Tuesday, July 15, 2025

Latest Posts

BREAKING NEWS: ಹಿರಿಯ ನಟಿ ಬಿ. ಸರೋಜಾದೇವಿ ಇನ್ನಿಲ್ಲ

- Advertisement -

ಕನ್ನಡದ ಹಿರಿಯ ನಟಿ ಬಿ. ಸರೋಜಾ ದೇವಿ (87) ಇನ್ನಿಲ್ಲ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ನಿಧನರಾಗಿದ್ದಾರೆ.

ಸರೋಜಾ ದೇವಿಯವರು 1938ರ ಜನವರಿ 7ರಂದು ಬೆಂಗಳೂರಲ್ಲಿ ಹುಟ್ಟಿದ್ದರು. 60 ವರ್ಷಗಳ ಕಾಲ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ. ಅಭಿನಯ ಸರಸ್ವತಿ ಎಂದೇ ಖ್ಯಾತಿ ಪಡೆದಿದ್ದ ಸರೋಜಾ ದೇವಿ ಅವರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಕನ್ನಡದಲ್ಲಿ ಡಾ.ರಾಜ್ ಕುಮಾರ್‌, ತಮಿಳಿನಲ್ಲಿ ಶಿವಾಜಿ ಗಣೆೇಶನ್, ತೆಲುಗಿನಲ್ಲಿ ಎನ್‌ಟಿಆರ್‌ ಜೊತೆಗೂ ಅಭಿನಯಿಸಿದ ಅಭಿನಯ ಸರಸ್ವತಿ ಇಂದು ಇಹಲೋಕವನ್ನು ತ್ಯಜಿಸಿದ್ದಾರೆ.

- Advertisement -

Latest Posts

Don't Miss