ಹೆಣ್ಣು ಕೊಟ್ಟ ಮಾವ-ಅತ್ತೆ ತಂದೆ, ತಾಯಿಗೆ ಸಮಾನ ಅಂತಾರೆ. ಆದರೆ 25ರ ಅಳಿಯ 55 ವಯಸ್ಸಿನ ಅತ್ತೆಯ ಜೊತೆ ಓಡಿ ಹೋಗಿರುವ ವಿಲಕ್ಷಣ ಘಟನೆ ನಡೆದಿದೆ. ಸಾಮಾನ್ಯವಾಗಿ ಉತ್ತರ ಭಾರತದ ರಾಜ್ಯಗಳಲ್ಲಿ ಇಂಥಾ ಘಟನೆಗಳನ್ನು ಇದುವರೆಗೂ ನಾವು ನೋಡಿದ್ದೇವೆ. ಆದರೆ ದಕ್ಷಿಣ ಭಾರತ ಅದರಲ್ಲೂ ಕರ್ನಾಟಕದ ದಾವಣಗೆರೆಯಲ್ಲಿ ಇಂಥದ್ದೇ ಘಟನೆ ನಡೆದಿದೆ. ಮದುವೆಯಾದ 15 ದಿನಕ್ಕೇ ಗಂಡ, ಅತ್ತೆ ಜೊತೆ ಪರಾರಿಯಾಗಿ ನವ ವಿವಾಹಿತೆ ಕಣ್ಣೀರು ಹಾಕುತ್ತಿದ್ದಾರೆ.
ಗಂಡ-ಅಮ್ಮನಿಂದ ಮೋಸ ಹೋದ ಸಂತ್ರಸ್ತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಮುದ್ದೇನಹಳ್ಳಿ ಗ್ರಾಮದ ನಾಗರಾಜ್, 13 ವರ್ಷದ ಹಿಂದೆ ಶಾಂತಾಳನ್ನು ಮದುವೆಯಾಗಿದ್ದ. ಮೊದಲ ಪತ್ನಿಗೆ ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಗಂಡು ಮಗನಿದ್ದ.
2 ವರ್ಷಗಳ ಹಿಂದೆ ಗಣೇಶ್ ಎಂಬಾತನನ್ನ ಶಾಂತಾ ಮನೆಗೆ ಕರೆದುಕೊಂಡು ಬಂದಿದ್ದಳು. ಹಿರಿಯ ಮಗಳನ್ನ ಈತನಿಗೆ ಕೊಟ್ಟು ಮದುವೆ ಮಾಡಿಸೋಣ ಅಂತಾ ಪಟ್ಟು ಹಿಡಿದಿದ್ಲು. ಮನೆ ಅಳಿಯನಾಗಿ ಇರ್ತಾನೆ. ಮಗಳು ನಮ್ಮ ಕಣ್ಣುಮುಂದೆಯೇ ಇರುತ್ತಾಳೆ ಅಂತಾ ನಂಬಿಸಿದ್ಲು. ಓದಲು ಹಾಸ್ಟೆಲ್ಗೆ ಹೋಗ್ತೀನಿ, ಮದುವೆ ಬೇಡ ಅಂದರೂ ಮಗಳ ಮಾತನ್ನ ಶಾಂತಾ ಕೇಳಿರಲಿಲ್ಲ.
ಪತ್ನಿ ಶಾಂತಾಳ ಮಾತು ನಂಬಿದ ನಾಗರಾಜ್, ಚನ್ನಗಿರಿ ತಾಲೂಕಿನ ಮರವಂಜಿ ನಿವಾಸಿ ಗಣೇಶ್ ಜೊತೆ, ಹಿರಿಯ ಮಗಳನ್ನು ಕೊಟ್ಟು ಅದ್ಧೂರಿಯಾಗಿ ಮದುವೆ ಮಾಡಿದ್ರು. ಆದರೆ ಕೇವಲ 15 ದಿನಗಳಲ್ಲಿ ಮಲತಾಯಿ ಜೊತೆ ಗಂಡ ಸಂಬಂಧ ಇಟ್ಟುಕೊಂಡಿರೋದು ಗೊತ್ತಾಗಿದೆ. ಗಂಡನ ಮೊಬೈಲ್‌ನಲ್ಲಿ ಅಶ್ಲೀಲ ಮೆಸೇಜ್, ಸರಸಗಳನ್ನು ನೋಡಿ ದಂಗಾಗಿದ್ಲು. ಮಗಳು ತಕ್ಷಣವೇ ತಂದೆಗೆ ವಿಷಯ ತಿಳಿಸಿದ್ದಾಳೆ. ಎಲ್ಲಾ ಮೆಸೇಜ್, ಫೋಟೋಗಳನ್ನು ತಂದೆಗೆ ಫಾರ್ವರ್ಡ್ ಮಾಡಿದ್ದಾಳೆ.
ಅಳಿಯ ಗಣೇಶ್, ಪತ್ನಿ ಶಾಂತಾಳ ನೀಚ ಕೃತ್ಯ ಕಂಡು ನಾಗರಾಜ್ ಶಾಕ್ ಆಗಿದ್ರು. ಮಗಳ ಜೊತೆ ನಾಗರಾಜ್ ಮಾತಾಡಿದ್ದು ಶಾಂತಾಗೆ ಗೊತ್ತಾಗಿದೆ. ತಕ್ಷಣವೇ ಗಣೇಶ್ಗೆ ವಿಷಯ ತಿಳಿಸಿ, ಓಡಿ ಹೋಗೋಣ ಅಂತಾ ಹೇಳಿದ್ದಾಳೆ.
ಶಾಂತಾ ನಿರ್ಧಾರದಂತೆ ಮೇ 2ರಂದು ಚನ್ನಗಿರಿ ಬಸ್ ನಿಲ್ದಾಣಕ್ಕೆ ಪತ್ನಿ ಜೊತೆ ಗಣೇಶ್ ಬಂದಿದ್ದ. ನೀನು ಇಲ್ಲೇ ಇರು ಬರುತ್ತೇನೆ ಅಂತಾ ಹೇಳಿ ಅಲ್ಲಿಂದ ಹೊರಟು ಹೋಗಿದ್ದ. ಮನೆಯಲ್ಲಿದ್ದ ಹಣ, ಚಿನ್ನಾಭರಣ ಕದ್ದು ಅಳಿಯನ ಜೊತೆ ಶಾಂತಾ ಎಸ್ಕೇಪ್ ಆಗಿದ್ದಾಳೆ. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಳಿಯ, ಅತ್ತೆಯ ಈ ಅಕ್ರಮ ಸಂಬಂಧದ ಸುದ್ದಿ ಇಡೀ ಕರ್ನಾಟಕದಲ್ಲಿ ಚರ್ಚೆಗೆ ಕಾರಣವಾಗಿದೆ.