ಇತ್ತೀಚಿನ ದಿನಗಳಲ್ಲಿ ಹಲವು ಯುವಕ ಯುವತಿಯರಿಗೆ ಇರುವ ಸಮಸ್ಯೆ ಅಂದ್ರೆ ಮೊಡವೆ ಮೂಡುವುದು. ನಾವು ತಿನ್ನೋ ಆಹಾರದಲ್ಲಿ ಹೆಚ್ಚಿನ ಎಣ್ಣೆ ಅಂಶವಿದ್ದರೆ, ಅಥವಾ ಧೂಳಿನಿಂದ ಕೂಡಾ ಮುಖದಲ್ಲಿ ಗುಳ್ಳೆಗಳಾಗತ್ತೆ. ಇಂಥ ಸಮಸ್ಯೆಗೆ ಪರಿಹಾರವೇನು ಅನ್ನೋದನ್ನ ನಾವು ತಿಳಿಸಿಕೊಡಲಿದ್ದೇವೆ,.

ಮನೆಯಲ್ಲಿರುವ ಸಾಮಗ್ರಿಗಳನ್ನ ಬಳಸಿಕೊಂಡು ನಾವು ನಮ್ಮ ಮುಖದ ಮೇಲಿನ ಗುಳ್ಳೆ ಕಲೆಗಳನ್ನ ನಿವಾರಿಸಿಕೊಳ್ಳಬಹುದು.ಅದರಲ್ಲೂ ತ್ವಚೆ ಸಮಸ್ಯೆಯನ್ನ ನಿವಾರಿಸುವುದಲ್ಲಿ ಪಪ್ಪಾಯಿ ಸಹಕಾರಿಯಾಗಿದೆ.
ಪಪ್ಪಾಯಿಯಲ್ಲಿರುವ ಔಷಧೀಯ ಗುಣವು ಚರ್ಮದ ಉರಿಯೂತ ಮತ್ತು ಚರ್ಮ ಕೆಂಪಾಗುವುದನ್ನ ತಡೆಯುತ್ತದೆ. ಚರ್ಮದ ಸತ್ತ ಕೋಷಗಳನ್ನ ತೆಗಿಯುವ ಪಪ್ಪಯಿಯು, ಚರ್ಮಕ್ಕೆ ಪುನಶ್ಚೇತನ ನೀಡುತ್ತದೆ.
ಪಪ್ಪಾಯಿ ಮತ್ತು ಜೇನುತುಪ್ಪದ ಪೇಸ್ಟ್ ತಯಾರಿಸಿ ಅದರಿಂದ ಮುಖಕ್ಕೆ ಮಸಾಜ್ ಮಾಡಿ, ಹದಿನೈದು ನಿಮಿಷದ ಬಳಿಕ ಉಗುರುಬೆಚ್ಚು ನೀರಿನಿಂದ ಮುಖ ತೊಳೆದುಕೊಳ್ಳಿ.
ಪಪ್ಪಾಯಿ ಪೇಸ್ಟ್ ಮತ್ತು ಸಮ ಪ್ರಮಾಣದ ನೀರು ಮತ್ತು ಆ್ಯಪಲ್ ಸೀಡರ್ ವಿನೇಗರ್ ಮಿಕ್ಸ್ ಮಾಡಿ ಪೇಸ್ಟ್ ಮಾಡಿ. ಮೊದಲು ಸ್ವಚ್ಛವಾಗಿ ಮುಖ ತೊಳೆದುಕೊಂಡು ಮುಖದ ಮೇಲಿನ ನೀರನ್ನ ಹಾಗೆ ಒಣಗಲು ಬಿಡಿ. ತದನಂತರ ಈ ಪೇಸ್ಟ್ನ್ನ ಮುಖಕ್ಕೆ ಅಪ್ಲಿ ಮಾಡಿ, 15 ನಿಮಿಷದ ಬಳಿಕ ಉಗುರು ಬೆಚ್ಚು ನೀರಿನಿಂದ ಮುಖ ತೊಳೆಯಿರಿ.
ವಾರದಲ್ಲಿ ಎರಡು ಬಾರಿ ಎರಡು ಸ್ಪೂನ್ ಪಪ್ಪಾಯಿ ಪೇಸ್ಟ್ ಮತ್ತು ಒಂದು ಸ್ಪೂನ್ ಆರೇಂಜ್ ಪೇಸ್ಟ್ ಸೇರಿಸಿ ಮುಖಕ್ಕೆ ಫೇಸ್ಪ್ಯಾಕ್ನಂತೆ ಬಳಸಿ. 20 ನಿಮಿಷದ ಬಳಿಕ ಮುಖ ತೊಳೆದುಕೊಳ್ಳಿ.
ನಾಲ್ಕು ತುಂಡು ಪಪ್ಪಯಾ ಪೇಸ್ಟ್ಗೆ ಒಂದು ಸ್ಪೂನ್ ಜೇನು ತುಪ್ಪ, ಒಂದು ಸ್ಪೂನ್ ಶ್ರೀಗಂಧದ ಪುಡಿ ಹಾಕಿ ಮಿಕ್ಸ್ ಮಾಡಿ, ಮುಖಕ್ಕೆ ಅಪ್ಲೈ ಮಾಡಿ, 15 ನಿಮಿಷದ ಬಳಿಕ ಮುಖ ತೊಳೆಯಿರಿ.
ಈಗ ನೀಡಿರುವ ಟಿಪ್ಸ್ಗಳಲ್ಲಿ ಯಾವುದಾದರೂ ಒಂದು ಟಿಪ್ಸ್ನ್ನ ಬೇಕಾದ್ರೆ ಬಳಸಬಹುದು.ಆದ್ರೆ ನಿಮಗೇನಾದ್ರೂ ಪಪ್ಪಾಯಿ ಹಣ್ಣನ್ನ ಮುಖಕ್ಕೆ ಹಚ್ಚಿದ್ರೆ ಅಲರ್ಜಿ ಎಂದಾದಲ್ಲಿ ವೈದ್ಯರ ಬಳಿ ಸಲಹೆ ಪಜೆದು ಪಪ್ಪಾಯಿ ಬಳಸಿ.





