Friday, July 4, 2025

Latest Posts

ತಿರುಪತಿಯಲ್ಲಿ ಬೆಂಕಿ ಅಪಶಕುನದ ಸಂಕೇತವಾ..?

- Advertisement -

ಬೆಂಗಳೂರು : ಆಂಧ್ರಪ್ರದೇಶದ ತಿರುಪತಿಯಲ್ಲಿರುವ ಗೋವಿಂದರಾಜು ಸ್ವಾಮಿ ದೇವಸ್ಥಾನದ ಬಳಿ ಇಂದು ಬೆಳಗಿನ ಜಾವ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ದೇವಾಲಯದ ಸುತ್ತಮುತ್ತಲಿನ ಪ್ರದೇಶದಲ್ಲಿ ಅಪಾರ ಆಸ್ತಿಪಾಸ್ತಿ ಹಾನಿಯಾಗಿದೆ.

ಎರಡು ಅಗ್ನಿ ಶಾಮಕ ವಾಹನಗಳ ಮೂಲಕ ಬೆಂಕಿಯನ್ನು ನಂದಿಸುವ ಕಾರ್ಯ ನಡೆದಿದೆ. ಆದರೂ ಸಹ ಅಷ್ಟರೊಳಗೆ ದೇವಸ್ಥಾನದ ಸುತ್ತಲೂ ವ್ಯಾಪಿಸಿದ್ದ ಬೆಂಕಿಯ ಕೆನ್ನಾಲಿಗೆಯು ಪಕ್ಕದಲ್ಲಿದ್ದ ಒಂದು ಶೆಡ್​ಗೆ ಹೊತ್ತಿಕೊಂಡು ಸಂಪೂರ್ಣವಾಗಿ ಶೆಡ್​​ ಅನ್ನೇ ಸುಟ್ಟು ಕರಕಲನ್ನಾಗಿಸಿದೆ.

ಇನ್ನೂ ಪ್ರಮುಖವಾಗಿ ಈ ಗೋವಿಂದರಾಜುಸ್ವಾಮಿ ದೇವಾಲಯದ ಬಳಿ ಹಾಗೂ ಆ ನಗರದಲ್ಲಿ ಸಂಭವಿಸಿರುವ ಈ ಬೆಂಕಿ ಅವಘಡವು ಈ ವರ್ಷದಲ್ಲಿನ ಎರಡನೇ ದುರಂತವಾಗಿದೆ. ಕಳೆದ ಜನವರಿ ತಿಂಗಳಲ್ಲಿ ನೂತನ ವರ್ಷಾರಂಭದಲ್ಲಿಯೇ ವೈಕುಂಠ ಏಕಾದಶಿಯಂದು ದ್ವಾರ ದರ್ಶನಕ್ಕಾಗಿ ಟೋಕನ್ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಜಮಾವಣೆಗೊಂಡೊದ್ದರು. ಈ ವೇಳೆ ನೂಕುನುಗ್ಗಲಿನಿಂದ ಏಕಾಏಕಿ ಕಾಲ್ತುಳಿತ ಸಂಭವಿಸಿ ಆರು ಜನರು ಸಾವನ್ನಪ್ಪಿದ್ದರು. ಅಲ್ಲದೆ 40ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.

ಅಲ್ಲದೆ ಬೆಂಕಿಯ ಅವಘಡದ ಸ್ಥಳವು ಖ್ಯಾತ ತಿರುಪತಿ ಬಾಲಾಜಿ ದೇವಸ್ಥಾನದಿಂದ ಪೂರ್ವ-ಆಗ್ನೇಯಕ್ಕೆ ಸುಮಾರು 9 ಕಿಲೋ ಮೀಟರ್ ದೂರದಲ್ಲಿದೆ. ಇದು ಈ ಜಿಲ್ಲೆಯ ಅತ್ಯಂತ ಹಳೆಯ ಮತ್ತು ದೊಡ್ಡ ದೇವಾಲಯಗಳಲ್ಲಿ ಒಂದಾಗಿದೆ.

ಈ ಎರಡು ಅವಘಡಗಳನ್ನು ನಾವು ಸೂಕ್ಷ್ಮವಾಗಿ ಗಮನಿಸಿದಾಗ ಇದರ ಹಿಂದೆ ಯಾವುದೋ ಒಂದು ದೊಡ್ಡ ಅಪಶಕುನದ ಸಂಕೇತ ಕಂಡು ಬರಬಹುದು, ಯಾಕೆಂದರೆ ಈಗಾಗಲೇ ಎಲ್ಲರಿಗೂ ತಿಳಿದಂತೆ ತಿರುಪತಿ ತಿಮ್ಮಪ್ಪನ ದೇವಸ್ಥಾನದ ವ್ಯಾಪ್ತಿಯಲ್ಲಿ ಇಂದಿಗೂ ವಿಮಾನ ಹಾರಾಟವನ್ನು ನಿಷೇಧಿಸಲಾಗಿದೆ. ಅಲ್ಲದೆ ಇದಕ್ಕೆ ಧಾರ್ಮಿಕ ಕಾರಣಗಳೂ ಇರುವುದನ್ನು ತಳ್ಳಿ ಹಾಕುವಂತಿಲ್ಲ. ಒಂದೇ ವರ್ಷದಲ್ಲಿ, ಒಂದೇ ನಗರದಲ್ಲಿ ಹಾಗೂ ಒಂದೇ ಪ್ರದೇಶದಲ್ಲಿ ಎರಡೆರಡೂ ಅನಾಹುತಗಳು ಸಂಭವಿಸುತ್ತಿರುವುದು ಸಹಜವಾಗಿ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಧಾರ್ಮಿಕ ಆರೋಗ್ಯ ಹಾಳು ಗೆಡವುವ ಚಟುವಟಿಕೆಗಳು ನಡೆಯುತ್ತಿವೆಯಾ? ಅಥವಾ ಇನ್ನಿತರ ಖುಣಾತ್ಮಕ ಶಕ್ತಿಗಳ ಕಾರಣಕ್ಕಾಗಿಯೋ ಏನೋ ನಿಖರವಾಗಿ ಹೇಳಲಾಗದಿದ್ದರೂ ಸಹ ಇದು ಶಕ್ತಿಶಾಲಿಯಾಗಿರುವ ತಿಮ್ಮಪ್ಪ, ಗೋವಿಂದರಾಜಸ್ವಾಮಿಗಳು ಮುನಿಸಿಕೊಂಡಿರುವ ಸಂಕೇತವಾ ಎನ್ನುವ ಪ್ರಶ್ನೆ ಮೂಡುತ್ತಿದೆ.

- Advertisement -

Latest Posts

Don't Miss