Friday, November 28, 2025

Latest Posts

ಗೃಹ ಸಚಿವರ ಊಟದಲ್ಲೇ ಸತ್ತ ಜಿರಳೆ!

- Advertisement -

ಗೃಹ ಸಚಿವರ ಊಟದಲ್ಲೇ ಸತ್ತ ಜಿರಳೆ ಸಿಕ್ಕಿದೆ. ಆಂಧ್ರ ಗೃಹ ಸಚಿವೆ ವಂಗಲಪುಡಿ ಅನಿತಾ, ಹಾಸ್ಟೆಲ್​ ತಪಾಸಣೆ ಕೈಗೊಂಡಿದ್ರು. ವಿಶಾಖಪಟ್ಟಣಂನ ಹಾಸ್ಟೆಲ್ ಒಂದಕ್ಕೆ ದಿಢೀರ್ ಭೇಟಿ ಕೊಟ್ಟು ಪರಿಶೀಲನೆಗೆ ಮುಂದಾಗಿದ್ರು.

ವಿದ್ಯಾರ್ಥಿಗಳ ಜೊತೆ ತಾವೂ ಕುಳಿತು ಊಟ ಮಾಡೋಕೆ ಶುರು ಮಾಡಿದ್ರು. ಈ ವೇಳೆ ಸಚಿವೆಯ ಊಟದ ತಟ್ಟೆಯಲ್ಲೇ ಜಿರಳೆ ಸಿಕ್ಕಿದೆ. ತಕ್ಷಣ ಸತ್ತ ಜಿರಳೆಯನ್ನು ಕೈಯ್ಯಲ್ಲಿಡಿದು ವಾರ್ಡನ್​ ಗೆ ತೋರಿಸಿದ್ದಾರೆ ಛೀಮಾರಿ ಹಾಕಿದ್ದಾರೆ.

ಹಾಸ್ಟೆಲ್​ ಆವರಣದಲ್ಲಿ ಸಿಸಿ ಕ್ಯಾಮರಾಗಳಿಲ್ಲ. ಶುಚಿತ್ವದ ಕೊರತೆ ಇದೆ, ಕಳಪೆ ಗುಣಮಟ್ಟದ ಊಟ ನೀಡ್ತಾರೆ. ನಿಗದಿತ ಮೆನುವಿನ ಪ್ರಕಾರ ಊಟ ಇರಲ್ಲ. ಅವಧಿಗೂ ಮುನ್ನವೇ ವಾರ್ಡ್ ಹೊರಟು ಹೋಗುತ್ತಾರೆ ಅಂತಾ ವಾರ್ಡನ್ ವಿರುದ್ಧ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಸದ್ಯ ಗೃಹ ಸಚಿವೆ ಅನಿತಾ ಸೂಚನೆ ಮೇರೆಗೆ, ವಾರ್ಡನ್ ಅಮಾನತು ಮಾಡಿ ಡಿಸಿ ಆದೇಶಿಸಿದ್​ದಾರೆ.

ಇತ್ತೀಚೆಗೆ ಆಂಧ್ರದ ಶ್ರೀಶೈಲಂ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ, ಜಿರಳೆ ಸಿಕ್ಕಿದ್ದ ವೀಡಿಯೋ ಭಾರೀ ವೈರಲ್​ ಆಗಿತ್ತು. ಇದೀಗ ಹಾಸ್ಟೆಲ್ ಊಟದಲ್ಲೂ ಜಿರಳೆ ಪತ್ತೆಯಾಗಿದೆ. ಆಂಧ್ರಪ್ರದೇಶ ಸರ್ಕಾರಕ್ಕೆ ಜಿರಳೆ ಕಂಟಕ ಇದೆ ಅಂತಾ ನೆಟ್ಟಿಗರು ಟೀಕಿಸಿದ್ದಾರೆ.

- Advertisement -

Latest Posts

Don't Miss