Friday, April 25, 2025

Latest Posts

ನಾವು ಶರಣಾಗಲ್ಲ, ನಿಮ್ಮ ಬೆನ್ನು ಮುರಿದು ಮಟ್ಟ ಹಾಕುತ್ತೇವೆ : ಪಹಲ್ಗಾಮ್‌ ದಾಳಿಯ ಹೇಡಿಗಳ ಮಣ್ಣು ಮುಕ್ಕಿಸಲು ಮೋದಿ ಶಪಥ..

- Advertisement -

ನವದೆಹಲಿ : ಜಮ್ಜು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಯ ಬಗ್ಗೆ ಮೊದಲ ಬಾರಿ ಮೌನ ಮುರಿದಿರುವ ಪ್ರಧಾನಿ ನರೇಂದ್ರ ಮೋದಿ, ದಾಳಿಯಲ್ಲಿ ಭಾಗಿಯಾಗಿರುವ ಒಬ್ಬೊಬ್ಬರನ್ನು ಹುಡುಕಿ ಶಿಕ್ಷೆ ನೀಡುತ್ತೇವೆ ಎಂದು ಕಠಿಣ ಸಂದೇಶ ರವಾನಿಸಿದ್ದಾರೆ.

ಉಗ್ರರ ದಾಳಿಯನ್ನು ಖಂಡಿಸಿ ಬಿಹಾರದ ಮಧುಬನಿಯಲ್ಲಿ ಮಾತನಾಡಿರುವ ಅವರು, ಭೀಕರ ದಾಳಿ ನಡೆಸಿರುವ ಉಗ್ರರ ವಿರುದ್ಧ ಭಾರತವು ಪ್ರತಿಯೊಬ್ಬ ಭಯೋತ್ಪಾದಕ ಮತ್ತು ಅವರ ಬೆಂಬಲಿಗರನ್ನು ಪತ್ತೆಹಚ್ಚಲಿದೆ. ಅವರನ್ನು ಟ್ರ್ಯಾಕ್ ಮಾಡಿ ತಕ್ಕ ಪಾಠ ಕಲಿಸುತ್ತದೆ. ಉಗ್ರರ ವಿರುದ್ಧದ ನಮ್ಮ ಮನೋಭಾವ ಎಂದಿಗೂ ಬದಲಾಗುವುದಿಲ್ಲ ಎನ್ನುವ ಮೂಲಕ ಉಗ್ರವಾದವನ್ನು ಕಟುವಾದ ಪರದಗಳಲ್ಲಿ ಟೀಕಿಸಿದ್ದಾರೆ. ಭಾರತದಲ್ಲಿ ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿವರೆಗೆ ಶೋಕ ಮಡುಗಟ್ಟಿದೆ ಕ್ರೋಧ ಕುದಿಯುತ್ತಿದೆ. ಈ ದಾಳಿಯು ಕೇವಲ ಪ್ರವಾಸಿಗರ ಮೇಲಾಗಿದ್ದಲ್ಲ, ಬದಲಿಗೆ ನಮ್ಮ ದೇಶದ ಆತ್ಮದ ಮೇಲೆ ನಡೆದಿರುವ ದಾಳಿಯಾಗಿದೆ ಎಂದು ವಾಗ್ದಾಳ ನಡೆಸಿದ್ದಾರೆ.

ಬೆನ್ನು ಮುರಿಯುತ್ತೇವೆ, ಬಿಡಲ್ಲ..

ನಮ್ಮ ಮೇಲೆ ಅವರು ತಮ್ಮ ಧೈರ್ಯವನ್ನು ತೋರಿಸಿದ್ದಾರೆ ಇಂತವರ ಬೆನ್ನು ಮುರಿಯುತ್ತೇವೆ. ನಾವು ಏನೆಂಬುದು ಗೊತ್ತು ಮಾಡಿಸುತ್ತೇವೆ ಎಂದು ಅವರು ಗುಡಗಿದ್ದಾರೆ. ಈ ದಾಳಿಯನ್ನು ನಡೆಸಲು ಸಂಚು ರೂಪಿಸಿದ್ದವರು ಹಾಗೂ ಇದಕ್ಕೆ ಕಾರಣವಾದವರನ್ನು ನಾವು ಸುಮ್ಮನೇ ಬಿಡುವುದಿಲ್ಲ. ಅವರು ನಿರೀಕ್ಷಿಸದೇ ಇರುವ, ಮುಟ್ಟಿ ನೋಡಿಕೊಳ್ಳುವ ಹಾಗೆ ಶಿಕ್ಷೆಯನ್ನು ನೀಡುತ್ತೇವೆ. ಆ ಭಯೋತ್ಪಾದಕರ ಸ್ವರ್ಗವನ್ನು ಧ್ವಂಸಮಾಡುವ ಸಮಯ ಈಗ ಕೂಡಿ ಬಂದಿದೆ. 140 ಕೋಟಿ ಭಾರತೀಯರು ಅದನ್ನೇ ಹೇಳುತ್ತಿದ್ದಾರೆ ಈ ಉಗ್ರರ ಮಟ್ಟ ಹಾಕುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೊಂದ ಕುಟುಂಬಗಳೊಂದಿಗೆ ಕೇಂದ್ರವಿದೆ..

ಪಹಲ್ಗಾಮ್‌ನಲ್ಲಿ ಹತರಾದವರು ಯಾರೋ ಒಬ್ಬರು ಬಂಗಾಳಿ ಮಾತನಾಡುತ್ತಿದ್ದರು, ಇನ್ಯಾರೋ ಒಬ್ಬರು ಕನ್ನಡ ಮಾತನಾಡುತ್ತಿದ್ದರು, ಮತ್ಯಾರೋ ಒಬ್ಬರು ಮರಾಠಿ ಮಾತನಾಡುತ್ತಿದ್ದರು, ಒಡಿಯಾ, ಗುಜರಾತಿ, ಹೀಗೆ ಯಾರೋ ಒಬ್ಬರು ಬಿಹಾರದ ಮಗನಾಗಿದ್ದ. ಅಲ್ಲದೆ ಈ ದಾಳಿಯಲ್ಲಿ ಯಾರೋ ಒಬ್ಬರು ಮಗನನ್ನು, ಇನ್ಯಾರೋ ಒಬ್ಬರು ಸಹೋದರನನ್ನು ಹಾಗೂ ಮತ್ಯಾರೋ ಒಬ್ಬರು ಜೀವನ ಸಂಗಾತಿಯನ್ನು ಕಳೆದುಕೊಂಡಿದ್ದಾರೆ. ಆದರೆ ಉಗ್ರರು ನಿರ್ದಯವಾಗಿ ಪ್ರವಾಸಿಗರನ್ನು ಕೊಂದಿದ್ದಾರೆ. ಇದರಿಂದ ಇಡೀ ದೇಶವೇ ನೋವಿನಲ್ಲಿದೆ, ದೇಶದ ಜನರು ನೊಂದ ಕುಟುಂಬಗಳೊಂದಿಗೆ ನಿಂತಿದ್ದಾರೆ. ಅದರಂತೆ ಗಾಯಗೊಂಡವರ ಯೋಗಕ್ಷೇಮವನ್ನೂ ಸರ್ಕಾರ ನೋಡಿಕೊಳ್ಳಲಿದೆ ಎಂದು ಅವರು ಭರವಸೆ ನೀಡಿದ್ದಾರೆ.

ಜಗತ್ತಿಗೆ ಗಟ್ಟಿ ಸಂದೇಶ..!

ಸಾಮಾನ್ಯವಾಗಿ ಹಿಂದಿಯಲ್ಲಿಯೇ ಬಹುತೇಕ ತಮ್ಮ ಎಲ್ಲ ಕಾರ್ಯಕ್ರಮಗಳಲ್ಲಿ ಮಾತನಾಡುತ್ತಿದ್ದ ನರೇಂದ್ರ ಮೋದಿ, ಇಂದು ತಮ್ಮ ಭಾಷಣದ ನಡುವೆಯೇ ಮಾತನಾಡುತ್ತ ಏಕಾಏಕಿಯಾಗಿ ಇಂಗ್ಲೀಷ್‌ ಭಾಷೆಯಲ್ಲಿ ಮಾತನಾಡಿ, ಈ ವೇದಿಕೆಯ ಮೂಲಕ ನಾನು ಇಡೀ ಜಗತ್ತಿಗೆ ಹೇಳುತ್ತಿದ್ದೇನೆ. ಭಾರತವು ಯಾವೊಬ್ಬ ಉಗ್ರನನ್ನು ಬಿಡುವುದಿಲ್ಲ, ಈ ಉಗ್ರವಾದವನ್ನು ಬೆಂಬಲಿಸುವವರನ್ನು ಪತ್ತೆ ಹಚ್ಚಿ ಶಿಕ್ಷಿಸುತ್ತದೆ. ಅವರು ಎಲ್ಲೇ ಅಡಗಿರಲಿ, ಭೂಮಿಯಲ್ಲಿ ಬಚ್ಚಿಟ್ಟುಕೊಂಡಿದ್ದರು ಬೆನ್ನಟ್ಟಿ ಮಣ್ಣು ಮುಕ್ಕಿಸುತ್ತೇವೆ. ಈ ದಾಳಿಯಿಂದ, ಉಗ್ರವಾದದಿಂದ ಭಾರತ ತನ್ನ ಶಕ್ತಿಯನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ. ಈ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಹಾಗೂ ನಮ್ಮ ಮೇಲಿನ ಅನ್ಯಾಯಕ್ಕೆ ತಕ್ಕ ಉತ್ತರ ನೀಡಲು ನಾವು ಎಲ್ಲದಕ್ಕೂ ಸಿದ್ದರಾಗಿದ್ದೇವೆ ಎಂದು ಹೇಳುವ ಮೂಲಕ ಇಡೀ ವಿಶ್ವದ ಎಲ್ಲ ರಾಷ್ಟ್ರಗಳಿಗೆ ಭಾರತವು ಈ ದಾಳಿಯನ್ನು ಹಗುರವಾಗಿ ತೆಗೆದುಕೊಂಡಿಲ್ಲ ಎಂಬ ನೇರ ಸಂದೇಶ ನೀಡಿದ್ದಾರೆ. ಭಯೋತ್ಪಾದನೆ ಎದುರು ಭಾರತ ಎಂದೂ ತಲೆ ಬಾಗುವುದಿಲ್ಲ, ಭಾರತದಿಂದ ಭಯೋತ್ಪಾದನೆ ತೊಲಗಿಸುವವರೆಗೂ ಬಿಡುವುದಿಲ್ಲ. ಭಯೋತ್ಪಾದಕರನ್ನು ಬಿಡಲಾಗುವುದಿಲ್ಲ, ಅವರ ವಿರುದ್ಧ ಬಲವಾದ ಕ್ರಮ ಕೈಗೊಳ್ಳಲಾಗುವುದು, ಶಿಕ್ಷೆ ಎಷ್ಟು ಕಠಿಣವಾಗಿರುತ್ತದೆ ಎಂದರೆ ಭಯೋತ್ಪಾದಕರು ಎಂದಿಗೂ ಯೋಚಿಸಲು ಸಾಧ್ಯವಿಲ್ಲ ಎಂದು ಅವರು ಖಡಕ್‌ ವಾರ್ನ್‌ ಮಾಡಿದ್ದಾರೆ.

ಜೊತೆಗೆ ನಿಂತ ಎಲ್ಲರಿಗೂ ಧನ್ಯವಾದ..

ನಮ್ಮ ದೇಶದ ಜನರ ಭಾವನೆಯೊಂದಿಗೆ ಕೇಂದ್ರ ಸರ್ಕಾರವಿರಲಿದೆ. ಮಾನವೀಯತೆಯನ್ನು ಪ್ರತಿಪಾದಿಸುವವ ಎಲ್ಲರೂ ನಮ್ಮ ಜೊತೆಗಿರಲಿದ್ದಾರೆ. ಈ ಸಂದರ್ಭದಲ್ಲಿ ನಮ್ಮೊಂದಿಗೆ ನಿಂತ ಹಲವು ದೇಶಗಳ ಜನರು ಹಾಗೂ ನಾಯಕರಿಗೆ ನಾನು ಧನ್ಯವಾದಗಳನ್ನುತಿಳಿಸುತ್ತೇನೆ ಎಂದು ಮೋದಿ ಕೃತಜ್ಞತೆಗಳನ್ನು ಹೇಳಿದ್ದಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಈ ಎಚ್ಚರಿಕೆಯಿಂದ ಪಾಕಿಸ್ತಾನಕ್ಕೆ ನಡುಕ ಶುರುವಾಗಿದೆ. ಬುಧವಾರವಷ್ಟೇ ಉಗ್ರರನ್ನು ನ್ಯಾಯದ ಕಟ ಕಟೆಗೆ ತಂದು ಸೂಕ್ತ ಶಿಕ್ಷೆ ನೀಡಲಾಗುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಎಚ್ಚರಿಕೆ ನೀಡಿದ್ದರು. ಇದರಿಂದ ಅಲರ್ಟ್‌ ಆಗಿರುವ ಹೇಡಿ ಪಾಕಿಸ್ತಾನ ಗಡಿ ಭಾಗಗಳಲ್ಲಿ ಸೈನಿಕರನ್ನು ನಿಯೋಜಿಸುತ್ತಿದೆ. ಉಗ್ರರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸುವ ನೀಚ ಕಾರ್ಯಕ್ಕೆ ಮುಂದಾಗಿದೆ. ಆದರೆ ಹಿಂದಿ ಮಾತನಾಡುತ್ತಲೇ ದಿಡೀರ್‌ ಆಗಿ ಇಂಗ್ಲೀಷ್‌ಗೆ ವಾಲಿದ ನರೇಂದ್ರ ಮೋದಿಯವರು ಈ ಮೂಲಕ ಉಗ್ರವಾದವನ್ನು, ಮಾನವ ಕುಲಕ್ಕೆ ಕಂಟಕವಾಗಿರುವ ಭಯೋತ್ಪಾದಕತೆಯನ್ನು ಬೆಂಬಲಿಸುವ ಜಗತ್ತಿನ ಎಲ್ಲ ರಾಷ್ಟ್ರಗಳಿಗೆ ಸೂಕ್ಷ್ಮಎಚ್ಚರಿಕೆಯ ಸಂದೇಶ ರವಾನೆ ಮಾಡಿದ್ದಾರೆ.

- Advertisement -

Latest Posts

Don't Miss