Friday, July 11, 2025

Latest Posts

ಸಿಎಂ ಹೇಳಿದ್ರೂ ಡೋಂಟ್‌ ಕೇರ್!, ಟಿಟಿಡಿಯಲ್ಲೇ ಉಳಿದಿದ್ದ ಕ್ರೈಸ್ತ ಅಧಿಕಾರಿ : ಮುಂದೇನಾಯ್ತು..?

- Advertisement -

ಬೆಂಗಳೂರು : ಈ ಹಿಂದೆ ತಿರುಪತಿ ತಿರುಮಲ ದೇವಸ್ಥಾನದಲ್ಲಿನ ಹಿಂದುಯೇತರ ಉದ್ಯೋಗಿಗಳಿಗೆ ಕೊಕ್‌ ನೀಡಿದ್ದ ಟಿಟಿಡಿ ಆಡಳಿತ ಮಂಡಳಿಯು, ಇದೀಗ ಮತ್ತೊಬ್ಬ ಸಿಬ್ಬಂದಿಗೆ ಶಾಕ್‌ ನೀಡಿದೆ. ಟಿಟಿಡಿ ಆಡಳಿತ ಮಂಡಳಿಯ ಅಡಿ ದೇವಸ್ಥಾನದಲ್ಲಿ ಯಾರೇ ಕೆಲಸ ಮಾಡಬೇಕಾದರೆ ಅವರು ಹಿಂದೂ ಧರ್ಮವನ್ನು ಪಾಲಿಸಬೇಕಾಗುತ್ತದೆ. ಟಿಟಿಡಿಯ ನಿಯಮಗಳಿಗೆ ನಿಷ್ಠರಾಗಿರಬೇಕು.

ಹೀಗೆಯೇ ಟಿಟಿಡಿಯಲ್ಲಿ ಉದ್ಯೋಗಕ್ಕೆ ಸೇರುವಾಗ ಹಿಂದೂ ಧರ್ಮವನ್ನು ಪಾಲಿಸುತ್ತೇನೆ ಎಂದು ಹೇಳಿದ್ದ ರಾಜಶೇಖರ್ ಬಾಬು ಎನ್ನುವವರು ಭರವಸೆ ನೀಡಿದ್ದರು. ಆದರೆ, ಅವರು ಕ್ರಿಶ್ಚಿಯನ್ನರಾಗಿರುವ ಕಾರಣಕ್ಕೆ ಪ್ರತಿ ಭಾನುವಾರ ಚರ್ಚ್​ಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಿದ್ದರು. ಈ ವಿಚಾರ ಟಿಟಿಡಿಯ ಗಮನಕ್ಕೆ ಬಂದ ಇದನ್ನು ಗಂಭೀರವಾಗಿ ಪಡೆದ ಆಡಳಿತ ಮಂಡಳಿಯು ಅವರನ್ನು ಸೇವೆಯಿಂದ ಅಮಾನತು ಮಾಡಿದೆ.

ಇನ್ನೂ ತಿರುಪತಿ ತಿರುಮಲ ದೇವಸ್ಥಾನದಲ್ಲಿ ರಾಜಶೇಖರ್‌ ಬಾಬು ಅಸಿಸ್ಟೆಂಟ್‌ ಎಕ್ಸಿಕ್ಯೂಟಿವ್‌ ಆಫೀಸರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಒಪ್ಪಂದದಂತೆ ಹಿಂದೂ ಧರ್ಮ ಪಾಲಿಸದೆ, ಕ್ರಿಶ್ಚಿಯನ್‌ ಧರ್ಮದ ಪಾಲನೆ ಮಾಡುತ್ತಿದ್ದ ಅಧಿಕಾರಿಯ ನಡೆಗೆ ಟಿಟಿಡಿಯು ಆಕ್ರೋಶ ವ್ಯಕ್ತಪಡಿಸಿತ್ತು.

ಈ ಅಧಿಕಾರಿಯು ಪ್ರತಿ ಭಾನುವಾರ ತಿರುಪತಿ ಜಿಲ್ಲೆಯ ತನ್ನ ಹೋಮ್ ಟೌನ್ ಪುತ್ತೂರುನ ಚರ್ಚ್​ಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಆದರೆ ಇದು ಟಿಟಿಡಿ ನಿಯಮಗಳ ಉಲಂಘನೆಯಾಗಿದೆ. ಅಧಿಕಾರಿ ರಾಜಶೇಖರ್ ಬಾಬು ಆಡಳಿತ ಮಂಡಳಿಯ ಉದ್ಯೋಗಿಯಾಗಿ ಕೋಡ್ ಆಫ್ ಕಂಡಕ್ಟ್ ಅನ್ನು ಫಾಲೋ ಮಾಡುತ್ತಿಲ್ಲ ಎಂದು ಟಿಟಿಡಿಯು ಆರೋಪಿಸಿದೆ.

ಇನ್ನೂ ರಾಜಶೇಖರ್ ಬಾಬು ತಮಗೆ ಇರುವ ಹೊಣೆಗಾರಿಕೆಯನ್ನು ನಿಭಾಯಿಸದೆ ಬೇಜವಾಬ್ದಾರಿಯಾಗಿ ನಡೆದುಕೊಂಡಿದ್ದಾರೆ. ಒಂದು ಹಿಂದೂ ಧಾರ್ಮಿಕ ಸಂಘಟನೆಯ ಜೊತೆ ಗುರುತಿಸಿಕೊಂಡು, ಒಬ್ಬ ಉದ್ಯೋಗಿಯಾಗಿ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂದು ಟಿಟಿಡಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಮುಖವಾಗಿ ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಳಿಯ ಉದ್ಯೋಗಿಯಾಗಿ ಕೆಲಸಕ್ಕೆ ಸೇರುವ ವೇಳೆ ಪ್ರಮಾಣವಚನ ಸ್ವೀಕರಿಸಬೇಕಾಗುತ್ತದೆ. ಅದರಲ್ಲೂ ಹಿಂದೂ ಧರ್ಮವನ್ನು ಪಾಲಿಸುತ್ತೇವೆ, ಹಿಂದೂ ಧರ್ಮವನ್ನು ಅನುಸರಿಸುತ್ತೇವೆ ಹಾಗೂ ಸಂಪ್ರದಾಯ ಪಾಲಿಸುತ್ತೇವೆ ಎಂಬ ಘೋಷಣೆಗೆ ಸಹಿ ಮಾಡಿರಬೇಕು. ಟಿಟಿಡಿ ವಿಜಿಲೆನ್ಸ್ ವಿಭಾಗವು, ರಾಜಶೇಖರ್ ಬಾಬು ಬಗ್ಗೆ ತನಿಖೆ ನಡೆಸಿ ಸಾಕ್ಷ್ಯಗಳನ್ನು ಕಲೆ ಹಾಕಿ ಟಿಟಿಡಿಗೆ ವರದಿ ಸಲ್ಲಿಸಿತ್ತು. ಇದರ ಮೇಲೆಯೇ ರಾಜಶೇಖರ್ ಬಾಬು ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

ಇನ್ನೂ 2024ರ ನವಂಬರ್ 18 ರಂದು ಟಿಟಿಡಿಯ ಬೋರ್ಡ್ ಸಭೆಯಲ್ಲಿ ಹಿಂದೂಯೇತರ ಉದ್ಯೋಗಿಗಳನ್ನು ತಿರುಮಲ ದೇವಸ್ಥಾನದ ಸೇವೆಯಿಂದ ತೆಗೆದು ಹಾಕಿತ್ತು. ಅಲ್ಲದೆ ಅವರನ್ನು ಸರ್ಕಾರದ ವಿವಿಧ ಇಲಾಖೆಗಳಿಗೆ ವರ್ಗಾವಣೆ ಮಾಡಲು ನಿರ್ಧಾರ ತೀರ್ಮಾನ ಮಾಡಿತ್ತು. ಕಳೆದ 2018ರ ವರದಿಯ ಪ್ರಕಾರ, ಟಿಟಿಡಿಯಲ್ಲಿ ಹಿಂದೂ ಧರ್ಮವನ್ನು ಬಿಟ್ಟು ಬೇರೆ ಧರ್ಮದ 44 ಮಂದಿ ಉದ್ಯೋಗಿಗಳು ಕೆಲಸಕ್ಕೆ ಸೇರಿದ್ದರು. ಬೇರೆ ಧರ್ಮದ ಉದ್ಯೋಗಿಗಳನ್ನು ಸರ್ಕಾರದ ವಿವಿಧ ಇಲಾಖೆಗೆ ಕಳಿಸಲು ಕಳೆದ ವರ್ಷವೇ ಟಿಟಿಡಿ ತೀರ್ಮಾನ ಪಡೆದಿತ್ತು.

ಇಷ್ಟೇ ಅಲ್ಲದೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೂಡ ಬೇರೆ ಧರ್ಮದ ಉದ್ಯೋಗಿಗಳನ್ನು ಟಿಟಿಡಿಯಿಂದ ತೆಗೆಯುವಂತೆ ಸೂಚನೆ ನೀಡಿದ್ದರು. ಹೀಗಿದ್ದರೂ ಸಹ ರಾಜಶೇಖರ್ ಬಾಬು ಟಿಟಿಡಿಯಿಂದ ಹೊರ ಹೋಗಿರಲಿಲ್ಲ. ಬದಲಿಗೆ ಕ್ರಿಶ್ಚಿಯನ್ ಧರ್ಮ ಪಾಲಿಸುತ್ತಿರುವುದು ಬಹಿರಂಗವಾಗಿದೆ. ಹೀಗಾಗಿ ಟಿಟಿಡಿಯು ಈ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ.

- Advertisement -

Latest Posts

Don't Miss