Thursday, October 23, 2025

Latest Posts

ಎಂದೂ ಮರೆಯದ ಡಾ. ರಾಜ್‌ – ಬಿ. ಸರೋಜಾ ದೇವಿ ಜೋಡಿ

- Advertisement -

ಹಿರಿಯ ನಟಿ ಸರೋಜಾ ದೇವಿ ಕನ್ನಡದ ಮೊದಲ ಮಹಿಳಾ ಸೂಪರ್ ಸ್ಟಾರ್. ಬಹುಭಾಷಾ ನಟಿ ಸರೋಜಾ ದೇವಿ ಮತ್ತು ಡಾ.ರಾಜ್ ಕುಮಾರ್ ಜೋಡಿ, ಕನ್ನಡ ಚಿತ್ರರಂಗದಲ್ಲಿ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಈ ಜೋಡಿ ಅಭಿನಯದ ಹಲವು ಸಿನಿಮಾಗಳು ಸೂಪರ್ ಹಿಟ್ ಆಗಿವೆ.

1960ರಲ್ಲಿ ರಿಲೀಸ್ ಆದ ಭಕ್ತ ಕನಕದಾಸ ಸಿನಿಮಾದಲ್ಲಿ, ಮೊದಲ ಬಾರಿಗೆ ಡಾ. ರಾಜ್, ಸರೋಜಾ ದೇವಿ ಒಟ್ಟಿಗೆ ಅಭಿನಯಿಸಿದ್ರು. 1971ರಲ್ಲಿ ಪಾಪ ಪುಣ್ಯ ಸಿನಿಮಾ, ನ್ಯಾಯವೇ ದೇವರು ಸಿನಿಮಾಗಳಲ್ಲಿ ಅಭಿನಯಿಸಿ ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ರು.

1974ರಲ್ಲಿ ಬಿಡುಗಡೆಯಾದ ಶ್ರೀನಿವಾಸ ಕಲ್ಯಾಣದಲ್ಲಿ ರಾಜ್-ಸರೋಜಾ ಮನೋಜ್ಞ ಅಭಿನಯ ಎಲ್ಲರ ಮನಸೂರೆಗೊಂಡಿತ್ತು. ಸಾಕ್ಷಾತ್ ಶ್ರೀನಿವಾಸ-ಲಕ್ಷ್ಮೀ ದೇವರಂತೆ ತೆರೆ ಮೇಲೆ ಮೋಡಿ ಮಾಡಿದ್ರು. 1976 ಕಥಾ ಸಂಗಮ ಚಿತ್ರದಲ್ಲಿನ ನಟನೆ ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು.

ಪ್ರಮುಖವಾಗಿ 1977ರಲ್ಲಿ ತೆರೆಕಂಡ ಭಾಗ್ಯವಂತರು, ಬಬ್ರುವಾಹನ ಸಿನಿಮಾಗಳು, ರಾಜ್-ಸರೋಜಾ ಜೋಡಿಯನ್ನ ಎಂದಿಗೂ ಮರೆಯಲು ಸಾಧ್ಯವಿಲ್ಲ. ಬಬ್ರುವಾಹನ ಸಿನಿಮಾದಲ್ಲಿ ಡಾ. ರಾಜ್ ಅರ್ಜುನ ಮತ್ತು ಬಬ್ರುವಾಹನ ದ್ವಿಪಾತ್ರ ಮಾಡಿದ್ರು. ಬಿ. ಸರೋಜಾದೇವಿ ಅರ್ಜುನನಿಗೆ ಜೊತೆಯಾಗಿ ಉಲುಚಿ ಪಾತ್ರ ಮಾಡುವುದರ ಜೊತೆಗೆ ಬಬ್ರುವಾಹನನ ತಾಯಿಯಾಗಿ ಮಿಂಚಿದ್ರು. ಪತ್ನಿಯಾಗಿ, ತಾಯಿಯಾಗಿ ರಾಜ್​​ ಕುಮಾರ್ ಅವರ ಜೊತೆಯಾಗಿ ನಟಿಸಿದ್ರು.

ಇದೇ ವರ್ಷ ತೆರೆಕಂಡ ಭಾಗ್ಯವಂತರು ಸಿನಿಮಾದಲ್ಲಿ, ಸರೋಜಾದೇವಿ-ಅಣ್ಣಾವ್ರ ಲೀಲಾಜಾಲ ಅಭಿನಯ, ಇಡೀ ಕರುನಾಡನ್ನೇ ಮೂಕವಿಸ್ಮಿತರನ್ನಾಗಿಸಿತ್ತು. ಮಕ್ಕಳ ಧೋರಣೆಗೆ ಒಳಗಾದ ಪೋಷಕರ ಪಾತ್ರದಲ್ಲಿ ಈ ಜೋಡಿ ಅಭಿನಯಿಸಿತ್ತು.

1984ರಲ್ಲಿ ತೆರೆ ಕಂಡ ಯಾರಿವನು ಸಿನಿಮಾದಲ್ಲಿ, ರಾಜ್-ಸರೋಜಾ ಕೊನೆ ಬಾರಿಗೆ ಜೊತೆಯಾಗಿದ್ರು. ಇಲ್ಲಿ ಅಣ್ಣಾವ್ರ ಜೋಡಿಯಾಗದೇ ಸಹ ಕಲಾವಿದೆಯಾಗಿ ನಟಿಸಿದ್ದು ವಿಶೇಷ. ಒಟ್ನಲ್ಲಿ ಡಾ. ರಾಜ್ ಕುಮಾರ್​ ಗೆ ಪತ್ನಿಯಾಗಿ, ತಾಯಿಯಾಗಿ ಜೊತೆಯಾಗಿದ್ದಲ್ಲದೇ ಸಹ ನಟಿಯಾಗಿಯೂ ಅಭಿನಯಿಸಿದ್ದು ವಿಶೇಷ. ಪುನೀತ್ ರಾಜ್‌ಕುಮಾರ್ ಅವರ ನಟಸಾರ್ವಭೌಮ ಸರೋಜಾ ದೇವಿ ಅಭಿನಯಿಸಿದ ಕಟ್ಟಕಡೆಯ ಸಿನಿಮಾ.

- Advertisement -

Latest Posts

Don't Miss