Tuesday, March 11, 2025

Latest Posts

ನನಗೆ ಭಾರತಕ್ಕೆ ಕಳುಹಿಸಬೇಡಿ..! ಅಮೆರಿಕ ಸುಪ್ರೀಂ ಕೋರ್ಟ್‌ಗೆ ರಾಣಾ ಮನವಿ..

- Advertisement -

International News: ನನ್ನನ್ನು ಭಾರತಕ್ಕೆ ಗಡಿಪಾರು ಮಾಡಿದರೆ, ನಾನು ಪಾಕಿಸ್ತಾನದ ಮೂಲದ ಮುಸ್ಲಿಂ ಅಂತ ನನಗೆ ಜೈಲಲ್ಲಿ ಹಿಂಸೆ ಹಾಗೂ ಕಿರುಕುಳ ನೀಡಬಹುದು. ಇದರಿಂದ ನನ್ನ ಸಾವು ಅದೇ ಜೈಲಲ್ಲಿ ಸಂಭವಿಸಬಹುದು. ಹೀಗಾಗಿ ನನ್ನನ್ನು ಭಾರತಕ್ಕೆ ಗಡಿಪಾರು ಮಾಡಬೇಡಿ ಎಂದು 2008ರ ಮುಂಬೈ ಸರಣಿ ಸ್ಫೋಟದ ರೂವಾರಿ ತಹವ್ವುರ್‌ ರಾಣಾ ಅಮೆರಿಕದ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾನೆ.

ಇನ್ನೂ ಈ ಕುರಿತಂತೆ ಕಳೆದ ಕೆಲ ತಿಂಗಳುಗಳ ಹಿಂದಷ್ಟೇ ಅಮೆರಿಕದ ಸುಪ್ರೀಂಕೋರ್ಟ್‌ ರಾಣಾನನ್ನು ಭಾರತಕ್ಕೆ ಗಡಿಪಾರು ಮಾಡಲು ಒಪ್ಪಿತ್ತು. ಅಲ್ಲದೆ ಇತ್ತೀಚಿಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಭೇಟಿ ವೇಳೆ ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೇ ಶೀಘ್ರವೇ ರಾಣಾನನ್ನು ಭಾರತಕ್ಕೆ ಗಡಿಪಾರು ಮಾಡುತ್ತೇವೆ ಎಂದು ಹೇಳಿದ್ದರು. ಇದಾದ ಬೆನ್ನಲ್ಲಿಯೇ ಪುನಃ ಮೇಲ್ಮನವಿ ಸಲ್ಲಿಸಿರುವ ರಾಣಾ, ನನ್ನ ಗಡಿಪಾರು, ಅಮೆರಿಕದ ಕಾನೂನು ಮತ್ತು ಕಿರುಕುಳ ವಿರುದ್ಧದ ವಿಶ್ವಸಂಸ್ಥೆಯ ನಿಯಮಗಳ ಉಲ್ಲಂಘನೆಯಾಗಲಿದೆ. ಯಾಕೆಂದರೆ ನಾನು ಪಾಕಿಸ್ತಾನಿ ಮೂಲದ ಮುಸ್ಲಿಂ. ಜೊತೆಗೆ ಪಾಕ್ ಸೇನೆಯಲ್ಲೂ ಕಾರ್ಯನಿರ್ವಹಿಸಿದ್ದೆ. ಈ ವಿಷಯಗಳು ಭಾರತದ ಜೈಲುಗಳಲ್ಲಿ ನನ್ನ ಮೇಲೆ ಹಿಂಸೆಗಳಿಗೆ ಕಾರಣವಾಗಬಹುದು. ಅದು ನನ್ನ ಸಾವಿಗೂ ಕಾರಣವಾಗಬಹುದು ಎನ್ನುವುದಕ್ಕೆ ನನಗೆ ನಂಬಿಕೆ ಇದೆ ಎಂದು ಮೇಲ್ಮನವಿಯಲ್ಲಿ ಉಲ್ಲೇಖಿಸಿದ್ದಾನೆ.

ಇನ್ನೂ ನಾನು ಮೂತ್ರಕೋಶದ ಕ್ಯಾನ್ಸರ್‌, ಅಸ್ತಮಾ, ಕೋವಿಡ್‌ ಸೇರಿದಂತೆ ಹಲವು ವೈದ್ಯಕೀಯ ಸಮಸ್ಯೆಗಳಿಂದ ಬಳಲುತ್ತಿದ್ದೇನೆ. ನನ್ನ ವಿರುದ್ಧ ಹೊರಿಸಲಾಗಿರುವ ಪ್ರಕರಣದಲ್ಲಿ ಗಲ್ಲು ಶಿಕ್ಷೆ ಖಚಿತ. ಹೀಗಾಗಿ ನನ್ನನ್ನು ಭಾರತಕ್ಕೆ ಗಡಿಪಾರು ಮಾಡಲು ಹೊರಡಿಸಿರುವ ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿ ರಾಣಾ ಅರ್ಜಿ ಸಲ್ಲಿಸಿದ್ದಾನೆ. ರಾಣಾ, ಈ ಹಿಂದೆ 166 ಜನರ ಸಾವಿಗೆ ಕಾರಣವಾದ ಮುಂಬೈ ದಾಳಿಯ ಪ್ರಮುಖ ಸಂಚುಕೋರ ಲಷ್ಕರ್‌-ಎ-ತೊಯ್ದಾದ ಡೇವಿಡ್‌ ಹೆಡ್ಲಿಯೊಂದಿಗೆ ಸಂಬಂಧವನ್ನು ಈ ರಾಣಾ ಹೊಂದಿದ್ದಾನೆ.

ಹಸ್ತಾಂತರಕ್ಕೆ ಮನವಿ ಮಾಡಿದ್ದ ಭಾರತ..

ಅಲ್ಲದೆ ರಾಣಾನ, ಮುಂಬಯಿ ದಾಳಿಯ ಹೊಣೆ, ಅಮೆರಿಕದ ಡ್ಯಾನಿಷ್‌ ಪತ್ರಿಕಾ ಕಚೇರಿಯ ಮೇಲೆ ನಡೆದಿದ್ದ ಭಯೋತ್ಪಾದಕ ದಾಳಿಯಲ್ಲಿ ಉಗ್ರರಿಗೆ ನೆರವಾಗಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಅಮೆರಿಕ ನ್ಯಾಯಾಲಯವು ರಾಣಾಗೆ 35 ವರ್ಷಗಳ ಕಾಲ ಶಿಕ್ಷೆ ವಿಧಿಸಿತ್ತು. ಇದಕ್ಕೂ ಮುನ್ನ ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್‌ಐಎ ಅಮೆರಿಕ ಸರ್ಕಾರಕ್ಕೆ ರಾಣಾ ಮಾಡಿದ್ದ ಅಪರಾಧಗಳ ಸಂಪೂರ್ಣ ವಿವರವುಳ್ಳ ಕಡತವನ್ನು ನೀಡಿತ್ತು. ಅಲ್ಲದೆ ಆತನನ್ನು ನಮಗೆ ಹಸ್ತಾಂತರ ಮಾಡಿ, ಗುಂಡಿನ ಮೊರೆತಕ್ಕೆ ಕಾರಣವಾಗಿದ್ದ ನರ ಹಂತಕನನ್ನು ನಮ್ಮ ಕೈಗೆ ನೀಡಿ ಎಂದು ಭಾರತ ಮನವಿ ಮಾಡಿತ್ತು. ಭಾರತ ಹಾಗೂ ಅಮೆರಿಕ ನಡುವಿನ ಕ್ರಿಮಿನಲ್‌ಗಳ ಹಸ್ತಾಂತರ ಒಪ್ಪಂದದ ಭಾಗವಾಗಿಯೇ ಭಾರತದ ಮನವಿಗೆ ಅಮೆರಿಕ ಸ್ಪಂದಿಸಿತ್ತು. ಈ ಮೂಲಕ ಭಾರತ ತನ್ನ ಶಕ್ತಿಯಿಂದ ಬಹುದೊಡ್ಡ ರಾಜತಾಂತ್ರಿಕ ಗೆಲುವನ್ನು ಪಡೆದಂತಾಗಿತ್ತು.

- Advertisement -

Latest Posts

Don't Miss