Sandalwood News: ಸ್ಯಾಂಡಲ್‌ವುಡ್‌ನಲ್ಲಿ ಪುರುಷ ಹಾಗೂ ಮಹಿಳಾ ಕಲಾವಿದರಿಗೆ ಸಂಭಾವನೆ ನೀಡುವುದರಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ಅಲ್ಲದೆ ಇಲ್ಲಿ ಮಹಿಳೆಯರ ಸಮಸ್ಯೆಗಳ ಕುರಿತು ಹೇಳಬೇಕಾದ ವಿಚಾರ ಸಾಕಷ್ಟಿದೆ. ಆದರೆ ಅದರ ಬಗ್ಗೆ ಯಾರೊಬ್ಬರು ಮುಂದೆ ಬರುತ್ತಿಲ್ಲ ಎಂದು ನಟಿ ರಮ್ಯಾ ಬೇಸರ ಹೊರಹಾಕಿದ್ದಾರೆ.
16ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಿ, ಮಹಿಳೆ ಹಾಗೂ ಸಿನಿಮಾ ಎಂಬ ವಿಚಾರ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರುಷರು ಒಂದು ಸಿನಿಮಾ ಹಿಟ್ ಆದರೆ ಮುಂದಿನ ಚಿತ್ರಕ್ಕೆ ಅವರು ಶೇಕಡಾ50 ರಷ್ಟು ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಳ್ಳುತ್ತಾರೆ. ಆದರೆ ಮಹಿಳಾ ಕಲಾವಿದರಿಗೆ ಕೇವಲ ಶೇಕಡಾ 5ರಷ್ಟು ಮಾತ್ರ ಹೆಚ್ಚಿಸುತ್ತಾರೆ, ಕೆಲವೊಮ್ಮೆ ಅದೂ ಸಾಧ್ಯವಾಗುವುದಿಲ್ಲ. ಅವರಷ್ಟೆ ನಾವು ಕೆಲಸ ಮಾಡುವಾಗ ಅವರಿಗೆ ಹೆಚ್ಚು, ನಮಗೆ ಕಡಿಮೆ ಈ ತಾರತಮ್ಯ ಯಾಕೆ..? ಇದು ಕೊನೆಯಾಗಬೇಕು ಎಂದು ಹೇಳಿದ್ದಾರೆ.
ರಶ್ಮೀಕಾ ಟ್ರೋಲ್ ನಿಲ್ಲಿಸಿ..
ಅಂದಹಾಗೆ ಅವರಿಗೆ 5 ಕೋಟಿ ರೂಪಾಯಿಗಳು, ಆದರೆ ನಮಗೆ ಮಾತ್ರ 1 ಕೋಟಿ ರೂಪಾಯಿಗಳನ್ನು ನೀಡುತ್ತಾರೆ. ಈ ಅಸಮಾನತೆಯ ಕಾರಣಕ್ಕೆ ನಾನು ಚಿತ್ರರಂಗದಿಂದ ಹೊರಬಂದಿದ್ದೇನೆ ಎನ್ನುವ ಮೂಲಕ ಸ್ಯಾಂಡಲ್‌ವುಡಲ್ ಇಬ್ಬಗೆಯ ನೀತಿಯ ವಿರುದ್ಧ ರಮ್ಯಾ ಧ್ವನಿ ಎತ್ತಿದ್ದಾರೆ. ಅಲ್ಲದೆ ರಶ್ಮಿಕಾರಂಥ ನಟಿಯರನ್ನು ಟ್ರೋಲ್ ಮಾಡುವ ಮೂಲಕ ಹೀಯಾಳಿಸುವುದನ್ನು ನಿಲ್ಲಿಸಿ. ಅದು ಅಮಾನವೀಯತೆಯ ನಡೆ, ಹೆಣ್ಣು ಮಕ್ಕಳು ಮೃದುವಾಗಿರುತ್ತಾರೆ. ಅವರಿಗೆ ಏನೇ ಆಡಿದರೂ ಅವರು ತಿರುಗಿ ಮಾತನಾಡುವುದಿಲ್ಲ ಎನ್ನುವ ಕಾರಣಕ್ಕೆ ಹೀಗೆ ಅವರನ್ನು ಹಿಂಸಿಸುವುದು ಸರಿಯಲ್ಲ ಎಂದು ರಮ್ಯಾ ಮನವಿ ಮಾಡಿದ್ದಾರೆ.