Tuesday, February 4, 2025

Latest Posts

ಡ್ರೋಣ್ ಪ್ರತಾಪ್ ಹೇಳಿದ್ದೆಲ್ಲಾ ಸುಳ್ಳಾ..? ತನಿಖಾ ವರದಿ ಹೇಳಿದ್ದೇನು..?

- Advertisement -

2 ವರ್ಷದ ಹಿಂದೆ ಡ್ರೋನ್ ಬಾಯ್ ಎಂದು ಪ್ರಪಂಚದಾದ್ಯಂತ ಗುರುತಿಸಿಕೊಂಡಿದ್ದ ಮಂಡ್ಯದ ಹುಡುಗ ಪ್ರತಾಪ್ ಮಾಡಿದ ಸಾಧನೆ ಸುಳ್ಳು ಎನ್ನಲಾಗುತ್ತಿದೆ.

ಡ್ರೋಣ್ ಪ್ರತಾಪ್, ಮಾಡರ್ನ್ ಡ್ರೋಣಾಚಾರ್ಯ ಅಂತೆಲ್ಲಾ ಬಿರುದು ಗಿಟ್ಟಿಸಿಕೊಂಡಿದ್ದ ಪ್ರತಾಪ್ ಎರಡು ವರ್ಷಗಳಿಂದ ಎಲ್ಲರಿಗೂ ಚಿರಪರಿಚಿತ. ಮಾಧ್ಯಮದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಈತನ ಸಾಧನೆ ಬಗ್ಗೆ ಎಲ್ಲರೂ ಇಲ್ಲಿಯತನಕ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದ್ರೆ ಕೆಲ ರಿಯಾಲಿಟಿ ಚೆಕ್ ಮಾಡಿದಾಗ, ಈತ ಡ್ರೋಣ್ ಕಂಡು ಹಿಡಿದಿರುವ ಬಗ್ಗೆ ಎಲ್ಲೂ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ.

ಡ್ರೋಣ್ ಪ್ರತಾಪ್ ಸಾಧನೆ ನೋಡಿ ರಾಜ್ಯ ಸರ್ಕಾರ ಹಲವು ಸರ್ಕಾರಿ ಕೆಲಸ ನೀಡಲು ಮುಂದಾಗಿತ್ತು. ಅಲ್ಲದೇ ಈತನಿಗೆ ಹಲವಾರು ಚಿನ್ನದ ಪದಕಗಳನ್ನ ಕೂಡ ನೀಡಲಾಗಿದೆ. 87 ರಾಷ್ಟ್ರಗಳಲ್ಲಿ ಈತನನ್ನು ಆಹ್ವಾನಿಸಲಾಗಿತ್ತು. ಸೆಲೆಬ್ರಿಟಿಗಳು, ರಾಜಕಾರಣಿಗಳು, ಮಾಧ್ಯಮದವರು, ನೆಟ್ಟಿಗರು ಎಲ್ಲರೂ ಈತನ ಸಾಧನೆ ಮೆಚ್ಚಿ ಕೊಂಡಾಡಿದ್ದರು. ಇಷ್ಟೇ ಅಲ್ಲದೇ ಮೋದಿ ಕೂಡ ಈತನ ಸಾಧನೆಗೆ ಮಾರುಹೋಗಿದ್ದರು.

ಮುರಿದ ಮಿಕ್ಸರ್ ಗ್ರೈಂಡರ್ ಮತ್ತು ಟೆಲಿವಿಶನ್ ಬಳಸಿ ಪ್ರತಾಪ್ 600 ಡ್ರೋಣ್‌ಗಳನ್ನ ತಯಾರಿಸಿದ್ದ ಎನ್ನಲಾಗಿತ್ತು. ಆದ್ರೆ ಇದ್ಯಾವೂದಕ್ಕೂ ಸಾಕ್ಷಿಗಳಿಲ್ಲ. ಈ 600 ಡ್ರೋಣ್‌ಗಳ ಫೋಟೋಗಳು ಕೂಡ ಇಲ್ಲ. ಇನ್ನು ಈತ ಡ್ರೋಣ್ ಫೋಟೋ ಎದುರಿಗೆ ನೀಡಿದ ಪೋಸ್‌ ನೋಡಿದ್ರೆ ಇವೆಲ್ಲದರಲ್ಲೂ ಬೇರೆ ಬೇರೆ ಕಂಪೆನಿಯ ಪಾರ್ಟ್ ಹೊಂದಿದ ಡ್ರೋಣ್‌ಗಳೇ ಕಂಡುಬಂದಿದೆ.

ಅಲ್ಲದೇ ಪ್ರತಾಪ್ ಹಲವಾರು ಪ್ರಶಸ್ತಿ ಗೋಲ್ಡ್ ಮೆಡಲ್ ಪಡೆದಿದ್ದಾರೆಂದು ಸುದ್ದಿಯಾಗಿತ್ತಾದರೂ ಆ ಬಗ್ಗೆ ಒಂದು ಪುರಾವೆ , ಫೋಟೋ ಇಲ್ಲ.

ಇನ್ನು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೋದಲ್ಲಿ ಪ್ರತಾಪ್, ಎಸಿಎಸ್‌ಎಲ್ ಡ್ರೋಣ್ ಪಕ್ಕ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ಈ ಎಸಿಎಸ್‌ಎಲ್ ಜಪಾನ್‌ಗೆ ಸೇರಿದ ಕಂಪನಿಯಾಗಿದ್ದು, ಮಾನವರಹಿತ ವೈಮಾನಿಕ ವಾಹನ ಮತ್ತು ಡ್ರೋಣ್‌ಗಳನ್ ಇದು ತಯಾರಿಸುತ್ತದೆ ಎಂದು ಹೇಳಲಾಗಿದೆ.

ಪ್ರತಾಪ್ ಸಾಧನೆಯ ಬಗ್ಗೆ ಯಾವುದೇ ಸಾಕ್ಷಿ ಇಲ್ಲದ ಕಾರಣ ಆತನ ಸಾಧನೆ ಸುಳ್ಳು ಎಂದು ಹೋಪ್ ಇಂಡಿಯಾ ಎಂಬ ವೆಬ್‌ಸೈಟ್ ಒಂದು ಪ್ರಕಟಿಸಿದೆ.

ಇನ್ನು ಸಧ್ಯದಲ್ಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡುವುದಾಗಿ ಹೇಳಿರುವ ಪ್ರತಾಪ್, ನನಗೆ ಹಲವು ಪ್ರಶಸ್ತಿ ಸಿಕ್ಕಿರುವುದು ಸುಳ್ಳಲ್ಲ. ಆ ಪ್ರಶಸ್ತಿಗಳು ಮತ್ತು ಸರ್ಟಿಫಿಕೇಟ್‌ಗಳು ನನ್ನ ಬಳಿ ಇದೆ. ಟೋಕಿಯೋದಲ್ಲಿನ ಅಂತರಾಷ್ಟ್ರೀಯ ರೋಬಟಿಕ್ ಪ್ರದರ್ಶನದಲ್ಲಿ ಭಾಗವಹಿಸಿದ್ದೆ, ಅದರಲ್ಲಿ ನಾನು ಗೋಲ್ಡ್ ಮೆಡಲ್ ಪಡೆದಿದ್ದೆ. ವೆಬ್‌ಸೈಟ್‌ನಲ್ಲಿ ನನ್ನ ಹೆಸರಿಲ್ಲ ಎಂಬ ಕಾರಣಕ್ಕೆ, ನಾನು ಮಾಡಿರುವ ಸಾಧನೆಯೇ ಸುಳ್ಳು ಅನ್ನುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss