Tuesday, July 15, 2025

Latest Posts

ನಾನೇ ನಂಬರ್ 1 ಮಂತ್ರಿ , ಸುರ್ಜೇವಾಲಾ ಸುಳ್ಳು ಹೇಳಲ್ಲ : ಉಸ್ತುವಾರಿ ಹೊಗಳಿಕೆಗೆ ಸಚಿವ ಜಮೀರ್ ಫುಲ್‌ ಖುಷ್!‌

- Advertisement -

ಬೆಂಗಳೂರು : ಕಾಂಗ್ರೆಸ್‌ ಶಾಸಕರಿಂದ ದೂರನ್ನು ಆಲಿಸಿದ್ದ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ರಾಜ್ಯಕ್ಕೆ ಆಗಮಿಸಿದ್ದಾರೆ. ಶಾಸಕರ ಜೊತೆ ಒನ್‌ ಟು ಒನ್‌ ಸಭೆ ನಡೆಸಿದ್ದ ಅವರು ಸಚಿವರ ವಿರುದ್ಧ ಮಾಹಿತಿ ಪಡೆದುಕೊಂಡಿದ್ದರು. ಆದರೆ ಇದೀಗ ಕೆಲ ಸಚಿವರೊಂದಿಗೆ ಪ್ರತ್ಯೇಕ ಸಭೆ ನಡೆಸಿ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಇನ್ನೂ ಈ ನಡುವೆಯೇ ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರನ್ನು ಉಸ್ತುವಾರಿ ಹಾಡಿ ಹೊಗಳಿದ್ದಾರೆ. ಈ ಕುರಿತು ಖುದ್ದು ಮಾಹಿತಿ ನೀಡಿರುವ ಸಚಿವ ಜಮೀರ್‌, ನಾನೇ ನಂಬರ್ 1 ಮಂತ್ರಿ. ಒಂದು ವೇಳೆ ಸಚಿವರಿಗೆ ಪ್ರಶಸ್ತಿ ಕೊಡುವುದಾದರೆ ಅದು ನನಗೆ ಸಿಗುವುದು ಪಕ್ಕಾ!. ರಾಜ್ಯದಲ್ಲಿ ನಂಬರ್ ಒನ್ ಮಿನಿಸ್ಟರ್ ನೀವೇ ಎಂದು ಸುರ್ಜೇವಾಲಾ ನನಗೆ ಹೇಳಿದ್ರು. ಸಚಿವರಲ್ಲಿ ಯಾರಿಗಾದ್ರು ಅವಾರ್ಡ್ ಕೊಟ್ರೆ ಅದು ನನಗೆ ಸಲ್ಲುತ್ತೆ ಅಂತಾ ಸುರ್ಜೇವಾಲಾ ತಿಳಿಸಿದ್ದಾರೆ. ಅವರ ಮಾತಿನಿಂದ ನನಗೆ ತುಂಬಾ ಖುಷಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಸುರ್ಜೇವಾಲಾ ಅವರು 130ಕ್ಕೂ ಹೆಚ್ಚು ಶಾಸಕರ ಜೊತೆ ಚರ್ಚೆ ನಡೆಸಿ ವಿವರ ಪಡೆದುಕೊಂಡಿದ್ದಾರೆ. ಶಾಸಕರು ಮನೆಗಳ ಹಂಚಿಕೆ ಹಾಗೂ ಅಲ್ಪಸಂಖ್ಯಾತ ಕಾಲೋನಿಗಳ ಬೇಡಿಕೆ ಬಗ್ಗೆ ಸುರ್ಜೇವಾಲ್ ಅವರ ಹತ್ತಿರ ಮನವಿ ನೀಡಿದ್ದರು. ಆ ಎಲ್ಲ ಮನವಿಗಳನ್ನು, ಬೇಡಿಕೆಗಳ ಪಟ್ಟಿಯನ್ನು ಸುರ್ಜೇವಾಲಾ ಅವರು ನನಗೆ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಸುರ್ಜೇವಾಲಾ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಯಾವುದೇ ಶಾಸಕರು ನನ್ನ ಮೇಲೆ ಆರೋಪ‌ ಮಾಡಿಲ್ಲ. ಉಸ್ತುವಾರಿ ಸುರ್ಜೇವಾಲಾ ಯಾವತ್ತೂ ಸುಳ್ಳು ಹೇಳುವುದಿಲ್ಲ. ತಪ್ಪು ಇದ್ರೆ ತಪ್ಪು ಎಂದು ಹೇಳುತ್ತಾರೆ. ಇಲಾಖೆಯಲ್ಲಿ ಚೆನ್ನಾಗಿ ಕೆಲಸ ಮಾಡಿಲ್ಲ ಅಂದ್ರೆ ನನಗೆ ಯಾಕೆ ಅವಾರ್ಡ್ ಕೊಡಬೇಕು ಎಂದು ಹೇಳುತ್ತಿದ್ರು? ಶಾಸಕರು ಮನೆ ಕೊಡಿ, ಮನೆ ಕೊಡಿ ಎನ್ನುವ ಬೇಡಿಕೆ ಇಟ್ಟಿದ್ದಾರೆ. ನಮ್ಮ ಬಳಿ ಟಾರ್ಗೆಟ್ ಇಲ್ಲ. 2 ವರ್ಷದಿಂದ ಒಂದು ಮನೆನೂ ಕೊಟ್ಟಿಲ್ಲ ಎಂದು ಸಚಿವ ಜಮೀರ್‌ ಅಹ್ಮದ್‌ ಖಾನ್‌ ಹೇಳಿದ್ದಾರೆ.

ಇನ್ನೂ ಕಳೆದ 2013 ರಿಂದ 18 ರವರೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆ ಮನೆ ಹಂಚಿಕೆಮಾಡಿದ್ದರು. ಆಗ ಬಿಟ್ಟರೆ ಮತ್ತೆ ಮನೆಗಳ ಹಂಚಿಕೆ ಆಗಿಲ್ಲ. ಅದಾದ ಬಳಿಕ ಸಮಿಶ್ರ ಸರ್ಕಾರ‌ ಆಗಲಿ, ಬಿಜೆಪಿ ಸರ್ಕಾರ ಆಗಲಿ ಒಂದು ಮನೆನೂ ಕೊಟ್ಟಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಕಳೆದ 2 ವರ್ಷದಿಂದ ನಾವು ಯಾವುದೇ ಮನೆಗಳ ಹಂಚಿಕೆ ಮಾಡಿಲ್ಲ. ಮೊದಲು ಆರಂಭಿಸಿರುವ ಮನೆಗಳ ಕಾಮಗಾರಿ ಪೂರ್ಣ ಮಾಡಿ, ಬಳಿಕ ಮುಂದಿನ ವರ್ಷ ಹೊಸ‌ ಮನೆಗಳನ್ನು ವಿತರಣೆ ಮಾಡುವುದಾಗಿ ಸಿಎಂ ಅವರು ಹೇಳಿದ್ದಾರೆ. ಮನೆ ನಿರ್ಮಾಣಕ್ಕೆ 1,20 ಲಕ್ಷ ರೂಪಾಯಿ ಸಾಲುವುದಿಲ್ಲ. ಹೀಗಾಗಿ ಅದರ ಮೊತ್ತವನ್ನು ಮೂರೂವರೆ ಲಕ್ಷ ರೂಪಾಯಿಗೆ ಹೆಚ್ಚಳ ಮಾಡಲು ಅವರು ಮುಂದಾಗಿದ್ದಾರೆ. ನನ್ನ ಅವಧಿಯಲ್ಲಿ ಕ್ಯಾನ್ಸಲ್ ಆದ 60 ಸಾವಿರ ಮನೆಗಳನ್ನು ಮಾತ್ರ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ವಸತಿ ಇಲಾಖೆಯಲ್ಲಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರ ಕಾರ್ಯವೈಖರಿ ಹೇಗಿದೆ? ಎನ್ನುವುದನ್ನು ಕಮೆಂಟ್‌ ಮೂಲಕ ತಿಳಿಸಿ.

- Advertisement -

Latest Posts

Don't Miss