Tuesday, July 15, 2025

Latest Posts

ಸೂಪರ್‌ ಸ್ಟಾರ್‌ಗಳ ಲೇಡಿ ಸೂಪರ್ ಸ್ಟಾರ್ ಸರೋಜಾ ದೇವಿ

- Advertisement -

ಕನ್ನಡ ಬೆಳ್ಳಿತೆರೆಯಲ್ಲಿ ಬೆಳಗಿದ ಅಭಿನೇತ್ರಿ ಬಿ. ಸರೋಜಾ ದೇವಿ ಅಂದಾಕ್ಷಣ ನಮ್ಮೆಲ್ಲರಿಗೂ ನೆನಪಾಗೊದೇ ಡಾ. ರಾಜ್‌ ಕುಮಾರ್‌ ಮತ್ತು ಅವರ ಜೋಡಿ. ಅದೆಷ್ಟೋ ಸಿನಿಮಾಗಳಲ್ಲಿ ಈ ಜೋಡಿ ನಟನೆ ಮಾಡಿ ಕನ್ನಡ ಚಿತ್ರಂಗದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ್ದರು. ಬಹುಶಹಃ 90ರ ದಶಕದಲ್ಲಿ ಎಲ್ಲರ ಫೇವರೆಟ್‌ ಜೋಡಿ ಇವರಾಗಿದ್ದರು ಎಂದರು ತಪ್ಪಾಗೋದಿಲ್ಲ.

ಎಲ್ಲಾ ಸೂಪರ್‌ ಸ್ಟಾರ್‌ಗಳ ಜೊತೆ ನಟಿಸಿದ ಲೇಡಿ ಸೂಪರ್‌ ಸ್ಟಾರ್ ಸರೋಜಾ ದೇವಿಯವರು. ತಮಿಳಿನಲ್ಲಿ ಕನ್ನಡದ ಗಿಳಿ ಎಂದೇ ಖ್ಯಾತಿ ಪಡೆದಿದ್ದರು. ತಮಿಳಿನ ಎಂಜಿಆರ್, ಶಿವಾಜಿ ಗಣೇಶನ್‌, ಜೆಮಿನಿ ಗಣೇಶನ್‌ ಮತ್ತು ಹಿಂದಿಯ ದಿಲೀಪ್‌ ಕುಮಾರ್‌, ರಾಜೇಂದ್ರ ಕುಮಾರ್‌, ಸುನಿಲ್‌ ದತ್ತ್, ಶಮ್ಮಿ ಕಪೂರ್‌ ಹಾಗೂ ತೆಲುಗವಿನ ಎನ್ ಟಿಆರ್‌. ಹೀಗೆ ದೊಡ್ಡ ದೊಡ್ಡ ನಾಯಕರೊಂದಿಗೆ ಅಭಿನಯ ಮಾಡಿ ಸೈ ಎನಿಸಿಕೊಂಡಿದ್ದ ಅಭಿನಯ ಸರಸ್ವತಿ ಎಲ್ಲರ ಅಚ್ಚುಮಚ್ಚಿನ ನಾಯಕಿಯಾಗಿದ್ದರು.

ಸರೋಜಾದೇವಿ ಮತ್ತು ರಾಜ್‌ ಕುಮಾರ್‌ ಜೋಡಿ ಎಂದರೆ ಫಸ್ಟ್‌ ನಮಗೆ ನೆನಪಾಗೋದೆ ಬಬ್ರುವಾಹನ. ಉಲೂಚಿ ಮತ್ತು ಬಬ್ರುವಾಹನ ಇಬ್ಬರೂ ಮಹಾಭಾರತದ ಪಾತ್ರಗಳು. ಬಬ್ರುವಾಹನ, ಅರ್ಜುನ ಮತ್ತು ಚಿತ್ರಾಂಗದೆಯ ಮಗನಾಗಿರುತ್ತಾನೆ. ಈ ಉಲೂಚಿ ಅರ್ಜುನನ ಹೆಂಡತಿಯರಲ್ಲಿ ಒಬ್ಬಳಾಗಿರುತ್ತಾಳೆ ಮತ್ತು ಪಾತಾಳಲೋಕದ ನಾಗಕನ್ಯೆ ಕೂಡ ಹೌದು. ಬಬ್ರುವಾಹನನು ತನ್ನ ತಂದೆಯಾದ ಅರ್ಜುನನೊಂದಿಗೆ ಯುದ್ಧ ಮಾಡಿ ಅವನನ್ನು ಕೊಂದಾಗ, ಉಲೂಚಿ ನಾಗಮಣಿಯ ಸಹಾಯದಿಂದ ಅರ್ಜುನನನ್ನು ಬದುಕಿಸುತ್ತಾಳೆ. ಇಷ್ಟು ತೂಕವಿರುವ ಈ ಪಾತ್ರಗಳನ್ನು ಈ ಜೋಡಿ ಬಿಟ್ಟರೆ ಮತ್ಯಾರು ಮಾಡಲು ಅಸಾಧ್ಯವೆಂಬಂತೆ ತೊರಿಸಿಕೊಟ್ಟವರು.

ಈಗೇ ಸೂಪರ್ ಸ್ಟಾರ್ಗಳ ಜೊತೆ ನಟನೆ ಮಾಡಿದ್ದ ಸರೋಜಾ ದೇವವಿಯವರಿಗೆ 1969ರಲ್ಲಿ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮ ಶ್ರೀ ಮತ್ತು 1992ರಲ್ಲಿ ಭಾರತ ಸರ್ಕಾರದಿಂದ ಪದ್ಮ ಭೂಷಣ, ಹಾಗೆಯೇ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಮತ್ತು ತಮಿಳುನಾಡಿನ ಕಲೈಮಾಮಣಿ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss