ನವದೆಹಲಿ : ಭಾರತದ ವಿರುದ್ಧ ಸುಳ್ಳು ಸುದ್ಧಿ ಬಿತ್ತರಿಸಿದಕ್ಕಾಗಿ ಹಾಗೂ ಭಾರತೀಯ ಸೇನೆ, ಭದ್ರತಾ ಪಡೆಗಳ ವಿರುದ್ಧ ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದ ಪಾಕಿಸ್ತಾನದ 16 ಯೂಟ್ಯೂಬ್ ಚಾನೆಲ್‌ಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ. ಈ ಮೂಲಕ ಭಾರತ ವಿರೋಧಿ ಆಧಾರರಹಿತ ಕಪೋಲ ಕಲ್ಪಿತ ಸುದ್ಧಿಗಳನ್ನು ಹರಿಬಿಡುವ ಕೆಲಸ ಮಾಡುತ್ತಿದ್ದ ಚಾನೆಲ್‌ಗಳಿಗೆ ಬಿಸಿ ಮುಟ್ಟಿಸಿದೆ.
ಪ್ರಮುಖವಾಗಿ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ಬಳಿಕ ಪಾಕಿಸ್ತಾನದ ಯೂಟ್ಯೂಬ್ ಚಾನೆಲ್‌ಗಳು ಪತ್ರಿಕಾ ಧರ್ಮ ಮರೆತು ಭಾರತದ ವಿರುದ್ಧ ವಿನಾಕಾರಣ ಬೆಂಕಿಯುಗುಳುವ ಕೆಲಸ ಮಾಡುತ್ತಿದ್ದವು. ಭಾರತೀಯ ಸೇನೆಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಪ್ರಚೋದನಾಕಾರಿ ವಿಚಾರಗಳ ವಿಡಿಯೋ ಅಪ್ಲೋಟ್ ಮಾಡುತ್ತಿದ್ದವು. ಈ ಹಿನ್ನೆಲೆಯಲ್ಲಿ ಈ ಎಲ್ಲ ಪರಮ ಪಾಪಿಗಳ ಮೇಲೆ ಕೇಂದ್ರ ಸರ್ಕಾರ ಡಿಜಿಟಲ್ ಅಟ್ಯಾಕ್ ಮಾಡುವ ಮೂಲಕ ಪಾಠ ಕಲಿಸಿದೆ.
16 ಯೂಟ್ಯೂಬ್ ಚಾನೆಲ್ ಬ್ಯಾನ್..
ಪಾಕಿಸ್ತಾನದ ಡಾನ್ ನ್ಯೂಸ್, ಇರ್ಷಾದ್ ಭಟ್ಟಿ, ಸಮಾ ಟಿವಿ, ಅರೀ ನ್ಯೂಸ್, ಬೊಲ್ ನ್ಯೂಸ್, ರಫ್ತಾರ್, ದಿ ಪಾಕಿಸ್ತಾನ್ ರೆಫರನ್ಸ್, ಜಿಯೋನ್ಯೂಸ್, ಸಮಾ ಸ್ಪೋಟ್ಸ್, ಜಿಎನ್‌ಎನ್, ಉಜೈರ್ ಕ್ರಿಕೆಟ್, ಉಮರ್ ಚೀಮಾ ಎಕ್ಸ್‌ಕ್ಲೂಸಿವ್, ಅಸ್ಮಾ ಶಿರಾಜಿ, ಮುನೀಬ್ ಫಾರೂಕ್, ಸುನೋ ನ್ಯೂಸ್, ರಾಝಿ ನಾಮ ಹಾಗೂ ಪಾಕ್ ಮಾಜಿ ಆಟಗಾರ ಶೋಯೆಬ್ ಅಕ್ತರ್ ಯೂಟ್ಯೂಬ್ ಚಾನೆಲ್ ಸೇರಿದಂತೆ ಒಟ್ಟು 16 ಯೂಟ್ಯೂಬ್‌ಗಳಿಗೆ ನಿರ್ಬಂಧ ಹೇರಲಾಗಿದೆ. ಭಾರತದ ವಿರುದ್ಧ ಕೋಮು ಸೂಕ್ಷ್ಮ ವಿಷಯ ಮತ್ತು ತಪ್ಪು ಮಾಹಿತಿಯನ್ನು ಹರಡಿದ್ದಕ್ಕಾಗಿ ಗೃಹ ಸಚಿವಾಲಯದ ಶಿಫಾರಸಿನ ಮೇರೆಗೆ ಅವುಗಳನ್ನು ನಿಷೇಧಿಸಲಾಗಿದೆ. ದಾರಿತಪ್ಪಿಸುವ ನಿರೂಪಣೆಗಳು ಮತ್ತು ಆಕ್ಷೇಪಾರ್ಹ ಕಂಟೆಂಟ್‌ಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಪಾಕಿಗಳ ಚಾನೆಲ್‌ಗಳಿಗೆ ಕೇಂದ್ರ ಶಾಕ್ ನೀಡಿದೆ.
ಬಿಬಿಸಿಗೆ ಕೇಂದ್ರದ ಬಿಸಿ..
ಇನ್ನೂ ಜಾಗತಿಕ ಮಟ್ಟದ ಸುದ್ದಿವಾಹಿನಿಯಾಗಿರುವ ಬಿಬಿಸಿ ನ್ಯೂಸ್‌ಗೂ ಕೇಂದ್ರ ಸರ್ಕಾರ ಬಿಸಿ ಮುಟ್ಟಿಸಿದೆ. ಉಗ್ರರನ್ನು ಬಂಡುಕೋರರು ಎಂದು ಕರೆದು ಕಪೋಲಕಲ್ಪಿತ ಸುದ್ಧಿಗಳನ್ನು ಬಿತ್ತರಿಸಿದೆ. ಅದು ತನ್ನ ಸುದ್ದಿಗಳಲ್ಲಿ ಉಗ್ರರನ್ನು ಮಿಲಿಟಂಟ್ಸ್ ಎಂದು ಕರೆಯುವ ಹೀನ ಕೃತ್ಯ ಮಾಡಿದೆ. ಅಲ್ಲದೆ ಮಿಲಿಟಂಟ್ಸ್ ಅಂತ ಕನ್ನಡದಲ್ಲಿ ಸರ್ಚ್ ಮಾಡಿದರೆ ಉಗ್ರರು ಎಂದು ಗೂಗಲ್ ತೋರಿಸುತ್ತಿದೆ. ಆದರೆ ಇಂಗ್ಲೀಷ್‌ನಲ್ಲಿಅದರ ಬಗ್ಗೆ ಅರ್ಥವೇ ಬರುವುದಿಲ್ಲ. ಈ ಎಲ್ಲ ವಿಚಾರಗಳನ್ನು ಬಹಳಷ್ಟು ಗಂಬೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಬಿಬಿಸಿಗೆ ನೋಟಿಸ್ ನೀಡಿ ಕಠಿಣ ಕ್ರಮದ ಎಚ್ಚರಿಕೆ ನೀಡಿದೆ.
ಬ್ಯಾನ್ ಆಗಿತ್ತು ಪಾಕ್ ಟ್ವಿಟ್ಟರ್..
ಜಮ್ಮು ಮತ್ತು ಕಾಶ್ಮೀರದ ಜನಪ್ರಿಯ ಪ್ರವಾಸಿ ತಾಣ ಪಹಲ್ಗಾಮ್‌ದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನ ಅಮಾಯಕ ಪ್ರವಾಸಿಗರು ಸಾವನ್ನಪ್ಪಿದ ನಂತರದಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಭಯೋತ್ಪಾದಕ ದಾಳಿಯ ನಂತರ, ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಭಾರತ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಇದಕ್ಕೂ ಮೊದಲು, ಭಾರತವು ಪಾಕಿಸ್ತಾನ ಸರ್ಕಾರದ ಅಧಿಕೃತ ಟ್ವಿಟ್ಟರ್ ಖಾತೆಯನ್ನು ನಿರ್ಬಂಧಿಸಿತ್ತು. ಅದರ ಮುಂದುವರೆದ ಭಾಗವಾಗಿ ಇದೀಗ ಡಿಜಿಟಲ್ ಅಟ್ಯಾಕ್ ಮಾಡುವ ಮೂಲಕ ಪಾಕಿಗಳಿಗೆ ಮರ್ಮಾಘಾತ ನೀಡಿದೆ. ಈ ಮೂಲಕ ಭಾರತದ ವಿರುದ್ಧ ಹರಿದಾಡುತ್ತಿದ್ದ ಕಪೋಲ ಕಲ್ಪಿತ ಸುಳ್ಳು ಸುದ್ದಿಗಳನ್ನು ತಡೆಯಲು ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಇದರಿಂದ ಪಾಕಿಗಳಿಗೆ ಇನ್ನಷ್ಟು ಹಿನ್ನಡೆಯಾಗಿದ್ದಲ್ಲದೆ ದೊಡ್ಡ ಮುಖಭಂಗವಾದಂತಾಗಿದೆ.