www.karnatakatv.net : ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್ ಹಾಗೂ ಪುತ್ರ ಅಭಿಷೇಕ್ ಬಚ್ಚನ್ ಇಬ್ಬರಿಗೂ ಕೊರೊನಾ ಸೋಂಕು ಪತ್ತೆಯಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.. ಮುಂಬೈ ನ ನಾನಾವತಿ ಆಸ್ಪತ್ರೆಯಲ್ಲಿ ತಂದೆ, ಮಗ ಇಬ್ಬರೂ ಚಿಕಿತ್ಸೆ ಪಡೀತಾ ಇದ್ದಾರೆ. ಹಾಗೆಐಏ ನಮ್ಮ ಜೊತೆ ಕಳೆದ 10 ದನಗಳಲ್ಲಿ ಯಾರು ಸಂಪತರ್ಕದಲ್ಲಿದ್ದರೋ ಅವರು ಪರೀಕ್ಷೆ ಒಳಪಡಿ, ಯಾರೂ ಗಾಬರಿಯಾಗುವ ಅವಶ್ಯಕತೆ ಇಲ್ಲ ಎಂದು ಅಮಿತಾಬ್ ಬಚ್ಚನ್ ಮನವಿ ಮಾಡಿದ್ದಾರೆ..
ಕೌನ್ ಬನೇಗಾ ಟೀಂನಿಂದ ಅಮಿತ್ ಬ್ ಗೆ ಕೊರೊನಾ ಬಂತಾ
ಕೊರೊನಾ ಬಂದ ನಂತರ ಅಮಿತಾಬ್ ಬಚ್ಚನ್ ಮನೆ ಬಿಟ್ಟು ಎಲ್ಲೂ ಹೋಗಿರಲಿಲ್ಲ. ಆದ್ರೆ, ಕೌನ್ ಬನೇಗಾ ಕರೋಡ್ ಪತಿ ಟೀಂ ಪ್ರೋಮೋ ಶೂಟ್ ಮಾಡಲು ಮನೆಗೆ ಬಂದ ಟೀಂನಿಂದ ಕೊರೊನಾ ಸೋಂಕು ಹರಡಿರಬಹುದು ಎಂದು ಅಂದಾಜಿಸಲಾಗ್ತಿದೆ.. ಆಸ್ಪತ್ರೆ ವೈದರು ಮಾಹಿತಿ ನೀಡಿದ್ದು ಇಬ್ಬರಿಗೂ ಇದೀಗ ಸಣ್ಣ ಪ್ರಮಾಣದ ಸೋಂಕು ಪತ್ತೆಯಾಗಿದೆ. ಚಿಕಿತ್ಸೆ ನೀಡ್ತಿದ್ದೆವೆ ಎಂದು ತಿಳಿಸಿದ್ದಾರೆ. ಬಿಗ್ ಬಿಗೆ ಇದೀಗ 77 ವರ್ಷ ವಯಸ್ಸಾಗಿದ್ದು ಎಷ್ಟೇ ಜಾಗ್ರತೆ ವಹಿಸಿದ್ರು ಕೊರೊನಾ ಸೋಂಕಿಗೆ ಗುರಿಯಾಗಿದ್ದಾರೆ
ನ್ಯೂಸ್ ಡೆಸ್ಕ್, ಕರ್ನಾಟಕ ಟಿವಿ.




