Saturday, July 12, 2025

Latest Posts

ಭಾರತಕ್ಕೆ ಟೆಸ್ಲಾ ಎಂಟ್ರಿ : ಮುಂದಿನ ತಿಂಗಳಿನಿಂದಲೇ ಡೆಲಿವರಿ ಶುರು

- Advertisement -

ಎಲಾನ್ ಮಸ್ಕ್ ಅವರ ಟೆಸ್ಲಾ ಭಾರತದಲ್ಲಿ ತನ್ನ ಮೊದಲ ಸೆಂಟರ್‌ ಪ್ರಾರಂಭಿಸಲು ಸಜ್ಜಾಗಿದೆ. ಜುಲೈ 15ರಂದು ಮುಂಬೈನಲ್ಲಿ ಭಾರತದ ಫಸ್ಟ್ ಎಕ್ಸ್ಪೀರಿಯೆನ್ಸ್ ಸೆಂಟರ್ ಆರಂಭಿಸಲಿದೆ. ಟೆಸ್ಲಾ ಕಂಪನಿಯು ವಿಶ್ವದ ಮೂರನೇ ದೊಡ್ಡ ಅಟೋಮೊಬೈಲ್‌ ಮಾರ್ಕೇಟ್ ನಲ್ಲಿನ ಡಿಮ್ಯಾಂಡ್‌ ಅನ್ನು ಬಳಸಿಕೊಂಡು ಬೇರೆಡೆ ಕುಸಿಯುತ್ತಿರುವ ಸೇಲ್ಸ್‌ ಅನ್ನು ಸರಿದೂಗಿಸಲು ಪ್ರಯತ್ನಿಸುತ್ತಿದೆ.

ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಟೆಸ್ಲಾ ತನ್ನ ಸೆಂಟರ್‌ ತೆರೆಯುತ್ತಿದೆ. ಈ ಹಿಂದೆ ಮಾರ್ಚ್ ಪ್ರಾರಂಭದಲ್ಲಿ ಭಾರತದಲ್ಲಿ ತನ್ನ ಮಾರಾಟವನ್ನು ಪ್ರಾರಂಭಿಸಲು ಟೆಸ್ಲಾ ಮುಂಬೈನಲ್ಲಿ ತನ್ನ ಮೊದಲ ಶೋ ರೂಂ ತೆರೆಯಲು ಗುತ್ತಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಚೀನಾದ ಶಾಂಘೈನಲ್ಲಿರುವ ಟೆಸ್ಲಾ ಕಾರ್ಖಾನೆಯಿಂದ 5 ಮಾಡೆಲ್ ವೈ ವಾಹನಗಳು ಈಗಾಗಲೇ ಮುಂಬೈಗೆ ಬಂದಿವೆ. ಮಾಡೆಲ್ ವೈ ವಿಶ್ವದ ಅತಿ ಹೆಚ್ಚು ಮಾರಾಟವಾಗುತ್ತಿರುವ ಎಲೆಕ್ಟ್ರಿಕ್ ಕಾರ್‌ ಆಗಿದೆ. ಈ ಕಾರುಗಳ ಬೆಲೆ 27 ಲಕ್ಷ ರೂಪಾಯಿ ಎಂದು ಘೋಷಿಸಲಾಗಿದ್ದು 21 ಲಕ್ಷಕ್ಕಿಂತ ಹೆಚ್ಚಿನ ಆಮದು ಸುಂಕವನ್ನು ವಿಧಿಸಲಾಗಿತ್ತು.

ಟೆಸ್ಲಾ, ಭಾರತದಲ್ಲಿ ತನ್ನ ಕಾರ್ಯ ಪ್ರಾರಂಭಿಸಿದ್ದರೂ, ಎಲೆಕ್ಟ್ರಿಕ್ ವಾಹನ ಕಂಪನಿಯು ಭಾರತದಲ್ಲಿ ಅದರ ಭಾಗಗಳನ್ನು ತಯಾರಿಸಲು ಆಸಕ್ತಿ ಹೊಂದಿಲ್ಲ ಎಂದು ವರದಿಯಾಗಿದೆ. ಇನ್ನು ಈ ಬಗ್ಗೆ ಕಳೆದ ತಿಂಗಳು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್‌ ಡಿ ಕುಮಾರಸ್ವಾಮಿ, ಟೆಸ್ಲಾ ದೇಶದಲ್ಲಿ ತನ್ನ ಶೋ ರೂಂಗಳನ್ನು ವಿಸ್ತರಿಸಲು ಮಾತ್ರ ಬಯಸುತ್ತದೆ ಎಂದು ಕೂಡ ಹೇಳಿದ್ದರು. ಅದ್ಯ ಮಂಬೈ ಶೋರೂಮಂ ಕಾರ್ಯಾಚರಣೆಯ ಮೊದಲ ವಾರವು ವಿಐಪಿಗಳು ಮತ್ತು ಬಿಸಿನಿಸ್‌ ಪಾರ್ಟನರ್ಸ್ ಮೇಲೆ ಫೋಕಸ್‌ ಮಾಡಲಿದೆ ಮತ್ತು ಸಾಮಾನ್ಯ ಜನರಿಗೆ ಮುಂದಿನ ವಾರ ಆಕ್ಸೆಸ್‌ ನೀಡಲಾಗುವುದು ಎಂದುಮಾಹಿತಿ ನೀಡಿದೆ.

ಭಾರತೀಯರ ಟೆಸ್ಲಾ ಕಾಯುವಿಕೆಗೆ ಬ್ರೇಕ್‌ ಬಿದ್ದಿದ್ದು ಮುಂದಿನ ತಿಂಗಳಿನಿಂದಲೇ ಡೆಲಿವರಿ ಶುರು ಮಾಡಲಿದೆ. ಸೋ ಬೇಗ ಬೇಗ ಬುಕ್‌ ಮಾಡಿ, ಮನೆಗೆ ಟೆಸ್ಲಾನ ವೆಲ್ಕಮ್‌ ಮಾಡಿಕೊಳ್ಳಿ.

 

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss