bjpಲಿಂಗಾಯತ ಆಯ್ತು ಈಗ ವಾಲ್ಮೀಕಿ ಅಸ್ತ್ರ!

BJP : ಬಿಜೆಪಿ ಯಲ್ಲಿ ಈಗ ಎಲ್ಲವೂ ಸರಿ ಇದೆಯಾ? ಈ ಪ್ರಶ್ನೆ ಸದ್ಯ ಎಲ್ಲೆಡೆ ಗಿರಕಿ ಹೊಡೆಯುತ್ತಿದೆ. ಬಿಜೆಪಿಯ ಅಧ್ಯಕ್ಷ ಸ್ಥಾನಕ್ಕಾಗಿ ಒಳಗೊಳಗೇ ಜಗಳ ಶುರುವಾಗಿದೆ. ಅತ್ತ ಯತ್ನಾಳ್ ನೇತೃತ್ವದ ರೆಬೆಲ್ಸ್ ಟೀಮ್, ಅಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಕೆಳಗಿಳಿಸಲು ಶತ ಪ್ರಯತ್ನ ನಡೆಸುತ್ತಿದೆ. ಈ ಬೆನ್ನಲ್ಲೇ ಬಿಜೆಪಿ ಭಿನ್ನರಿಂದ ಈಗ ಲಿಂಗಾಯತ ಬಳಿಕ ವಾಲ್ಮೀಕಿ ಅಸ್ತ್ರವನ್ನ ಹೂಡಲು ಮುಂದಾಗಿದೆ. ಬಿಜೆಪಿ ಭಿನ್ನಮತಕ್ಕೆ ಕಸುವು ತುಂಬಿರುವ ಹಿರಿಯ ಮುಖಂಡ ಯತ್ನಾಳ್ ಲಿಂಗಾಯತ ದಾಳ ಉರುಳಿಸಿ ಚತುರತೆ ಮೆರೆದ ಬೆನ್ನಲ್ಲೇ ಈಗ ವಾಲ್ಮೀಕಿ ಅಸ್ತ್ರ್ರ ಪ್ರಯೋಗಿಸಿ ಮತ್ತೊಂದು ರಾಜಕೀಯ ಮಜಲಿಗೆ ಕಾರಣವಾಗಿದ್ದಾರೆ.

ರಾಜನ ಹಳ್ಳಿಯ ವಾಲ್ಮೀಕಿ ಗುರುಪೀಠದ ಆವರಣದಲ್ಲಿ ಇತ್ತೀಚೆಗೆ ವಾಲ್ಮೀಕಿ ಜಾತ್ರೆಯಲ್ಲಿ ಮಾತನಾಡಿದ ಯತ್ನಾಳ್, ನಮಗೆ ಇಂತವರೇ ರಾಜ್ಯಾದ್ಯಕ್ಷರಾಗಬೇಕು, ಸಿಎಂ ಆಗಬೇಕು ಅಂತೇನಿಲ್ಲ ವಾಲ್ಮೀಕಿ ಸಮುದಾಯದ ಶ್ರೀರಾಮುಲು ಅಥವಾ ರಮೇಶ್ ಜಾರಕಿಹೊಳಿ ಬಿಜೆಪಿ ರಾಜ್ಯಾಧ್ಯಕ್ಷರಾಗಲಿ ಅದನ್ನು ನಿಭಾಯಿಸುವ ಎಲ್ಲಾ ಅರ್ಹತೆಗಳು ಅವರಿಗಿವೆ. ವಾಲ್ಮೀಕಿ ಸಮುದಾಯಕ್ಕೆ ಪ್ರಾತಿನಿಧ್ಯ ಸಿಗಬೇಕು ಇದಕ್ಕೆ ನಮ್ಮೆಲ್ಲರ ಬೆಂಬಲವೂ ಇದೆ ಎಂದಿದ್ದಾರೆ. ಅವರ ಈ ಮಾತು ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇನ್ನು ಪ್ರಧಾನಿ ಮೋದಿ ಅಯೋದ್ಯೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಲ್ಮೀಕಿ ಮಹರ್ಷಿಗಳ ಹೆಸರಿಟ್ಟಿದ್ದಾರೆ. ವಿಧಾನಸಭೆಯಲ್ಲಿ ವಾಲ್ಮೀಕಿ ಸಮಾಜದ ಮೀಸಲಾತಿ ಕುರಿತು ಚರ್ಚೆ ನಡೆದಾಗ ಮೀಸಲಾತಿ ಹೆಚ್ಚಿಸುವಂತೆ ನಾನು ಬಲವಾಗಿ ಪ್ರತಿಪಾದಿಸಿದ್ದೇನೆ. ಶಾಸಕರಾಗಲು ಎಲ್ಲಾ ಜಾತಿಯ ಮಠಗಳು ಬೇಕು ಆದರೆ ಸಚಿವ ಸ್ತನ ನೀಡುವಾಗ ಜಾತಿಯೇ ನಿರ್ಣಾಯಕ ವಾಗುತ್ತದೆ ಆದ್ದರಿಂದ ಜಾತಿವಾರು ಸಂಘಟನೆ ಒತ್ತಡ ಇದ್ದಾಗ ಮಾತ್ರ ಸಮುದಾಯದ ಮುಖಂಡರಿಗೆ ಸೂಕ್ತ ಸ್ಥಾನ ಮಾನ ಸಿಗಲು ಸದ್ಯ ಎಂದಿದ್ದಾರೆ. ನಾಟಕ ಕಂಪೆನಿಯವರಿಗೆ ಜೀ ಹುಜೂರ್ ಎನ್ನುವವರಿಗೆ ಪಕ್ಷದಲ್ಲಿ ಸ್ಥಾನಮಾನಗಳು ಸಿಗಬಾರದು. ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಪಕ್ಷ ನಿಷ್ಠೆ ಇರುವವರಿಗೆ ಮಾತ್ರ ಸಿಗಬೇಕು. ರಾಮಾಯಣ ಬರೆದ ಮಹರ್ಷಿ ವಾಲ್ಮೀಕಿ ಮಹಾಭಾರತ ರಚಿಸಿದ ವೇದವ್ಯಾಸರು ಸಂವಿಧಾನ ರಚಿಸಿದ ಅಂಬೇಡ್ಕರ್ ಈ ಮೂವರು ಭಾರತದ ಆಧಾರ ಸ್ತಂಬಗಳು , ಈ ಮೂರೂ ಕೃತಿಗಳು ಜ್ಯಾತ್ಯಾತೀತವಾಗಿರುವುದೇ ಸನಾತನ ಮೌಲ್ಯ ಹೊಂದಿರುವ ಭಾರತದ ಹಿರಿಮೆ ಎಂದು ವಾಲ್ಮೀಕಿ ಅಸ್ತ್ರವನ್ನ ಹೂಡಿದ್ದಾರೆ.

About The Author