ಆಷಾಢ ಶುಕ್ರವಾರದ ದಿನ ಚಿನ್ನಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. 2021ರಲ್ಲಿ 22 ಕ್ಯಾರೆಟ್ ನ 20 ಗ್ರಾಂ ಚಿನ್ನದ ಬೆಲೆ 1 ಲಕ್ಷದ ಆಸುಪಾಸಿನಲ್ಲಿತ್ತು. ಮೇಕಿಂಗ್ ಚಾರ್ಜ್ ವೇಸ್ಟೇಜ್ ಅಂತೆಲ್ಲಾ ಹಾಕಿದ್ರೆ 1 ಲಕ್ಷದ ಐದಾರು ಸಾವಿರವಾಗ್ತಿತ್ತು. 2025ರ ವೇಳೆಗೆ 20 ಗ್ರಾಂ ಗೋಲ್ಡ್ ಖರೀದಿಸಬೇಕೆಂದ್ರೆ ಬರೋಬ್ಬರಿ 2 ಲಕ್ಷಕ್ಕೂ ಹೆಚ್ಚು ಹಣ ಕೊಡಲೇಬೇಕು. ಕೇವಲ ಐದೇ ವರ್ಷಗಳ ಅಂತರದಲ್ಲಿ ಅದು ಡಬಲ್ ಆಗ್ಬಿಟ್ಟಿದೆ.
ಚಿನ್ನ-ಬೆಳ್ಳಿ ಬೆಲೆಗಳು ಪ್ರತಿದಿನ ಬದಲಾಗುತ್ತಲೇ ಇರುತ್ತವೆ. ಜಾಗತಿಕ ಮಾರುಕಟ್ಟೆ, ಡಾಲರ್ ಎದುರು ರೂಪಾಯಿ ಮೌಲ್ಯ, ಹಬ್ಬ, ಮದುವೆ, ಸಮಾರಂಭ, ಆಮದು ಸುಂಕ ಹೀಗೆ ಹಲವು ಕಾರಣಗಳು ಗೋಲ್ಡ್ ರೇಟ್ ಮೇಲೆ ಪ್ರಭಾವ ಬೀರುತ್ತವೆ.
ಇದೀಗ ಏರಿಕೆಯಾಗ್ತಿದ್ದ ಚಿನ್ನದ ಬೆಲೆ ಇಳಿಮುಖದತ್ತ ಸಾಗಿದೆ. ನಿನ್ನೆಯಿಂದ ಆಷಾಢ ಮಾಸ ಶುರುವಾಗಿದೆ. ಶುಭ ಸಮಾರಂಭಗಳು ಕಡಿಮೆ ಇರೋದಿದ್ರಿಂದ ಚಿನ್ನಕ್ಕಿರುವ ಬೇಡಿಕೆ ಕಡಿಮೆಯಾಗಿದೆ. ಬೇಡಿಕೆ ಕಡಿಮೆಯಾಗ್ತಿದ್ದಂತೆ ಚಿನ್ನದ ಬೆಲೆ ಇಳಿಕೆಯತ್ತಾ ಸಾಗಿದೆ.
gfx: 22 ಕ್ಯಾರೆಟ್
ನಿನ್ನೆ – 1 ಗ್ರಾಂ – ₹9,070
ಇಂದು – 1 ಗ್ರಾಂ – ₹8,985
85 ರೂಪಾಯಿ ಇಳಿಕೆ
ನಿನ್ನೆ – 10 ಗ್ರಾಂ – ₹90,700
ಇಂದು – 10 ಗ್ರಾಂ – ₹89,850
850 ರೂಪಾಯಿ ಇಳಿಕೆ
ನಿನ್ನೆ – 100 ಗ್ರಾಂ – ₹9,07,000
ಇಂದು – 100 ಗ್ರಾಂ – ₹8,98,500
8,500 ರೂಪಾಯಿ ಇಳಿಕೆ
(gfx voice over – ನಿನ್ನೆ 9,070 ರೂಪಾಯಿ ಇದ್ದ 22 ಕ್ಯಾರೆಟ್ ನ 1 ಗ್ರಾಂ ಚಿನ್ನದ ಬೆಲೆ, ಇಂದು 8,985 ರೂಪಾಯಿ ಆಗಿದೆ. ನಿನ್ನೆಗಿಂತ 85 ರೂಪಾಯಿ ಕಡಿಮೆಯಾಗಿದೆ. ನಿನ್ನೆ 10 ಗ್ರಾಂ ಚಿನ್ನದ ಬೆಲೆ 90,700 ರೂಪಾಯಿ ಇತ್ತು. ಇಂದು 89,850 ರೂಪಾಯಿ ಆಗಿದ್ದು, 850 ರೂಪಾಯಿ ಇಳಿಕೆಯಾಗಿದೆ. ನಿನ್ನೆ 9,07,000 ರೂಪಾಯಿ ಇದ್ದ 100 ಗ್ರಾಂ ಚಿನ್ನ, ಇಂದು 8,98,500 ರೂಪಾಯಿಗೆ ಇಳಿಕೆಯಾಗಿದ್ದು, 8,500 ರೂಪಾಯಿ ಕಡಿಮೆಯಾಗಿದೆ.)
gfx: 24 ಕ್ಯಾರೆಟ್
ನಿನ್ನೆ – 1 ಗ್ರಾಂ – ₹9,895
ಇಂದು – 1 ಗ್ರಾಂ – ₹9802
93 ರೂಪಾಯಿ ಇಳಿಕೆ
ನಿನ್ನೆ – 10 ಗ್ರಾಂ – ₹98,950
ಇಂದು – 10 ಗ್ರಾಂ – ₹98,020
930 ರೂಪಾಯಿ ಇಳಿಕೆ
ನಿನ್ನೆ – 100 ಗ್ರಾಂ – ₹9,89,500
ಇಂದು – 100 ಗ್ರಾಂ – ₹9,80,200
9,300 ರೂಪಾಯಿ ಇಳಿಕೆ
(gfx voice over – 24 ಕ್ಯಾರೆಟ್ ನ 1 ಗ್ರಾಂ ಚಿನ್ನದ ಬೆಲೆ ನಿನ್ನೆ 9,895 ರೂಪಾಯಿ ಇತ್ತು. ಇಂದು 9802 ರೂ. ಆಗಿದ್ದು, 93 ರೂಪಾಯಿ ಕಡಿಮೆಯಾಗಿದೆ. ನಿನ್ನೆ 98,950 ರೂ. ಇದ್ದ 10 ಗ್ರಾಂ ಚಿನ್ನದ ಬೆಲೆ, ಇಂದು
98,020 ರೂಪಾಯಿಗೆ ಇಳಿದಿದ್ದು, 930 ರೂಪಾಯಿ ಕಡಿಮೆಯಾಗಿದೆ. ಇನ್ನು, 100 ಗ್ರಾಂ ಚಿನ್ನದ ಬೆಲೆ ನಿನ್ನೆ 9,89,500 ರೂ. ಇದ್ದು, ಇಂದು 9,80,200 ರೂಪಾಯಿ ಆಗಿದೆ. ಬರೋಬ್ಬರಿ 9,300 ರೂಪಾಯಿ ಇಳಿಕೆಯಾಗಿದೆ.)
ಇನ್ನು, ಕೆಲ ದಿನಗಳ ಹಿಂದಷ್ಟೇ ಭಾರತ ಸರ್ಕಾರ ಚಿನ್ನದ ಆಮದು ಸುಂಕವನ್ನು 15% ನಿಂದ 6%ಗೆ ಇಳಿಕೆ ಮಾಡಿದ್ದೂ ಕೂಡ ಚಿನ್ನದ ಬೆಲೆ ಇಳಿಕೆ ಮೇಲೆ ಪ್ರಭಾವ ಬೀರಿದೆ.