Saturday, July 5, 2025

Latest Posts

ಚಾಮುಂಡಿಯ ಮಹಾನ್‌ ಭಕ್ತ ʼದರ್ಶನ’:ನಾಡದೇವಿಯ ಮೊರೆ ಹೋದ ದರ್ಶನ್ ಕುಟುಂಬ

- Advertisement -

ಇಂದು ಆಷಾಢ ಮಾಸದ ಎರಡನೇ ಶುಕ್ರವಾರ. ಮೈಸೂರು ಚಾಮುಂಡಿ ಬೆಟ್ಟಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ. ರಾಜ್ಯದ ಹಲವು ಕಡೆಯಿಂದ ಮುಂಜಾನೆಯೇ ಭಕ್ತರ ದಂಡು ನಾಡದೇವಿಯ ದರ್ಶನಕ್ಕೆ ಆಗಮಿಸಿದೆ. ಇಂದು ವಿಶೇಷವಾಗಿ ನಟ ದರ್ಶನ್ ಕೂಡ ಪತ್ನಿ ವಿಜಯಲಕ್ಷ್ಮಿ ಹಾಗೂ ತಮ್ಮ ದಿನಕರ್ ತೂಗುದೀಪ್, ಅತ್ತಿಗೆ ಜೊತೆಗೆ ಆಗಮಿಸಿ ದೇವಿಯ ದರ್ಶನ ಪಡೆದಿದ್ದಾರೆ.

ಚಾಮುಂಡಿ ದೇವಿಗೆ ಆಷಾಢ ಶುಕ್ರವಾರಗಳಂದು ವಿಶೇಷ ಪೂಜೆ ಪುನಸ್ಕಾರಗಳನ್ನು ನಡೆಸಲಾಗುತ್ತದೆ. ಈ ಹಿನ್ನೆಲೆ ಇಂದು 2ನೇ ಆಷಾಢ ಶುಕ್ರವಾರವಾದ ಹಿನ್ನೆಲೆ ಚಾಮುಂಡೇಶ್ವರಿ ತಾಯಿಗೆ ವಿಶೇಷವಾಗಿ ಲಕ್ಷ್ಮಿ ಅಲಂಕಾರವನ್ನು ಮಾಡಲಾಗಿತ್ತು.

ಬೆಳಗ್ಗೆಯಿಂದಲೇ ಚಾಮುಂಡಿ ತಾಯಿಗೆ ವಿಶೇಷ ಪೂಜೆ ನಡೆಯುತ್ತಿದ್ದು, ಇಂದು ಮುಂಜಾನೇ 5 ಗಂಟೆಯಿಂದಲೇ ತಾಯಿಯ ದರ್ಶನಕ್ಕೆ ಅವಕಾಶ ಮಾಡಲಾಗಿತ್ತು. ಸರತಿ ಸಾಲಿನಲ್ಲಿ ನಿಂತು ಭಕ್ತರು ಶಕ್ತಿ ದೇವತೆಯ ದರ್ಶನ ಪಡೆದರು. ವಿವಿಧ ಬಗೆಯ ಹೂವು ಹಾಗೂ ಮಾವಿನ ಕಾಯಿಗಳು ಹಾಗು ಮುಸುಕಿನ ಜೋಳಗಳಿಂದ ದೇವಾಲಯದ ಆವರಣದೊಳಗೆ ವಿಶೇಷ ಅಲಂಕಾರ ಮಾಡಲಾಗಿದೆ.

ಬೆಳ್ಳಂಬೆಳಗ್ಗೆಯೇ ದೇಗುಲಕ್ಕೆ ಬಂದ ದರ್ಶನ್ ನೋಡಿ, ಅಭಿಮಾನಿಗಳು ರೊಚ್ಚಿಗೆದ್ದಿದ್ರು. ಶಿಳ್ಳೆ ಹಾಕಿ, ಜೈಕಾರ ಕೂಗಿದ್ರು. ದಚ್ಚುಗೆ ಶೇಕ್ ಹ್ಯಾಂಡ್ ಮಾಡಿ, ಸೆಲ್ಫಿಗಾಗಿ ಮುಗಿಬಿದ್ದಿದ್ರು. ಅಭಿಮಾನಿಗಳುತ್ತಾ ಕೈ ಬೀಸಿ ದೇವಸ್ಥಾನದೊಳಗೆ ಎಂಟ್ರಿ ಕೊಟ್ಟ ದಾಸ, ಚಾಮುಂಡಿಯನ್ನೇ ತದೇಕ ಚಿತ್ತದಿಂದ ನೋಡುತ್ತಾ ಕೆಲ ಹೊತ್ತು ಕೈಜೋಡಿಸಿ ನಿಂತಿದ್ರು. ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಲಾಕ್ ಆಗಿರುವ ದಾಸ, ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಹೀಗಾಗಿ ಕಂಟಕ ಕಳೆಯುವಂತೆ ಪ್ರಾರ್ಥಿಸಿದ್ರು. ಕೈಮುಗಿದು ನಿಂತಿದ್ದ ದರ್ಶನ್‌ಗೆ, ಕನಕಾಂಬರ ಮಾಲೆ ಹಾಕಿ ಹಣೆಗೆ ತಿಲಕವಿಟ್ಟು, ಅರ್ಚಕರು ಆಶೀರ್ವದಿಸಿದ್ರು.

ತೀರ್ಥ ಪ್ರಸಾದ ಸ್ವೀಕರಿಸಿ ಚಾಮುಂಡೇಶ್ವರಿ ಉತ್ಸವ ಮೂರ್ತಿ ಮತ್ತು ಆಂಜನೇಯನ ಮೂರ್ತಿಗೆ ನಮಿಸೋದನ್ನ ದರ್ಶನ್ ಮರೆಯಲಿಲ್ಲ. ಕಿವಿ ಹಿಡಿದು ನಿಂತು ದರ್ಶನ್ ಪ್ರಾರ್ಥನೆ ಸಲ್ಲಿಸಿದ್ರು. ಪ್ರತಿ ವರ್ಷ ದರ್ಶನ್ ಆಷಾಢದಲ್ಲಿ ಚಾಮುಂಡೇಶ್ವರಿ ಅಮ್ಮನವರ ದರ್ಶನ ಮಾಡ್ತಾರೆ. ಆದರೆ ಕಳೆದ ಬಾರಿ ಜೈಲಿನಲ್ಲಿದ್ದ ಕಾರಣ ಚಾಮುಂಡಿ ಬೆಟ್ಟಕ್ಕೆ ಆಗಮಿಸಲು ಆಗಿರಲಿಲ್ಲ.

 

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss