Tuesday, May 6, 2025

Latest Posts

BENGALURU : ಬಿಬಿಎಂಪಿಯಿಂದ ಸ್ಕ್ರಿಕ್ಟ್ ರೂಲ್ಸ್! ಎಲ್ಲೆಂದ್ರಲ್ಲಿ ನ್ಯೂ ಇಯರ್ ಸೆಲೆಬ್ರೇಷನ್ ಇಲ್ಲ

- Advertisement -

ಹೊಸ ವರ್ಷದ ಸಂಭ್ರಮಕ್ಕೆ ಈಗಾಗಲೇ ದಿನಗಣನೆ ಶುರುವಾಗಿದೆ. ನಾಳೆ ರಾತ್ರಿಯಿಂದ ಸಂಭ್ರಮ ಶುರುವಾಗುತ್ತೆ. ಪೊಲೀಸರು ಬೆಂಗಳೂರಲ್ಲಿ ಈಗಾಗಲೇ ಬಂದೋಬಸ್ತ್‌ ಮಾಡಿಕೊಳ್ಳಲು ಶುರು ಮಾಡಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಸಿಸಿಟಿವಿ ಇದೆ ಹುಷಾರ್‌ ಅಂತಾ ಡಿಸಿಎಂ ಎಚ್ಚರಿಸುವ ಕೆಲಸವನ್ನೂ ಮಾಡಿದ್ದಾರೆ. ಅತ್ತ ಅಯೋಧ್ಯೆಯ ರಾಮ ಮಂದಿರದಲ್ಲೂ ಅವಧಿ ವಿಸ್ತರಣೆ ಮಾಡಲಾಗಿದೆ. ಇನ್ನು ಹೊಸ ವರ್ಷಾಚರಣೆಗೂ ಬಿಬಿಎಂಪಿ ಸಖಲ ಸಿದ್ಧತೆಯನ್ನು ನಡೆಸಿದೆ.

ಹೊಸ ವರ್ಷಾಚರಣೆಗೆ ಇನ್ನೇನು ನಾಳೆ ಕ್ಷಣಗಣನೆ ಆರಂಭವಾಗುತ್ತೆ. ಈ ಮಧ್ಯೆ ಬೆಂಗಳೂರಿನಲ್ಲಿ ಕೆಲವು ಕಡೆ ಬಿಗಿಭದ್ರತೆಗೂ ಪೊಲೀಸರು ತಯಾರಿ ನಡೆಸುತ್ತಿದ್ದಾರೆ. ಈ ಮಧ್ಯೆ ಬಿಬಿಎಂಪಿ ಕೂಡ ಬೆಂಗಳೂರಿನಲ್ಲಿ ನ್ಯೂ ಇಯರ್ ಸೆಲೆಬ್ರೇಷನ್‌ಗೆ ಗೈಡ್‌ಲೈನ್ಸ್‌ ಜಾರಿಮಾಡಿದೆ.

 

ಪ್ರತಿಬಾರಿಯಂತೆ ಈ ಬಾರಿ ಕೂಡಾ ಬಿಬಿಎಂಪಿ ಹೊಸ ವರ್ಷ ಸಂಭ್ರಮಾಚರಣೆಗೆ ಸಕಲ ಸಿದ್ಧತೆಯನ್ನು ನಡೆಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ನ್ಯೂ ಇಯರ್ ಸೆಲೆಬ್ರೇಟ್‌ ಮಾಡಬೇಕೆಂದರೆ ಪರ್ಮಿಷನ್‌ ಅಗತ್ಯ. ಸಿಕ್ಕ ಸಿಕ್ಕಲ್ಲಿ ಹೊಸ ವರ್ಷಾಚರಣೆ ಮಾಡುವಂತಿಲ್ಲ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್‌ ಹೇಳಿದ್ದಾರೆ.

ಇನ್ನು ಪ್ರತೀ ವರ್ಷ ಬೆಂಗಳೂರಲ್ಲಿ ಹೊಸ ವರ್ಷ ಆಚರಣೆಗೆ 31 ಕ್ಕೆ ಜನ ಸೇರೋದು ಸಹಜ. ಇದಕ್ಕೆ ತಕ್ಕಂತೆ ಪೊಲೀಸ್ ಆಯುಕ್ತರು ಕೂಡಾ ವಿಸ್ತೃತವಾಗಿ ಗೈಡ್ ಲೈನ್ಸ್‌ಗಳನ್ನು ಜಾರಿ ಮಾಡುತ್ತಾರೆ. ಈ ವೇಳೆ ಲೈಟ್ ವ್ಯವಸ್ಥೆ, ಕಸ ಇತ್ಯಾದಿ ಡಿಸ್ಪೋಸ್, ಫಸ್ಟ್ ಏಡ್ ಕೊಡುವ ವಿಚಾರ ಬಿಬಿಎಂಪಿ ವ್ಯಾಪ್ತಿಗೆ ಬರುತ್ತೆ. ಇದೇ ರೀತಿ ಬಿಬಿಎಂಪಿ ಕಳೆದ ಬಾರಿಯೂ ಇ ವಿಷಯಕ್ಕೆ ಸಂಬಂಧಿಸಿ ಕ್ಯಾಂಪ್ ಮಾಡಿತ್ತು. ಆದ್ದರಿಂದ ಎಂಜಿ ರೋಡ್, ಬ್ರಿಗೇಡ್ ರೋಡ್ ಬಿಟ್ಟು ಉಳಿದ ಕಡೆ ಹೊಸ ವರ್ಷ ಆಚರಣೆಗೆ ಪರ್ಮಿಷನ್ ಪಡೆಯಬೇಕು.ನಮ್ಮ ಪೂರ್ತಿ ಬೆಂಬಲ ಪೊಲೀಸ್ ಇಲಾಖೆಗೆ ಕೊಡ್ತೇವೆ ಎಂದು ಬಿಬಿಎಂಪಿ ಆಯುಕ್ತರು ಹೇಳಿದ್ದಾರೆ.

 

ಬಿಎಂಟಿಸಿ ಕೂಡ ಹೊಸ ವರ್ಷಾಚರಣೆಗೆ ಬೆಂಗಳೂರಿಗೆ ಗುಡ್ ನ್ಯೂಸ್ ನೀಡಿದ್ದು, ನ್ಯೂ ಇಯರ್ ಪ್ರಯುಕ್ತ ಡಿಸೆಂಬರ್ 31ರ ತಡರಾತ್ರಿಯವರೆಗೆ ಸಾರಿಗೆ ಸೇವೆಯನ್ನು ನೀಡುವುದಾಗಿ ತಿಳಿಸಿದೆ.

ಕ್ರ. ಸಂ ಮಾರ್ಗ ಸಂಖ್ಯೆ ಎಲ್ಲಿಂದ? ಎಲ್ಲಿಗೆ? G-3 ಬ್ರಿಗೇಡ್ ರಸ್ತೆ ಎಲೆಕ್ಟ್ರಾನಿಕ್ಸ್ ಸಿಟಿ, G-4 ಜಿಗಣಿ, G-2 ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣ ಸರ್ಜಾಪುರ, G-6 ಕೆಂಗೇರಿ ಕೆ.ಹೆಚ್.ಬಿ. ಕ್ವಾರ್ಟ್ರ್ಸ್, G-7 ಜನಪ್ರಿಯ ಟೌನ್ ಶಿಪ್, G-8 ನೆಲಮಂಗಲ, G-9 ಯಲಹಂಕ ಉಪನಗರ 5ನೇ ಹಂತ, G-10 ಯಲಹಂಕ, G-11 ಬಾಗಲೂರು,317-G ಹೊಸಕೋಟೆ,SBS-13K ಚನ್ನಸಂದ್ರ, SBS-1K ಕಾಡುಗೋಡಿ, 13 ಬನಶಂಕರಿ

ಹೌದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಡಿಸೆಂಬರ್ 31ರಂದು ಹೊಸ ವರ್ಷಾಚರಣೆಯಲ್ಲಿ ಭಾಗವಹಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಎಂ.ಜಿ.ರಸ್ತೆಯಿಂದ ನಗರದ ವಿವಿಧ ಭಾಗಗಳಿಗೆ ಹೆಚ್ಚಿನ ಸಾರಿಗೆ ಸೌಲಭ್ಯ ಒದಗಿಸುವ ದೃಷ್ಟಿಯಿಂದ ರಾತ್ರಿ 11:00 ಗಂಟೆಯ ನಂತರ ತಡರಾತ್ರಿ 02:00 ಗಂಟೆಯವರೆಗೆ ಪ್ರಯಾಣಿಕರ ಸಂಚಾರದ ಒತ್ತಡಕ್ಕನುಗುಣವಾಗಿ ಕೆಳಕಂಡ ಮಾರ್ಗಗಳಲ್ಲಿ ಹೆಚ್ಚುವರಿ ಸಾರಿಗೆಗಳನ್ನು ಕಾರ್ಯಾಚರಣೆಗೊಳಿಸಲು ಕ್ರಮ ವಹಿಸಲಾಗಿದೆ.

ಅಲ್ಲದೆ, ಜನದಟ್ಟಣೆ ಇರುವ ಪ್ರಮುಖ ಬಸ್ ನಿಲ್ದಾಣ-ಜಂಕ್ಷನ್ ಗಳಾದ ಕೆಂಪೇಗೌಡ ಬಸ್ ನಿಲ್ದಾಣ, ಕೃ.ರಾ.ಮಾರುಕಟ್ಟೆ, ಶಿವಾಜಿನಗರ, ಕೋರಮಂಗಲ, ಕಾಡುಗೋಡಿ, ಕೆಂಗೇರಿ, ಸುಮನಹಳ್ಳಿ, ಗೊರಗುಂಟೆಪಾಳ್ಯ, ಯಶವಂತಪುರ, ಯಲಹಂಕ, ಶಾಂತಿನಗರ, ಬನಶಂಕರಿ, ಹೆಬ್ಬಾಳ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ಗಳಿಂದ ಪ್ರಯಾಣಿಕರ ದಟ್ಟಣೆ, ಬೇಡಿಕೆಗನುಗುಣವಾಗಿ ಸಾರಿಗೆ ಸೌಲಭ್ಯವನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ.

- Advertisement -

Latest Posts

Don't Miss