Wednesday, October 15, 2025

Latest Posts

BELGAVI: ಕಾಂಗ್ರೆಸ್​ ಬ್ಯಾನರ್​ನಲ್ಲಿ ಕಾಶ್ಮೀರ ನಾಪತ್ತೆ! ಅಧಿವೇಶನದಲ್ಲೇ ಕೈ ಯಡವಟ್ಟು!

- Advertisement -

1924ರಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಮಹಾ ಅಧಿವೇಶನ ನಡೆದಿತ್ತು. ಆ ಅಧಿವೇಶನ ನಡೆದು ನೂರು ವರ್ಷಗಳು ತುಂಬಿದೆ. ಹೀಗಾಗಿ ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ವಿಜೃಂಭಣೆಯಿಂದ ಆಚರಿಸ್ತಿದೆ. ಈ ಕಾಂಗ್ರೆಸ್ ಅಧಿವೇಶನದಲ್ಲಿ ಗಣ್ಯರನ್ನ ಸ್ವಾಗತಿಸಲು ಫ್ಲೆಕ್ಸ್, ಬ್ಯಾನರ್​​ಗಳನ್ನ ಅಳವಡಿಸಲಾಗಿದೆ. ಆದ್ರೆ ಇದೇ ಬ್ಯಾನರ್​​ಗಳು ಇದೀಗ ವಿವಾದಕ್ಕೆ ಕಾರಣ ಆಗಿದೆ.

ಬೆಳಗಾವಿ ನಗರದೆಲ್ಲೆಡೆ ಕಟ್ಟಿರೋ ಬ್ಯಾನರ್​​ಗಳಲ್ಲಿ ಭಾರತದ ಭೂಪಟವನ್ನೇ ತಿರುಚಲಾಗಿದೆ. ಭಾರತದ ಮ್ಯಾಪ್​​ನಲ್ಲಿ ಕಾಶ್ಮೀರವನ್ನೇ ಸರಿಯಾಗಿ ಚಿತ್ರಿಸಿಲ್ಲ.. ಪಾಕ್ ಆಕ್ರಮಿತ ಕಾಶ್ಮೀರ ಭಾಗವನ್ನ ಭಾರತದ ನಕಾಶೆಗೆ ಸೇರಿಸಿಲ್ಲ.. ಭಾರತದ ಭೂಪಟದಲ್ಲಿ ಕಾಶ್ಮೀರವನ್ನೇ ಕತ್ತರಿಸಿರೋದು ಇದೀಗ ವಿವಾದಕ್ಕೆ ಕಾರಣ ಆಗಿದೆ..

ಕಾಂಗ್ರೆಸ್ ಅಧಿವೇಶನದಲ್ಲೇ ಭಾರತದ ಭೂಪಟ ತಪ್ಪಾಗಿ ಚಿತ್ರಿಸಿರೋದಕ್ಕೆ ಬಿಜೆಪಿ ಆಕ್ರೋಶ ಹೊರಹಾಕಿದೆ. ಕರ್ನಾಟಕದ ಕಾಂಗ್ರೆಸ್ ಪಾಕ್ ಆಕ್ರಮಿತ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಧಾರೆ ಎರೆದು ಕೊಟ್ಟಿದೆ ‘ಗಾಂಧಿ ಭಾರತ’ ಹೆಸರಿನಲ್ಲಿ ಭಾರತದ ನಕಾಶೆಯನ್ನು ಕಾಂಗ್ರೆಸ್ಸಿಗರು ತಿರುಚಿರುವುದು ನಿಜಕ್ಕೂ ದೇಶದ್ರೋಹ. ವೈಯುಕ್ತಿಕ ಸ್ವಾರ್ಥ ಸಾಧನೆಗಾಗಿ, ಓಲೈಕೆ ರಾಜಕಾರಣಕ್ಕಾಗಿ ಕಾಂಗ್ರೆಸ್ ಎಂತಹ ಹೀನ ಕೆಲಸಕ್ಕಾದರೂ “ಸಿದ್ದ” ಎಂಬುದಕ್ಕೆ ಬೆಳಗಾವಿಯಲ್ಲಿ ಹಾಕಿಸಿರುವ ಬ್ಯಾನರ್‌ಗಳೇ ಸಾಕ್ಷಿ..” ಎಂದು ಬಿಜೆಪಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಭಾರತದ ನಕಾಶೆಯನ್ನು ತಿರುಚಿದ ದೇಶದ್ರೋಹಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಬಿಜೆಪಿ ಒತ್ತಾಯಿಸಿದೆ.

 

 

ಇನ್ನು ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಆಕ್ರೋಶ ಹೊರಹಾಕಿದೆ. ದೇಶದಲ್ಲಿರೋದು ನಕಲಿ ಕಾಂಗ್ರೆಸ್ ಅಂತ ವಿಜಯೇಂದ್ರ ವಾಗ್ದಾಳಿ ನಡೆಸಿದ್ರು.. ಗಾಂಧೀಜಿ ಮತ್ತು ಅಂಬೇಡ್ಕರರ ಹೆಸರು ಹೇಳುವ ನೈತಿಕತೆ, ಯೋಗ್ಯತೆ ಕಾಂಗ್ರೆಸ್ಸಿಗರಿಗೆ ಇಲ್ಲ ಎಂದು ಆಕ್ಷೇಪಿಸಿದರು. ಕಾಂಗ್ರೆಸ್ ಪಕ್ಷದವರಿಗೆ ಈ ದೇಶದ ಬಗ್ಗೆ, ಅಖಂಡತೆ, ಸಮಗ್ರತೆ ಬಗ್ಗೆ ಬದ್ಧತೆ ಇಲ್ಲ. ದೇಶ ಒಡೆಯುವ ಕೆಲಸವನ್ನು ಕಾಂಗ್ರೆಸ್ಸಿಗರೇ ಮಾಡಿದ್ದಾರೆ ಎಂದು ವಿಜಯೇಂದ್ರ ಆಕ್ರೋಶ ಹೊರಹಾಕಿದ್ರು

ಇನ್ನು ಬೆಳಗಾವಿ ಅಧಿವೇಶನಕ್ಕೆ ರಾಜ್ಯದ ಜನರ ಕೋಟಿಗಟ್ಟಲೆ ತೆರಿಗೆ ಹಣವನ್ನು ಬಳಸಿಕೊಂಡಿದೆ ಅಂತಲೂ ಬಿಜೆಪಿ ಆರೋಪಿಸಿದೆ.. ಹೀಗಾಗಿ ಕಾಂಗ್ರೆಸ್​​ನ ಈ ನೀತಿ ವಿರುದ್ಧ ನಾಳೆ ಬೆಳಿಗ್ಗೆ 10.30ಕ್ಕೆ ವಿಧಾನಸೌಧದ ಮುಂದಿನ ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಲು ಬಿಜೆಪಿ ಮುಂದಾಗಿದೆ.

ಕಾಂಗ್ರೆಸ್ ಅಧಿವೇಶನದ ಬ್ಯಾನರ್​​​ನಲ್ಲಿ ಭಾರತ ಮ್ಯಾಪ್​​​ ತಿರುಚಿರೋದನ್ನ ಜೆಡಿಎಸ್ ಕೂಡ ಖಂಡಿಸಿದೆ.. ಇದು ಇಟಲಿಯ ಕಾಂಗ್ರೆಸ್.. ಅವ್ರು ದೇಶದ್ರೋಹ ಮಾಡಿದ್ದಾರೆ. ಇದಕ್ಕೆ ಸಮಾವೇಶದ ನೇತೃತ್ವ ವಹಿಸಿರೋ ಡಿಕೆಶಿ ಕಾರಣ ಅಂತ ಜೆಡಿಎಸ್ ಆರೋಪಿಸಿದೆ

- Advertisement -

Latest Posts

Don't Miss