ನಂಜನಗೂಡು ಶ್ರೀಕಂಠೇಶ್ವರ ದೇವಾಲಯದ ಹುಂಡಿ ಎಣಿಕೆ ಕಾರ್ಯ ನಡೆದಿದೆ. ದೇವಾಲಯದ ದಾಸೋಹ ಭವನದಲ್ಲಿ ಬುಧವಾರ 31 ಹುಂಡಿಗಳ ಎಣಿಕೆ ಕಾರ್ಯ ನಡೆಯಿತು. ಈ ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ಎಣಿಕೆ ಮಾಡಿದ ನಂತರ, ಸುಮಾರು 1.8 ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ ಎಂದು ವರದಿಯಾಗಿದೆ.
ಇದರಲ್ಲಿ ₹1,80,67,108 ನಗದು, 74.5 ಗ್ರಾಮ್ ಚಿನ್ನ, 1.78 ಕೆ.ಜಿ ಬೆಳ್ಳಿ, 78 ವಿದೇಶಿ ಕರೆನ್ಸಿಗಳು ದೊರೆತಿವೆ. ನಂಜನಗೂಡಿನ ಬ್ಯಾಂಕ್ ಅಫ್ ಬರೋಡ ಸಿಬ್ಬಂದಿ, ಸ್ತ್ರೀಶಕ್ತಿ ಸಂಘದ ನೂರಕ್ಕೂ ಹೆಚ್ಚಿನ ಮಹಿಳೆಯರು ಹಾಗೂ ದೇವಾಲಯದ ಸಿಬ್ಬಂದಿ ಎಣಿಕೆ ಕಾರ್ಯಕ್ಕೆ ನೆರವಾದರು ಹಾಗೂ ದೇವಾಲಯದ EO ಜಗದೀಶ್ ಕುಮಾರ್, ಧಾರ್ಮಿಕ ತಹಶೀಲ್ದಾರ್ ವಿದ್ಯುಲತಾ, ಲೆಕ್ಕಾಧಿಕಾರಿ ಗುರುಮಲ್ಲಯ್ಯ ಉಪಸ್ಥಿತರಿದ್ದರು.
ಇದೇ ರೀತಿಯಾಗಿ, ಈ ಹಿಂದೆ ನಡೆದ ಹುಂಡಿ ಎಣಿಕೆಯಲ್ಲಿ ಸುಮಾರು ₹1,50,56,223 ನಗದು ಮತ್ತು 114 ಗ್ರಾಂ ಚಿನ್ನ ಸಂಗ್ರಹವಾಗಿತ್ತು. ಇದಲ್ಲದೆ, ಕೆಲವು ವರದಿಗಳ ಪ್ರಕಾರ, ವಿಯೆಟ್ನಾಂನ 2000 ಕರೆನ್ಸಿ, ಸಿಂಗಪೂರ್‌ನ 5 ಡಾಲರ್ ಮತ್ತು ಫಿಲಿಪೈನ್‌ನ 50 ಕರೆನ್ಸಿಗಳು ಸಹ ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ

