Thursday, August 21, 2025

Latest Posts

ಡಿಜಿಪಿ ಓಂ ಪ್ರಕಾಶ್ ಮರ್ಡರ್‌ ಮಿಸ್ಟರಿ : ಕೊಲೆ ಹಿಂದಿನ ರಹಸ್ಯ ರೋಚಕ..!

- Advertisement -

ಬೆಂಗಳೂರು : ಪತ್ನಿಯಿಂದ ಭೀಕರವಾಗಿ ಹತ್ಯೆಯಾಗಿದ್ದ ರಾಜ್ಯದ ಮಾಜಿ ಡಿಜಿ-ಐಜಿಪಿ ಓಂ ಪ್ರಕಾಶ್‌ ಅವರ ಕೊಲೆಯ ಪ್ರಕರಣವನ್ನು ಸರ್ಕಾರ ಸಿಸಿಬಿಗೆ ವರ್ಗಾವಣೆ ಮಾಡಿದೆ. ಈಗಾಗಲೇ ಪೊಲೀಸ್‌ ವಿಚಾರಣೆಯಲ್ಲಿ ಓಂ ಪ್ರಕಾಶ್‌ ಅವರ ಪತ್ನಿ ಪಲ್ಲವಿ ಹಾಗೂ ಮಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಈ ಪ್ರಕರಣದ ಹೆಚ್ಚಿನ ತನಿಖೆಗಾಗಿ ಸಿಸಿಬಿಗೆ ಹಸ್ತಾಂತರಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು, ಹತ್ಯೆಯ ಪ್ರಕರಣವನ್ನು ಸಿಸಿಬಿಗೆ ನೀಡಿದ್ದರಿಂದ ಅದರ ಬಗ್ಗೆ ಇನ್ನಷ್ಟು ತನಿಖೆಗೆ ಸಾಧ್ಯವಾಗಲಿದೆ. ಓಂ ಪ್ರಕಾಶ್‌ ಪತ್ನಿ ಅಧಿಕಾರಿಗಳ ವಾಟ್ಸಾಪ್‌ ಗ್ರೂಪ್‌ನಲ್ಲಿ ಮೆಸೇಜ್‌ ಮಾಡಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಈ ಎಲ್ಲ ವಿಚಾರಗಳ ಬಗ್ಗೆ ಪೊಲೀಸರು ವಿವಿಧ ಆಯಾಮಗಳಲ್ಲಿ ಸೂಕ್ತ ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಗೃಹ ಸಚಿವರ ಸೂಚನೆಯ ಮೇರೆಗೆ ನಿವೃತ್ತ ಐಜಿ ಮತ್ತು ಡಿಜಿಪಿ ಓಂ ಪ್ರಕಾಶ್ ಅವರನ್ನು ಪತ್ನಿಯೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಿ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಬಿ.ದಯಾನಂದ್ ಆದೇಶಿಸಿದ್ದಾರೆ. ಈ ಮೂಲಕ ಇದಕ್ಕೆ ಸಂಬಂಧಿಸಿದ್ದಂತೆ ಸಂಪೂರ್ಣ ತನಿಖೆಗೆ ಸರ್ಕಾರ ಮುಂದಾಗಿದೆ.

ನೆಮ್ಮದಿಯಾಗಿ ಊಟ ಮಾಡಲು ಬಿಟ್ಟಿರಲಿಲ್ಲ ಕೊಲೆಗಡುಕಿ..

ತಮ್ಮ ಸಾವಿಗೂ ಮುನ್ನ ಓಂ ಪ್ರಕಾಶ್‌ ಅವರು ಯಾವ ರೀತಿಯಾಗಿ ಕೊನೆಯ ಕ್ಷಣಗಳನ್ನು ಕಳೆದಿದ್ದರು ಎನ್ನುವ ಕುರಿತ ಮಾಹಿತಿ ಇದೀಗ ಬಯಲಾಗಿದ್ದು, ಆ ವೇಳೆಯೂ ರಾಕ್ಷಸಿ ಪತ್ನಿ ಗಂಡನೊಂದಿಗೆ ತನ್ನ ಮೊಂಡಾಟ ಮುಂದುವರೆಸಿ ಕೊಲೆಗೆ ಮುಂದಾಗಿದ್ದಳು. ಭಾನುವಾರದ ಮಧ್ಯಾಹ್ನದ ವೇಳೆಗೆ ಓಂ ಪ್ರಕಾಶ್‌ ಅವರು ಮೀನೂಟ ತರಿಸಿಕೊಂಡು ಡೈನಿಂಗ್‌ ಟೇಬಲ್‌ ಮೇಲಿಟ್ಟು ಊಟ ಮಾಡುತ್ತಿದ್ದರು. ಈ ವೇಳೆಯೂ ನೆಮ್ಮದಿಯಾಗಿ ತಿನ್ನಲು ಬಿಡದೆ ಪಲ್ಲವಿ ಜಗಳ ಮಾಡಿಕೊಂಡಿದ್ದಾಳೆ. ಇದೇ ಸಮಯದಲ್ಲಿ ದಿಢೀರ್‌ ಆಗಿ ಚಾಕು ಕೈಯಲ್ಲಿ ಹಿಡಿದು ಓಂ ಪ್ರಕಾಶ್‌ ಅವರ ಮುಖ, ಕುತ್ತಿಗೆ ಹಾಗೂ ಹೊಟ್ಟೆಯ ಭಾಗ ಸೇರಿದ್ದಂತೆ ಹಲವೆಡೆ ಹತ್ತಕ್ಕೂ ಹೆಚ್ಚು ಬಾರಿ ಇರಿದು ಕ್ರೂರತನ ಮೆರೆದಿದ್ದಳು. ಬಳಿಕ ಒದ್ದಾಡಿ ರಕ್ತದ ಮಡುವಿನಲ್ಲಿಯೇ ಓಂ ಪ್ರಕಾಶ್‌ ಪ್ರಾಣ ಬಿಟ್ಟಿದ್ದರು. ಕೃತ್ಯ ನಡೆದ ಸ್ಥಳದಲ್ಲಿ ತಟ್ಟೆ ತುಂಬೆಲ್ಲ ಮೀನು, ನೆಲದ ಮೇಲೆ ಮೀನು ಬಿದ್ದಿರುವುದು ಪೊಲೀಸ್‌ ತನಿಖೆಯಲ್ಲಿ ಬಯಲಾಗಿದೆ.

ಒಂದರ ಮೇಲೊಂದು ನಾಟಕ..

ಇಷ್ಟೆಲ್ಲ ಆದ ಬಳಿಕ ಕೊಲೆಗಡುಕ ತಾಯಿ ಹಾಗೂ ಮಗಳು ಇಬ್ಬರೂ ಖಾಕಿ ಎದುರು ಹೈಡ್ರಾಮಾ ಮಾಡಿದ್ದರು. ಜೀಪ್‌ ಹತ್ತಲು ದೊಡ್ಡ ರಾದ್ದಾಂತ ಮಾಡಿದ್ದ ಓಂ ಪ್ರಕಾಶ್‌ ಅವರ ಪುತ್ರಿ ಕೃತಿ ಕೆಲ ಕಾಲ ಪೊಲೀಸರನ್ನೇ ದಂಗು ಬಡಿಸಿದ್ದಳು. ಘಟನೆಯ ಬಳಿಕ ಈಕೆಯನ್ನು ವಶಕ್ಕೆ ಪಡೆಯುವ ವೇಳೆ ಮಹಿಳಾ ಪೊಲೀಸ್‌ ಕಾನ್ಸ್‌ಟೇಬಲ್‌ಗಳಿಗೆ ತನ್ನ ಉಗುರುನಿಂದ ಗೀರಿದ್ದಳು. ಇದನೆಲ್ಲ ಲೆಕ್ಕಿಸದೆ ಅವಳನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದರು. ಘಟನೆಯ ತನಿಖೆಯ ಭಾಗವಾಗಿ ಪೊಲೀಸರು ಇಬ್ಬರು ಆರೋಪಿಗಳ ಬೆರಳಚ್ಚು ಸಂಗ್ರಹಿಸಲು ಮುಂದಾದಾಗಲೂ ಅಲ್ಲಿಯೂ ಬೃಹನ್ನಾಟಕ ನಡೆಸಿದ್ದಾರೆ. ಮನವಿ ಮಾಡಿಕೊಂಡ ಪೊಲೀಸರ ಮೇಲೆಯೇ ನಿಂದಿಸಿ, ಬೆರಳಚ್ಚು ನೀಡಲು ಹಿಂದೇಟು ಹಾಕಿದ್ದರು. ಪುತ್ರಿಯಂತೂ ನಾನು ಬೆರಳಚ್ಚು ನೀಡುವುದಿಲ್ಲ ಎಂದು ಮೊಂಡಾಟ ಪ್ರದರ್ಶಿಸಿದ್ದಳು. ಆದರೂ ವಿಧಿ ವಿಜ್ಞಾನ ಪ್ರಯೋಗಾಲದ ತಜ್ಞರು ಬೆರಳಚ್ಚು ಪಡೆದಿದ್ದರು. ಕೊಲೆ ನಡೆದ ಸ್ಥಳದಲ್ಲಿ ದೊರೆತ ಚಾಕು ಮತ್ತು ಮೃತ ದೇಹದ ಮೇಲಿನ ಗುರುತುಗಳನ್ನು ತಜ್ಞರು ತಾಳೆ ಹಾಕಿದ್ದಾರೆ.

ಕರೆತಂದ ಉದ್ದೇಶ ಏನಾಗಿತ್ತು..?

ಕೊಲೆಗೂ ಎರಡೂ ದಿನ ಮೊದಲು ಓಂ ಪ್ರಕಾಶ್‌ ಅವರು, ತಮ್ಮ ತಂಗಿ ಮನೆಗೆ ಕಾರವಾರಕ್ಕೆ ಹೋಗಿದ್ದರು. ಆಸ್ತಿಯ ವ್ಯಾಮೋಹ ಹೊತ್ತಿದ್ದ ಪುತ್ರಿ ಕೃತಿ ಕೂಡ ಅಲ್ಲಿಗೆ ತೆರಳಿ ತಂದೆಯನ್ನು ಬಲವಂತವಾಗಿ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಳು. ಇದಾದ ಬಳಿಕವೇ ಓಂ ಪ್ರಕಾಶ್‌ ಅವರ ಭೀಕರ ಕೊಲೆಯಾಗಿದೆ. ಹೀಗಾಗಿ ಅವರನ್ನು ಕಾರವಾರದಿಂದ ಕರೆ ತಂದಿದ್ದರ ಹಿಂದಿನ ಉದ್ದೇಶ ಏನಾಗಿತ್ತು ಎಂಬ ಪ್ರಶ್ನೆ ಮೂಡಿದೆ. ಇನ್ನಷ್ಟು ಹೆಚ್ಚಿನ ತನಿಖೆಯಿಂದಲೇ ಇದರ ಹಿಂದಿನ ಕಾರಣ ಬಯಲಾಗಲಿದೆ. ಗಂಡನನ್ನ ಕೊಂದ ಕೊಲೆಗಡುಕ ಹೆಂಡತಿಯನ್ನು ನ್ಯಾಯಾಧೀಶರ ಎದುರು ಪೊಲೀಸರು ಹಾಜರುಪಡಿಸಿದ್ದರು. ಈ ವೇಳೆ ಪಲ್ಲವಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಲಾಗಿದೆ. ಪುತ್ರಿ ಕೃತಿಯನ್ನು ತಪಾಸಣೆಗಾಗಿ ನಿಮ್ಸಾನ್ಸ್‌ಗೆ ದಾಖಲಿಸಲಾಗಿದೆ.

- Advertisement -

Latest Posts

Don't Miss