Saturday, July 12, 2025

Latest Posts

ನಾಡಹಬ್ಬದಲ್ಲಿ ಅಧಿಕಾರಿಗಳ ದರ್ಬಾರ್:ದಸರಾ ಆಚರಣೆಯ ಸ್ವರೂಪ ಮುನ್ನವೇ ಅಧಿಕಾರಿಗಳ ಸಮಿತಿ

- Advertisement -

ಪ್ರತಿವರ್ಷ ಮೈಸೂರು ಜನರಿಂದ ಬರುವ ದೂರು ಅಂದರೆ ನಾಡಹಬ್ಬ ದಸರಾದಲ್ಲಿ ಅಧಿಕಾರಿಗಳ ದರ್ಬಾರ್‌ ಎನ್ನುವುದು. ಇಲ್ಲಿ ಜನಪ್ರತಿನಿಧಿಗಳಿಗೆ, ಸಾಹಿತಿ, ಕಲಾವಿದರು ಅಥವಾ ಸಂಘ ಸಂಸ್ಥೆಯ ಪ್ರಮುಖರಿಗೆ ಯಾವುದೇ ಅವಕಾಶ ಇರುವುದಿಲ್ಲ. ಎಲ್ಲ ಸಮಿತಿಗಳಲ್ಲಿ ಅಧಿಕಾರಿಗಳೇ ಇರುವುದರಿಂದ ಅವರೇ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇದರಿಂದಾಗಿ ಮೈಸೂರಿನ ಜನತೆ ದಸರಾದಲ್ಲಿ ಕೇವಲ ಪ್ರೇಕ್ಷಕರಾಗುತ್ತಾರೆಯೇ ಹೊರತು ನಮ್ಮ ಊರಿನ ಹಬ್ಬ ಎಂದು ಜವಾಬ್ದಾರಿ ನಿರ್ವಹಿಸುವ ಅವಕಾಶದಿಂದ ವಂಚಿತರಾಗುತ್ತಿದ್ದಾರೆ ಎನ್ನುವುದು.

ಇದನ್ನು ಮತ್ತೊಮ್ಮೆ ನಿಜ ಎಂದು ಸಾಬೀತುಪಡಿಸುವಂತೆ ಈ ಬಾರಿಯ ದಸರಾ ಹಬ್ಬದ ಆಚರಣೆಯ ಸ್ವರೂಪ ಸ್ಪಷ್ಟವಾಗುವ ಮುನ್ನವೇ ಅಧಿಕಾರಿಗಳನ್ನು ಒಳಗೊಂಡಿರುವ ದಸರಾ ಸಮಿತಿಯ ಆಯ್ಕೆಯಾಗಿದೆ. ಬಹುಶಃ ಅಚ್ಚುಕಟ್ಟು ಆಚರಣೆಗಾಗಿ ಮುಂಚಿತವಾಗಿ ಸಮಿತಿ ರಚನೆ ಮಾಡಲಾಗಿದೆ ಎಂದು ಜಿಲ್ಲಾಡಳಿತ ಹೇಳಬಹುದು. ಆದರೆ, ಜನಪ್ರತಿನಿಧಿಗಳು ಅಥವಾ ಜನರನ್ನು ಒಳಗೊಂಡ ಸಮಿತಿಯನ್ನು ಕೊನೇ ದಿನಗಳಲ್ಲಿ ಆಯ್ಕೆ ಮಾಡುವ ಸಂಪ್ರದಾಯದ ನಡುವೆ ಅಧಿಕಾರಿಗಳ ದರ್ಬಾರ್‌ ಈ ಬಾರಿ ಹಬ್ಬಕ್ಕೆ ಮುಂಚಿತವಾಗಿ ಆರಂಭವಾಗಿದೆ.

ನಾಡಹಬ್ಬದ ಕುರಿತು ಅಧಿಕಾರಿಗಳೇ ನಿರ್ಧಾರ ತೆಗೆದುಕೊಳ್ಳುವುದರಿಂದ ಆಚರಣೆಯಲ್ಲಿ ಹೊಸತನ ಇರುವುದಿಲ್ಲ. ಎಲ್ಲವೂ ಕಳೆದ ವರ್ಷದ ಕಾಪಿ ಅಂಡ್‌ ಪೇಸ್ಟ್‌ ಆಗಿರುತ್ತದೆ ಎನ್ನುವಂತಾಗುತ್ತಿದೆ. ಆದರೆ ಹೊಸ ಪ್ರಯೋಗದ ರಿಸ್ಕ್‌ ತೆಗೆದುಕೊಳ್ಳುವುದಿಲ್ಲ. ಇನ್ನು ಕೆಲವು ಪ್ರಮುಖ ಅಧಿಕಾರಿಗಳಿಗೆ ದಸರಾವೇ ಹೊಸತಾಗಿರುತ್ತದೆ. ಅವರಿಗೆ ಸಂಪ್ರದಾಯ ಹಾಗೂ ಸ್ಥಳೀಯ ಅಸ್ಮಿತೆಯ ಅರಿವು ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಹಿಂದಿನ ಕಾರ್ಯಕ್ರಮಗಳ ರೀತಿಯನ್ನೇ ಅನುಸರಿಸುತ್ತಾರೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ದಸರಾ ಉನ್ನತ ಮಟ್ಟದ ಸಮಿತಿಯ ಸಭೆ ನಡೆದಿತ್ತು. ಅಲ್ಲಿ ದಸರಾ ಅದ್ಧೂರಿಯಾಗಿ ಆಚರಿಸಿ ಎಂದಿದ್ದಾರೆ. ಆ ಸಮಯದಲ್ಲಿ ಅಧಿಕಾರಿಗಳಿಗೆ ಹೇಳಿದ ಕಿವಿಮಾತು ಮೆಚ್ಚುಗೆ ಗಳಿಸಿದೆ. ಅದ್ಧೂರಿತನ ಎಂದರೆ ದುಂದುವೆಚ್ಚ ಮಾಡುವುದಲ್ಲ ಎಂದು ಕಿವಿ ಹಿಂಡಿದ್ದಾರೆ. ಎಷ್ಟು ವೆಚ್ಚ ಮಾಡುತ್ತೇವೆ ಎನ್ನುವುದಕ್ಕಿಂತ ಗೊಂದಲ ಆಗದೆ ಅಚ್ಚುಕಟ್ಟಾಗಿ ಆಚರಣೆ ಮಾಡುವುದೇ ಅದ್ಧೂರಿತನ ಎನ್ನುವ ಅಭಿಪ್ರಾಯ ಅವರದ್ದಾಗಿತ್ತು.

- Advertisement -

Latest Posts

Don't Miss