ಇತ್ತೀಚಿನ ದಿನಗಳಲ್ಲಿ ಸಣ್ಣ ಪುಟ್ಟ ಕಾರಣಗಳಿಗೆ ಗಂಡ ಹೆಂಡತಿಯನ್ನು ಕೊಲೆ ಮಾಡುವುದು. ಅಥವಾ ಹೆಂಡತಿ ಗಂಡನನ್ನು ಕೊಲೆ ಮಾಡುವ ಪ್ರಕರಣಗಳೇ ಕೇಳಿ ಬರುತ್ತಿದೆ. ಇಂತಹದ್ದೆ ಮತ್ತೊಂದು ಘಟನೆ ನಮ್ಮ ಬೆಂಗಳೂರಲ್ಲಿ ನಡೆದಿದೆ. ಬಿಇ ವ್ಯಾಸಂಗ ಮುಗಿಸಿದ್ದ ಪದ್ಮಜಾ ಮತ್ತು ಹರೀಶ್ ಎಂಬ ದಂಪತಿ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೆಲ ತಿಂಗಳಿಂದ ಕೆಲಸ ಬಿಟ್ಟಿದ್ದ ಆರೋಪಿ ಹರೀಶ್, ಪತ್ನಿಯ ಜೊತೆ ಸಂಸಾರಿಕ ಜೀವನ ನಡೆಸದೆ ಪ್ರತಿ ದಿನ ಗಲಾಟೆ ಮಾಡ್ತಿದ್ದ.
ಹೀಗೆ ಪತ್ನಿ ಮನೆಯಿಂದ ಶಾಪಿಂಗ್ ಹೋಗಿ ಬಂದಿದ್ದ ವಿಚಾರಕ್ಕೆ ಗಲಾಟೆ ತೆಗೆದಿದ್ದಾನೆ ಪತಿ ಹರೀಶ್. ಈ ಜಗಳದಲ್ಲಿ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದೆ. ನಂತರ ಸಿಟ್ಟಿಗೆದ್ದ ಹರೀಶ್ ಪತ್ನಿ ಪದ್ಮಜಾಳನ್ನು ಕುತ್ತಿಗೆ ಹಿಸುಕಿ ಹಲ್ಲೆ ಮಾಡಿದ್ದಾನೆ ಬಳಿಕ ನೆಲಕ್ಕೆ ಬೀಳಿಸಿ ಕುತ್ತಿಗೆ ಮೇಲೆ ಕಾಲಿಟ್ಟು ತುಳಿದು ಕೊಲೆ ಮಾಡಿದ್ದಾನೆ. ನಂತರ ಅಂಬ್ಯುಲೆನ್ಸ್ ನ್ನ ಕರೆಸಿ ಮೂರನಾಲ್ಕು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆದಾಗಲೆ ಮೃತಪಟ್ಟಿರುವ ಬಗ್ಗೆ ವೈದ್ಯರು ಧೃಡಪಡಿಸುತ್ತಾರೆ.
ಇನ್ನು ಕಳೆದ 7 ನೇ ತಾರೀಖು ನ್ಯಾಚುರಲ್ ಡೆತ್ ಆಗಿದೆ ಎಂದು ಪೋಲಿಸರಿಗೆ ಕರೆ ಬರುತ್ತದೆ ನಂತರ ಪೋಲಿಸರು ಅಲ್ಲಿ ಹೋಗಿ ವಿಚಾರಿಸಿದಾಗ ಅಸಲಿ ಸತ್ಯ ಬೆಳಕಿಗೆ ಬಂದಿದೆ. ಪುಟ್ಟ ಮಗು ಅಪ್ಪ ಅಮ್ಮ ರಾತ್ರಿ ಜಗಳ ಮಾಅಡುತ್ತದ್ದರು ಎಂದು ನೀಡಿದ ಸಣ್ಣ ಸುಳಿವಿನಿಂದ ತಾಯಿಯ ಕೊಲೆ ರಹಸ್ಯ ಬಯಲಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ