ಕನ್ನಡಿಗನ ಮೇಲೆ ಹಲ್ಲೆ ಮಾಡಿ ಸುಳ್ಳು ಕಥೆ ಕಟ್ಟಿದ್ದ : ರೌಡಿ ವಿಂಗ್‌ ಕಮಾಂಡರ್‌ ವಿರುದ್ಧ ಸಿಡಿದೆದ್ದ ಕನ್ನಡಿಗರು 

ಬೆಂಗಳೂರು : ನಗರದಲ್ಲಿ ನಡೆದಿರುವ ರೋಡ್ ರೇಜ್ ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದ್ದು, ಬೈಕ್ ಸವಾರ ವಿಕಾಸ್ ಪ್ರತಿ ದೂರಿನ ಮೇರೆಗೆ ವಿಂಗ್ ಕಮಾಂಡರ್ ಆದಿತ್ಯ ಬೋಸ್ ವಿರುದ್ಧ ಬೈಯಪ್ಪನಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಸೋಮವಾರ ನಗರದಲ್ಲಿ ಏರ್ ಫೋರ್ಸ್ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣವು ಇದೀಗ ತಿರುವು ಪಡೆದಿದ್ದು, ಯುವಕರ ಮೇಲೆಯೇ ರೌಡಿ ಏರ್ ಫೋರ್ಸ್ ಅಧಿಕಾರಿ ಹಲ್ಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಇನ್ನೂ ಈ ವಿಂಗ್ ಕಮಾಂಡರ್ ಯುವಕರ ಮೇಲೇನೆ ಹಲ್ಲೆ ಮಾಡಿದ್ದಾರೆ ಎಂಬ ಸತ್ಯ ಸಿಸಿಟಿವಿಯಿಂದ ಬಯಲಾಗಿದೆ. ಇದೀಗ ವಿಂಗ್ ಕಮಾಂಡರ್ ಆದಿತ್ಯ ಬೋಸ್ ಬಂಧನಕ್ಕೆ ಒತ್ತಾಯಿಸಿ ರಾಜ್ಯಾದ್ಯಂತ ಆಕ್ರೋಶ ಹೆಚ್ಚಾಗಿದೆ.

ಸಿಸಿಟಿವಿ ದೃಶ್ಯಗಳೇ ನುಡಿದಿದ್ದವು ಸಾಕ್ಷಿ..

ರಸ್ತೆಯಲ್ಲಿ ಹೊರಟಿದ್ದ ಬೈಕ್‌ ಸವಾರನ ಮೇಲೆ ಮನಸೋ ಇಚ್ಚೆ ಹಲ್ಲೆ ವಿಂಗ್‌ ಕಮಾಂಡರ್‌ ಆದಿತ್ಯ ಬೋಸ್‌ ಹಲ್ಲೆ ಮಾಡಿದ್ದ. ಕೇವಲ ಬೈಕ್‌ ತನ್ನ ಕಾರಿಗೆ ಟಚ್‌ ಆಗಿದೆ ಎನ್ನುವ ಕಾರಣಕ್ಕೆ ಟಿಕ್ಕಿ ವಿಕಾಸ್‌ ಎನ್ನುವವರ ಮೇಲೆ ರಾಕ್ಷಸಿತನ ತೋರಿದ್ದನು. ಅಲ್ಲದೆ ಇದೆಲ್ಲ ವಿಚಾರವನ್ನು ಮರೆಮಾಚುವ ಪ್ಲ್ಯಾನ್‌ ಮಾಡಿ ಹಲ್ಲೆಯ ಆರೋಪವನ್ನು ಕನ್ನಡಿಗ ವಿಕಾಸ್‌ ತಲೆಗೆ ಕಟ್ಟಿದ್ದ. ಆದರೆ ಇದೆಲ್ಲ ಸುಳ್ಳು ಎನ್ನುವ ಬಲವಾದ ಸಾಕ್ಷ್ಯವನ್ನು ಗಲಾಟೆಯಾಗಿದ್ದ ಸ್ಥಳದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳೇ ಹೇಳುತ್ತಿವೆ.

ಕನ್ನಡಿಗನ ಮೇಲೆ ಗೂಬೆ ಕೂರಿಸಿದ್ದ ರೌಡಿ..

ಆ ಗಲಾಟೆ ವೇಳೆ ಸ್ಥಳೀಯರು ಎಷ್ಟೇ ಪ್ರಯತ್ನಿಸಿದರು ಬಿಡದೆ ಬೋಸ್ ಕನ್ನಡಿಗನ ಮೇಲೆ ಹಲ್ಲೆ ಮಾಡಿದ್ದಾನೆ. ಯುವಕನ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯುವಕನ ಮೇಲೆ ಹಲ್ಲೆ ನಡೆಸಿ ವಿಂಗಕಮಾಂಡರ್ ಬೋಸ್ ಸುಳ್ಳು ಹೇಳಿದ್ದಾನೆ. ಸ್ವತಃ ವಿಡಿಯೋ ಮಾಡುವ ಮೂಲಕ ತನ್ನ ಮೇಲೆ ಕನ್ನಡಿಗನೊಬ್ಬ ಹಲ್ಲೆ ನಡೆಸಿದ್ದಾಗಿ ಹೇಳಿಕೊಂಡಿದ್ದ. ಮುಖಕ್ಕೆ ರಕ್ತ ಬರಿಸಿಕೊಂಡು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ. ಇದನ್ನೇ ನಂಬಿದ್ದ ಪೊಲೀಸರು, ಯುವಕನ ವಿರುದ್ಧ ಎಫ್​​ಐಆರ್ ದಾಖಲಿಸಿಕೊಂಡು ವಶಕ್ಕೆ ಪಡೆದುಕೊಂಡಿದ್ದರು. ಆದ್ರೆ, ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸ್ಥಳದಲ್ಲಿನ ಸಿಸಿಟಿವಿಯಲ್ಲಿ ಬೋಸ್​ನ ನವರಂಗಿ ಆಟ ಬಟಾಬಯಲಾಗಿದೆ. ಆದರೆ ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ವಿಂಗ್ ಕಮಾಂಡರ್ ವಿರುದ್ಧವೇ ಎಫ್ ಐಆರ್ ದಾಖಲಾಗಿದೆ.

ಪುಂಡನ ವಿರುದ್ದ ಕೊಲೆಯತ್ನ ಕೇಸ್‌ ದಾಖಲು..

ಬಿಎನ್‌ಎಸ್ ಕಾಯ್ದೆಯ ಸೆಕ್ಷನ್ 109, 115(2), 304, 324 ಹಾಗೂ 352 ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶಿಲಾದಿತ್ಯ ಬೋಸ್ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ, ಅವರ ಪತ್ನಿ ಮಧುಮಿತಾ ದತ್ತ ಅವರು ದೂರು‌ ನೀಡಿದ್ದರು. ದೂರು ಆಧರಿಸಿ ಸಾಫ್ಟವೇರ್ ಎಂಜಿನಿಯರ್ ವಿಕಾಸ್ ಕುಮಾರ್ ಅವರನ್ನು ಸೋಮವಾರ ರಾತ್ರಿ ಪೊಲೀಸರು ಬಂಧಿಸಿದ್ದರು. ಆದರೆ, ಶಿಲಾದಿತ್ಯ ಬೋಸ್ ಅವರೇ ವಿಕಾಸ್ ಮೇಲೆ ಹಲ್ಲೆ ನಡೆಸಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದನ್ನು ಆಧರಿಸಿ ಕೊಲೆ ಯತ್ನ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕೆರಳಿದ ಕನ್ನಡಿಗರು..

ಅಲ್ಲದೆ ಘಟನೆಗೆ ಸಾಮಾಜಿಕ ಜಾಲತಾಣದಲ್ಲಿ ವಿಂಗ್‌ ಕಮಾಂಡರ್‌ ವಿರುದ್ಧ ಕೆರಳಿರುವ ಕನ್ನಡಿಗರು ರೌಡಿಯನ್ನು ಬಂಧಿಸುವಂತೆ ಒತ್ತಾಯಿಸುತ್ತಿದ್ದಾರೆ. ರಾಜ್ಯಾದ್ಯಂತ ಕನ್ನಡಪರ ಸಂಘಟನೆಗಳು ಇದೇ ವಿಚಾರಕ್ಕೆ ಸಿಡಿದೆದ್ದಿದ್ದು, ಕನ್ನಡಿಗನ ಮೇಲಿನ ಹಲ್ಲೆಯನ್ನು ಖಂಡಿಸಿವೆ. ಈ ಕೂಡಲೇ ಸರ್ಕಾರ ಕನ್ನಡ ವಿರೋಧಿ ಇಂತಹ ಪುಂಡರನ್ನು ಬಂಧಿಸಬೇಕೆಂದು ಆಗ್ರಹಗಳು ಹೆಚ್ಚಾಗಿವೆ. ಎಲ್ಲರನ್ನೂ ನಮ್ಮವರೆಂದು ಅಕ್ಕರೆಯಿಂದ ಪರಭಾಷಿಕರನ್ನು ಗೌರವಿಸುವ ಸ್ವಾಭಿಮಾನಿ ಕನ್ನಡಿಗರಿಗೆ ಕರುನಾಡಲ್ಲೇ ಸುರಕ್ಷತೆ ಇಲ್ಲವಾ ಎನ್ನುವ ಪ್ರಶ್ನೆಯನ್ನು ಎಲ್ಲ ಕನ್ನಡಿಗರು ಸರ್ಕಾರವನ್ನು ಕೇಳುತ್ತಿದ್ದಾರೆ. ಇನ್ನಾದರೂ ತಕ್ಷಣ ಸರ್ಕಾರ ಈ ಪುಂಡ, ಕನ್ನಡ ವಿರೋಧಿ ರೌಡಿ ವಿಂಗ್‌ ಕಮಾಂಡರ ಬಂಧನಕ್ಕೆ ಮುಂದಾಗಬೇಕಿದೆ.

About The Author