ಚೆಲುವ ನಾರಾಯಣನ ಕಲ್ಯಾಣೋತ್ಸವ : ಮೇಲುಕೋಟೆ ಕೃಷ್ಣರಾಜಮುಡಿ ಬ್ರಹ್ಮೋತ್ಸವಕ್ಕೆ ಚಾಲನೆ

ಮೇಲುಕೋಟೆ. ಈ ಸ್ಥಳ ಅದೆಷ್ಟು ಜನಪ್ರಿಯ ಅಂದರೆ ಇದರ ಬಗ್ಗೆ ಲೆಕ್ಕವಿಲ್ಲದಷ್ಟು ಹಾಡುಗಳು ಸಿನಿಮಾಗಳಲ್ಲಿ ಮೂಡಿಬಂದಿದೆ. ಹಾಡುಗಳಷ್ಟೇ ಅಲ್ಲ, ಹಾಡಿನ ಶೂಟಿಂಗ್ ಸಹ ಇಲ್ಲಿ ನಡೆದಿದೆ. ಕೇವಲ ಕನ್ನಡ, ದಕ್ಷಿಣ ಭಾರತದ ಸಿನಿಮಾಗಳು ಮಾತ್ರವಲ್ಲದೆ, ಬಾಲಿವುಡ್ ಮಂದಿಗೂ ಈ ಸ್ಥಳ ಭಾರೀ ಫೇವರಿಟ್. ನೂರಾರು ಭಕ್ತರು ಪ್ರತಿದಿನ ಸ್ವಾಮಿ ಚೆಲುವ ನಾರಾಯಣ ಸ್ವಾಮಿಯ ದರ್ಶನಕ್ಕೆ ಬರುತ್ತಾರೆ.

ಇನ್ನು ಆಷಾಢ ಮಾಸದ ಕೃಷ್ಣರಾಜಮುಡಿ ಬ್ರಹ್ಮೋತ್ಸವದ ಹಿನ್ನಲೆ ಶನಿವಾರ ಚೆಲುವ ನಾರಾಯಣ ಸ್ವಾಮಿಯ ಕಲ್ಯಾಣೋತ್ಸವ ದೇವಾಲಯದ ಸಂಪ್ರದಾಯದಂತೆ ಜರುಗಿತು. ಮುಮ್ಮಡಿ ಕೃಷ್ಣರಾಜ ಒಡೆಯರ್ ವರ್ಧಂತಿಯ ಅಂಗವಾಗಿ ನಡೆಸುವ ಕೃಷ್ಣರಾಜಮುಡಿ ಬ್ರಹ್ಮೋತ್ಸವಕ್ಕೆ ಶುಕ್ರವಾರ ದೊಡ್ಡ ಉಯ್ಯಾಲೋತ್ಸವಕ್ಕೆ ಅಂಕುರಾರ್ಪಣೆಯ ಚಾಲನೆ ದೊರೆತ್ತಿದ್ದು. ಶನಿವಾರ ಮುಮ್ಮಡಿ ಶ್ರೀ ಕೃಷ್ಣರಾಜ ಒಡೆಯರ್ ಜನ್ಮ ವರ್ಧಂತಿ ಹಿನ್ನಲೆ ತಿರುನಾರಾಯಣ ಸ್ವಾಮಿಗೆ ಮಹಾಭಿಷೇಕ ನಡೆಯಿತು. ನಂತರ ರಾತ್ರಿ ಅಮ್ಮನವರ ಸನ್ನಿಧಿಯಲ್ಲಿ. ಕಲ್ಯಾಣೋತ್ಸವ ವೈಭವದಿಂದ ಜರುಗಿತು.

ಜು.16ರಂದು ವಜ್ರಖಚಿತ ಕೃಷ್ಣರಾಜಮುಡಿ ಕಿರೀಟಧಾರಣೆ ಮಹೋತ್ಸವ ನಡೆಯಲಿದೆ. ಜು. 18 ರಂದು ಗಜೇಂದ್ರ ಮೋಕ್ಷ, ಜು. 21 ಕಲ್ಯಾಣಿಯಲ್ಲಿ ತೀರ್ಥಸ್ನಾನ ಅವಭೃತ ನಡೆಯಲಿದೆ. ಮಹಾರಾಜ ವಿಗ್ರಹಗಳಿಗೆ ಅಭಿಷೇಕ. ದೇವಾಲಯ ಜೀರ್ಣೋಧ್ಧಾರ ಮಾಡಿ ದೇವಾಲಯದ ಅಭಿವೃದ್ಧಿಗೆ ಶ್ರಮಿಸಿದ ಮಹಾರಾಜರ ವಿಗ್ರಹಗಳಿಗೆ ಎಂದಿನಂತೆ ದೇವಾಲಯದಲ್ಲಿ ಪೂಜಾ ಕೈಂಕರ್ಯ ನಡೆಯಿತು. ಕೃಷ್ಣರಾಜಮುಡಿ ಹಿನ್ನಲೆ ದೇವಾಲಯಕ್ಕೆ ಸರಳ ದೀಪಾಲಂಕರ ವ್ಯವಸ್ಥೆ ಕಲ್ಪಿಸಲಾಗಿತು. ಇನ್ನು ದೇವಾಲಯಕ್ಕೆ ಕೃಷಿ ಸಚಿವ ಎನ್ ಚೆಲುವರಾಯ ಸ್ವಾಮಿ ಪತ್ನಿ ಧನಲಕ್ಷ್ಮೀ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

About The Author