕೆ ಆಗಿಲ್ಲ. ವರ್ಕ್ ಪ್ರೆಷರ್ ಅವರಿಗೆ ಜಾಸ್ತಿ ಆಯ್ತು. ಆ ಸಮಯದಲ್ಲಿ ಅವರಿಗೆ ಹೀಗೆ ಅನ್ನಿಸೋದು ಸಹಜ. ಹೀಗಾಗಿ ನನ್ನ ಪತ್ನಿಗೆ ನಾನು ಹೊರಗಡೆ ಬಂದು ಆ ಗೊಂದಲಗಳಿಗೆ ಸಪೋರ್ಟ್ ಮಾಡಬೇಕಿತ್ತು. ಈಗ ಯಾವುದೇ ತೊಂದರೆಗಳಿಲ್ಲ. ಬ್ಯುಸಿನೆಸ್ ಕಂಟ್ರೋಲ್ ಬಂದಿದೆ.
ಸುಳ್ಳು ಸುದ್ದಿ ನಂಬಬೇಡಿ. ಅದು ಯಾವದಕ್ಕೂ ಬೇಜಾರಿಲ್ಲ. ನನಗೆ ಉದ್ಯಮ ಕೂಡ ಮುಖ್ಯ. ನನ್ನ ನಂಬಿರುವ ಸುಮಾರು ಕುಟುಂಬದವರಿಗೆ ನಾನು ಸಹಾಯ ಮಾಡಬೇಕಿತ್ತು. ಕು. ಕಾಲಿನ ಗಾಯದಿಂದ ತುಂಬಾ ವೀಕ್ ಆಗಿ ಬಂದಿದ್ದೇನೆ. ಆರೋಗ್ಯದ ಸಮಸ್ಯೆ ಕಾಡ್ತಾ ಇತ್ತು. ಆರೋಗ್ಯ ಸುಧಾರಿಸುತ್ತಿದೆ. ಎಂದಿದ್ದಾರೆ.
ಗೋಲ್ಡ್ ಸುರೇಶ್ ಕಳೆದ ವಾರ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ರು. ಕ್ಯಾಪ್ಟನ್ ಆಗಿ ಗೇಮ್ ಶುರು ಮಾಡುವ ಮುನ್ನವೇ ಗೋಲ್ಡ್ ಸುರೇಶ್ ದೊಡ್ಮನೆಯಿಂದ ಹೊರಗೆ ಹೋಗಿದ್ದರು. ಸುರೇಶ್ ತಂದೆ ನಿಧನರಾಗಿದ್ದಾರೆ ಹೀಗಾಗಿ ಸುರೇಶ್ ದೊಡ್ಮನೆಯಿಂದ ಹೊರಗೆ ಹೋಗಿದ್ದಾರೆ ಎನ್ನಲಾಗಿತ್ತು. ಆದ್ರೆ ಅದು ಸುಳ್ಳು ಸುದ್ದಿ ಆಗಿತ್ತು.
ಉತ್ತರ ಕರ್ನಾಟಕದ ಸುರೇಶ್ ಅವರು ಸಿಕ್ಕಾಪಟ್ಟೆ ರಿಚ್. ಹೊರಗಡೆ ಸಾವಿರಾರು ಜನರ ಜೊತೆ ಫೈಟ್ ಮಾಡಿ ನಾನು ಗೆದ್ದಿದ್ದೇನೆ, ಒಳಗಡೆ ಹೋಗಿ ನಾನ್ಯಾಕೆ ಗೆಲ್ಲೋಕಗಾಲ್ಲ? ಎಂದು ಯೋಚಿಸಿ ಇವರು ಬಿಗ್ಬಾಸ್ ಮನೆಗೆ ಕಾಲಿಟ್ಟಿದ್ದರು. ಭರ್ತಿ 2 ಕೋಟಿ ರೂಪಾಯಿ ಬೆಲೆ ಬಾಳುವ ಬಂಗಾರವನ್ನು ಧರಿಸಿಕೊಂಡೇ ಓಡಾಡುತ್ತಾರೆ ಈ ಗೋಲ್ಡ್ ಸುರೇಶ್.
ಕಳೆದ ಬಾರಿ ವರ್ತೂರು ಸಂತೋಷ್ ಇದ್ದಂತೆ ಈ ಸಲ ಗೋಲ್ಡ್ ಸುರೇರ್ಶ ದೊಡ್ಡ ಮನೆಗೆ ಎಂಟ್ರಿ ಕೊಟ್ಟಿದ್ದರು. ದಪ್ಪ ದಪ್ಪದ ಹಾರಗಳು, ಸರಗಳು, ಉಂಗುರಗಳು, ಕಡಗಗಳನ್ನು ಕೈಯಲ್ಲಿ ಧರಿಸಿಕೊಂಡು ಅದರ ಜೊತೆ ವೈಟ್ ಪಂಚೆ ವೈಟ್ ಶರ್ಟ್ ಧರಿಸಿ ಮಿಂಚಿದ್ದರು.